ರಕ್ಷಾಬಂಧನ

ದಿನಾಂಕ 27.08.2018ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.
“ಒಂದೊಂದು ಹಬ್ಬವು ಒಂದೊಂದು ಸಂದೇಶವನ್ನು ನೀಡುತ್ತದೆ, ಮನುಷ್ಯರು ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಾ ನಾನು ನಿನ್ನನ್ನು – ನೀನು ನನ್ನನ್ನು ರಕ್ಷಿಸುವುದರ ಮೂಲಕ ಒಬ್ಬರನ್ನೊಬ್ಬರು ರಕ್ಷಿಸುತ್ತಾ, ಜೊತೆಯಲ್ಲಿ ದೇಶವನ್ನು ಕೂಡ ರಕ್ಷಿಸುವ” ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಆಶಿಸಿದರು.
“ಸಾಮೂಹಿಕವಾಗಿ ರಕ್ಷೆಯನ್ನು ಕಟ್ಟಿ ನಾವೆಲ್ಲರೂ ಒಂದಾಗಿ ಪರಸ್ಪರ ರಕ್ಷಣೆ ಹಾಗೂ ರಾಷ್ಟ್ರದ ರಕ್ಷಣೆಗೆ ಪಣತೊಡೋಣ” ಎಂದು ಪುಷ್ಪರಾಜ ಆಸ್ಪತ್ರೆಯ ವೈದ್ಯರಾದ ರಾಜೀವ್ ಶೆಟ್ಟಿ ಹಾರೈಸಿದರು.
ಪ್ರತಿ ವರುಷವೂ ವಿಶೇಷ ಹಾಗೂ ವಿಭಿನ್ನವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ವಿಶೇಷ ಅತಿಥಿಗಳನ್ನು ಆಹ್ವಾನಿಸಿ ನಡೆಸುತಿದ್ದು, ಈ ವರುಷವೂ ಕೂಡ ರಕ್ಷಾಬಂಧನ ಕಾರ್ಯಕ್ರಮಕ್ಕೆ ಕಲ್ಲಡ್ಕ ಪರಿಸರದ ವೈದ್ಯರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳು ಸಾಂಕೇತಿಕವಾಗಿ ಹೂಗುಚ್ಛವನ್ನು ನೀಡುವ ಮೂಲಕ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ 23.8.2018 ರಂದು ನಡೆದ ಜ್ಞಾನ- ವಿಜ್ಞಾನ ಮೇಳದಲ್ಲಿ ವಿಜೇತರಾದವರಿಗೆ ಹಾಗೂ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜೇತರಾದವರಿಗೆ, 13.08.2018 ರಂದು ನಡೆದ ವಲಯ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಅತಿಥಿಗಳಿಂದ ಪ್ರಶಸ್ತಿಗಳನ್ನು ನೀಡಲಾುತು.
ವೇದಿಕೆಯಲ್ಲಿ ಪುಷ್ಪರಾಜ ಆಸ್ಪತ್ರೆಯ ಡಾ||ರಾಜೀವ್ ಶೆಟ್ಟಿ, ಚೇತನಾ ಕ್ಲಿನಿಕ್‌ನ ಡಾ|| ಚಂದ್ರಶೇಖರ್, ಭಾರತ ಸರಕಾರದ ಕಾರ್ಮಿಕ ಇಲಾಖೆಯ ವೈದ್ಯೆಯಾದ ಡಾ|| ಸುಮತಿ ಹಾಗೂ ಪತಿ ಡಾ|| ವೆಂಕಟರಮಣ ಭಟ್ ಕರ್ಮಾಜೆ, ಆಯುರ್ವೇದ ವೈದ್ಯರಾದ ಡಾ|| ರವಿಕಿರಣ್, ಕೃಷ್ಣ ಕ್ಲಿನಿಕ್‌ನ ವೈದ್ಯರಾದ ಡಾ|| ಮನೋಜ್ ಮತ್ತು ಡಾ|| ಕಮಲಾ ಪ್ರಭಾಕರ್ ಭಟ್ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದಶೇಖರ್ ಸಾಲಿಯಾನ್ ಮತ್ತು ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿರಿದ್ದರು.
ಕಾರ್ಯಕ್ರಮವನ್ನು ಪೇಮಾ ಮಾತಾಜಿ ನಿರೂಪಿಸಿ, ಶಾಲಾಭಿವೃದ್ಧಿ ಸಮಿತಿಯ ಕೋಶಾಧಿಕಾರಿಯಾದ ಶಿವಗಿರಿ ಸತೀಶ್ ಭಟ್ ಸ್ವಾಗತಿಸಿ, ವೇದಾವತಿ ಮಾತಾಜಿ ವಂದಿಸಿದರು.
photo:    http://srvk.org/rakshabandhana-programme/

Leave a Reply