ಭಜನೆಯೇ ನನ್ನ ಯಶಸ್ಸಿನ ಹಿಂದಿನ ರಹಸ್ಯ ಕಲ್ಲಡ್ಕದ ಆಜಾದಿ ಪರ್ವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ

ಜ: ೧೪, ಕಲ್ಲಡ್ಕದ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದ.ಕ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಡೆದ ?ಆಜಾದಿ ಪರ್ವ? ಹೆಸರಿನ ಅಂತರ್‌ಕಾಲೇಜು ಫೆಸ್ಟ್‌ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲರ್ಸ್ ಕನ್ನಡ “ಎದೆ ತುಂಬಿ ಹಾಡುವೆನು “ಖ್ಯಾತಿಯ ಶ್ರೀ ಸಂದೇಶ್ ನೀರುಮಾರ್ಗ ಮಾತನಾಡುತ್ತಾ, ?ಬಾಲ್ಯದಿಂದಲೂ ಭಜನೆಯಲ್ಲಿ ಅತೀವ ಆಸಕ್ತಿ ಇದ್ದ ನನಗೆ ಇಂದು ಅದುವೇ ಮೆಟ್ಟಿಲಾಗಿ ಎತ್ತರಕ್ಕೆ ಕರೆದೊಯ್ದಿದೆ. ಎಸ್. ಪಿ. ಬಾಲಸುಬ್ರಹ್ಮಣ್ಯರಂತಹ ಶ್ರೇಷ್ಟ ಗಾಯಕರು ರಚಿಸಿದ ವೇದಿಕೆಯಲ್ಲಿ ಹಾಡುವ ಗೌರವ ಸಿಕ್ಕಿರುವುದಕ್ಕೆ ಸಂತಸವಿದೆ. ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿಗೆ ಈ ಹಿಂದೆ ಅಂತರ್ ಕಾಲೇಜು ಭಜನಾ ಸ್ಪರ್ಧೆಗೆ ಸ್ಪರ್ಧಾಳುವಾಗಿ ಭಾಗವಹಿಸಿದ್ದ ನಾನು ಇಂದು ಈ ವೇದಿಕೆಗೆ ಬರಲು ಅವಕಾಶವಾದ ಬಗ್ಗೆ ಹೆಮ್ಮೆಯಿದೆ. ಇದು ಭಾರತೀಯ ಸಂಸ್ಕೃತಿಯ ಪ್ರತಿಬಿಂಬವೇ ಆಗಿದೆ. ಇಲ್ಲಿನ ವಾತಾವರಣದಲ್ಲಿ ದೇವಾಲಯವನ್ನು ಕಂಡಿದ್ದೇನೆ. ಶಿಕ್ಷಣ ಪದ್ದತಿಯಲ್ಲಿ ಭಾರತವನ್ನು ನೋಡಿದ್ದೇನೆ? ಎಂದು ಸಮಾರೋಪ ಭಾಷಣದಲ್ಲಿ ನುಡಿದರು.
ದ.ಕ. ಜಿಲ್ಲೆಯ ೧೮ ಪ.ಪೂ. ಕಾಲೇಜುಗಳಿಂದ ೪೨೪ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನಿನಾದ (ದೇಶಭಕ್ತಿಗೀತೆ), ಅವತರಣಿಕ(ಜಾಹೀರಾತು ಪ್ರದರ್ಶನ) ನಿಮಿಷ(ಒಂದು ನಿಮಿಷದ ಆಟಗಳು) ಮಣಿಕರ್ಣೀಕ (ಐಸ್ ಬ್ರೇಕರ್) ಪ್ರತಾಪ (ಕ್ರೀಡೆ) ಸುಜ್ಞಾನ ಸುಧಾ(ರಸಪ್ರಶ್ನೆ) ಆಕೃತಿ(ಮಣ್ಣಿನ ಮಾದರಿ), ಅಗ್ರೇಸರ(ಪೋಸ್ಟರ್ ತಯಾರಿ) ಸುದರ್ಶನ (ಫೋಟೋ ಎಡಿಟಿಂಗ್) ಮಯೂರಿ ಹೀಗೆ ಒಟ್ಟು ೧೦ ವಿವಿಧ ಸ್ಪರ್ಧೆಗಳು ನಡೆದಿದ್ದು ವಿಜೇತ ತಂಡಕ್ಕೆ ರೂ. ೩೦೦೦, ೨೦೦೦, ೧೫೦೦ರಂತೆ ನಗದು ಪುರಸ್ಕಾರ, ಪ್ರಮಾಣಪತ್ರ, ಟ್ರೋಫಿಯನ್ನು ನೀಡಿ ಪುರಸ್ಕರಿಸಲಾಯಿತು.ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದರೆ, ಉಪ್ಪಿನಂಗಡಿ ಇಂದ್ರಪ್ರಸ್ಥ ಪ.ಪೂ. ಕಾಲೇಜು ರನ್ನರ್‌ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಶ್ರೀರಾಮ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸಂತೋಷ್ ಬೇಂಕ್ಯ, ವಿದ್ಯಾಶ್ರೀ ಬೋಳಂತೂರು ಇವರುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ಜೊತೆಗೆ ಸಂದೇಶ್ ನೀರುಮಾರ್ಗ ಅವರಿಂದಲೂ ಅನೇಕ ಗೀತೆಗಳು ಹಾಡಲ್ಪಟ್ಟಿತು. ನಮ್ಮ ಕಾಲೇಜಿನ ಸಂಸ್ಥಾಪಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ. ಈ ಸಂದರ್ಭದಲ್ಲಿ ಸಂಚಾಲಕ ವಸಂತ ಮಾಧವ, ಡಾ| ಕಮಲಾ ಪ್ರಭಾಕರ ಭಟ್ ಇವರು ಪ್ರಶಸ್ತಿ ವಿತರಿಸಿದರು .ಉಪನ್ಯಾಸಕಿ ಸಂಧ್ಯಾ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿ , ಸುಬ್ರಹ್ಮಣ್ಯ ಹಾಗೂ ರಂಜಿತ್ ನಿರೂಪಿಸಿದರು.

Leave a Reply