ಲಾಕ್ ಡೌನ್ ಸಂದರ್ಭದಲ್ಲಿ ಸೇವಾ ಚಟುವಟಿಕೆ

ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ, ಆಂಗ್ಲ ಮಾಧ್ಯಮವೇ ಶ್ರೇಷ್ಠ ಎಂಬ ಮನೋಭಾವ, ಹೊರಲಾರದಷ್ಟು ಪುಸ್ತಕಗಳು, ಹೋಂವರ್ಕ್ ಹೊರೆ, ಅಂಕಗಳಿಕೆಗಾಗಿ ನಾಗಲೋಟ ಇದು ಇಂದಿನ ಸಾಮಾನ್ಯ ದೃಶ್ಯ
*ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣ ಸಂಸ್ಥೆ. ಇಲ್ಲಿನ ಶಿಕ್ಷಣದಲ್ಲಿ ಭಾರತೀಯತೆ ಇದೆ. ವ್ಯಕ್ತಿತ್ವ ವಿಕಾಸಕ್ಕಾಗಿ ನಡವಳಿಕೆಯ ಸತ್ಸಂಸ್ಕಾರವಿದೆ. ಜೀವನ ಮೌಲ್ಯವಿದೆ. ಆಧ್ಯಾತ್ಮಿಕ ಚಿಂತನೆ ಇದೆ. ಸೃಜನಶೀಲತೆ ಇದೆ. ಪ್ರತಿಭೆಗೆ ಪ್ರೋತ್ಸಾಹವಿದೆ. ಸಮಾಜ ಸೇವೆ ಇದೆ. ದೇಶಭಕ್ತ ವ್ಯಕ್ತಿಗಳ ನಿರ್ಮಾಣ ಕಾರ್ಯ ನಿರಂತರವಾಗಿದೆ……………..*

ಯಾ ವಿದ್ಯಾ ಸಾ ವಿಮುಕ್ತಯೇ*

ಮಹಾಮಾರಿ ?ಕೊರೋನಾ? ಜನರನ್ನು ತಲ್ಲಣಗೊಳಿಸಿತು. ಜನಜೀವನವನ್ನು ಅಸ್ಥಿರಗೊಳಿಸಿತು. ದೇಶ ಲಾಕ್ಡೌನ್ ಆಯಿತು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರವು ಎಲ್ಲರಿಗೂ ಸಾಂತ್ವನ ಹೇಳಿ, ಧೈರ್ಯ ತುಂಬಿ, ಅವರ ಅವಶ್ಯಕತೆಗಳನ್ನು ಪೂರೈಸಲು ಮಾಡಿದ ಸೇವೆ, ಶ್ಲಾಘನೀಯ, ಅನುಸರಣೀಯ.

* ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಈ ವಿದ್ಯಾಕೇಂದ್ರದ ಸಂಸ್ಥಾಪಕರಿಂದ ೬೯ ಶಿಕ್ಷಣ ಸಂಸ್ಥೆಗಳ ಈ ಕೆಳಗಿನ ಎಲ್ಲರಿಗೆ ಯೋಗಕ್ಷೇಮ ವಿಚಾರಿಸಿ ಸಾಂತ್ವನ, ಸಹಾಯದ ದೂರವಾಣಿ ಕರೆಗಳು……
ಶಿಕ್ಷಕರು,
* ಸಿಬ್ಬಂದಿಗಳು,
*ಸ್ವಚ್ಛತಾ ಕೆಲಸಗಾರರು,
*ಕಾವಲುಗಾರರು,
*ಆಯಾಗಳು,
*ಪೋಷಕರು,
*ವಿದ್ಯಾರ್ಥಿಗಳು,
*ವಾಹನಗಳ ಚಾಲಕರು,
*…. ಮೊದಲಾದವರು.
* ಮಾರ್ಚ್ ೨೫ ರಿಂದ ಮೇ ೧೦ ರ ವರೆಗೆ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ವತಿಯಿಂದ ನೀಡಿದ ಸಹಾಯಹಸ್ತ.

ಆಹಾರದ ಕಿಟ್ …..1621
ಹಾಲಿನ ಪುಡಿ…….. 1650 ಕೇಜಿ
ಬೇಳೆ………… 1650  ಕೇಜಿ
ಸಜ್ಜಿಗೆ ರವೆ….. 250 ಕೇಜಿ
ತೆಂಗಿನೆಣ್ಣೆ…….. 320 ಲೀಟರ್
ಆಲೂಗಡ್ಡೆ…. 1600 ಕೇಜಿ
ಬೆಲ್ಲ…….. 1400 ಕೇಜಿ
ಸಕ್ಕರೆ……. 1400 ಕೇಜಿ
ಈರುಳ್ಳಿ….. 250 ಕೇಜಿ
ತರಕಾರಿ….. 1620 ಕೇಜಿ
ಹಾಗೂ…..
*35 ಜನರಿಗೆ ಆರೋಗ್ಯ ಸೇವೆ*

* ಈ ಸಂಸ್ಥೆಯಲ್ಲಿ ಶಿಕ್ಷಣ ನೀಡುತ್ತಿರುವ ಶಿಕ್ಷಕರು, ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು, ಹಿರಿಯರು, ಪೋಷಕರು, ಮಾತೃಭಾರತಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಪುನಃ ನೀಡಿದ ಸೇವೆ…..

31031 ಕೇಜಿ ಅಕ್ಕಿ,
4012 ತೆಂಗಿನಕಾಯಿ,
2162 ಕೇಜಿ ತರಕಾರಿ,
2364 ಕೇಜಿ ದವಸದಾನ್ಯ,

  • ಹಾಗೂ ಜೋಳ, ರಾಗಿ, ಗ್ಯಾಸ್ ಸಿಲಿಂಡರ್, ಇತ್ಯಾದಿ ವಸ್ತುರೂಪದ ಸಹಾಯ.

ಅಲ್ಲದೆ……

*19570 ರೂಪಾಯಿ ಮೌಲ್ಯದ ಔಷಧಿಗಳು ಮತ್ತು೧೦೫೪೪ ಮಾಸ್ಕ್ ಗಳು*

*2,81,000 ರೂಪಾಯಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಪರಿಹಾರ ನಿಧಿಗೆ.*

*3626000 ರೂಪಾಯಿ ಆರ್ಥಿಕ ಸಹಾಯ.*

* ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದಿಂದ ಪ್ರೇರಣೆ ಪಡೆದು ಸುತ್ತಮುತ್ತಲಿನ ಮಂದಿರ, ಯುವಕ ಮಂಡಲ, ಮತ್ತಿತರ ಸಂಘ ಸಂಸ್ಥೆಗಳೂ ಸೇವೆಯಲ್ಲಿ ತೊಡಗಿಕೊಂಡವು.

* ಕರ್ತವ್ಯ ನಿರ್ವಹಿಸುತ್ತಿರುವ ಪೋಲೀಸರಿಗೆ ವಿದ್ಯಾಸಂಸ್ಥೆಯ ಪಾಕಶಾಲೆಯಲ್ಲಿ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪಕ್ಕದ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ವ್ಯವಸ್ಥೆ ಇತ್ತು. ಅಲ್ಲಿಗೂ ಊಟ ಉಪಾಹಾರವನ್ನು ಈ ಸಂಸ್ಥೆಯಿಂದಲೇ ಕಳಿಸಲಾಗುತ್ತಿತ್ತು.

*ಆನ್ಲೈನ್ ಮೂಲಕ ನಡೆದ ಹಲವು ಕಾರ್ಯಕ್ರಮಗಳಲ್ಲಿ ಕೆಲವು ಇಲ್ಲಿದೆ.*

*ರಾಷ್ಟ್ರೀಯ ಸೇವಾ ಯೋಜನೆಯ ಕೋವಿಡ್-೧೯ ಜಾಗೃತಿ.
*ಸ್ಫರ್ಧಾತ್ಮಕ ಪರೀಕ್ಷೆ ತಯಾರಿ.
*ವಿಜ್ಞಾನ ಸಂಘದಿಂದ ಬ್ರೇವಿಂಗ್ ಚಾಲೆಂಜಸ್ ಆಫ್ ಲಾಕ್ಡೌನ್.
*ವಾಣಿಜ್ಯ ಸಂಘದಿಂದ ಟೆಕ್ನಾಲಜಿ ಎಂಡ್ ಸೆಲ್ಫ್ ಡೆವೆಲಪ್ಮೆಂಟ್.
*ಸಾಹಿತ್ಯಾಸಕ್ತರಿಗೆ *ಓದು ಮತ್ತು ಬರವಣಿಗೆ* ಆನ್ಲೈನ್ ಕಾರ್ಯಾಗಾರ.
*ಸಾಫ್ಟ್ ಸ್ಕಿಲ್ಸ್ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್.. ೮ ದಿನ.

*ಅನುಭವ ಮಾಲಾ*

*ಘಟನೆ 1*
* ಆಹಾರ ಪದಾರ್ಥಗಳನ್ನು ವಿತರಿಸುವ ಸಂದರ್ಭದಲ್ಲಿ ಕೆಲಿಂಜದಲ್ಲಿರುವ ನಮ್ಮ ವಿದ್ಯಾರ್ಥಿಯ ಮನೆಗೆ ಹೋದೆವು. ಆ ಮನೆಗೆ ಕೊಟ್ಟು ಹೊರಡುವಷ್ಟರಲ್ಲಿ ಪಕ್ಕದ ಮನೆಯವರು ನನಗೂ ಕೊಡಿ ಎಂದು ಕೇಳಿದರು. ಆಗ ನಿನಗೇನು ತೊಂದರೆ ಎಂದಾಗ……. “ಕೆಲಸಕ್ಕೆ ಹೋಗದೆ ಒಂದು ವಾರ ಆಯಿತು. ಬೀಡಿಕಟ್ಟಲು ಗೊತ್ತಿಲ್ಲ. ಬೇರೆ ಕೆಲಸ ಇಲ್ಲ. ಕೈಯಲ್ಲಿ ಹಣವಿಲ್ಲ. ಎರಡು ದಿವಸಗಳಿಂದ ಮನೆಯಲ್ಲಿ ಯಾರೂ ಊಟ ಮಾಡಿಲ್ಲ. ಹಸಿವಿಗಾಗಿ ಹಲಸಿನ ಗುಜ್ಜೆಯನ್ನು ಬೇಯಿಸಿ ತಿನ್ನುತ್ತಿದ್ದೇವೆ. ನೀವು ಕೊಟ್ಟರೆ ದೇವರ ಪ್ರಸಾದ ಎಂದು ಸ್ವೀಕರಿಸುತ್ತೇವೆ” ಎಂದರು. ಅವರಿಗೂ ಕೊಟ್ಟೆವು. ನಮ್ಮ ಕೆಲಸ ಸಾರ್ಥಕ ಎನಿಸಿತು.

*ಮಾನವ ಸೇವೆಯೇ ಮಾಧವ ಸೇವೆ*

*ಘಟನೆ 2*
* ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಣ ಪಡೆಯುತ್ತಿರುವ ೨ ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮನೆಗೆ ಹೋಗಿ ಕಿಟ್ ಕೊಟ್ಟೆವು. ಆಗ ಆಕೆ………
“ಇಲ್ಲೆ ಸ್ವಲ್ಪ ದೂರದಲ್ಲಿ ಒಂದು ಮನೆ ಇದೆ. ಅಲ್ಲಿಗೂ ಹೋಗಬೇಕು. ಅವರಿಗೂ ಕಿಟ್ ಕೊಡಬೇಕು ಶ್ರೀಮಾನ್.” ಎಂದಳು. ಅಲ್ಲಿಂದ ಸುಮಾರು ಮೂರು ಫರ್ಲಾಂಗ್ ದೂರ. ತಗ್ಗು ಪ್ರದೇಶದಲ್ಲಿ ಮನೆ. ಈತನಕ ಅವರ ಕಷ್ಟ ವಿಚಾರಿಸಿ ಸಹಾಯ ಮಾಡಲು ಯಾರೂ ಹೋಗಿರಲಿಲ್ಲ. ಆ ಮನೆಯಲ್ಲಿ ಕೇವಲ ಇಬ್ಬರು ಮಾತ್ರ ಇದ್ದರು. ಒಬ್ಬರು ಅಜ್ಜ, ಮತ್ತೊಬ್ಬರು ಅಜ್ಜಿ. ಅವರಿಗೆ ಬೇರೆ ಯಾರೂ ಇರಲಿಲ್ಲ. ಹೋದವರ ಮನ ಕಲಕಿತು. ಕಿಟ್ ಕೊಟ್ಟು ಆರೋಗ್ಯ ವಿಚಾರಿಸಿ ಮರಳಿದೆವು.

*ಇದು ನಮ್ಮ ಶಾಲೆಯ ಶಿಕ್ಷಣದಿಂದ ಆ ಪುಟ್ಟ ಮಗುವಿನಲ್ಲಿ ಉಂಟಾದ ಸೇವಾ ಭಾವದ ಜಾಗೃತಿ. ನಮ್ಮ ಶಿಕ್ಷಣ ಸಾರ್ಥಕ. ಇನ್ನಷ್ಟು ಕೆಲಸ ಮಾಡಲು ನಮಗಿದು ಪ್ರೇರಣೆ.*

ಘಟನೆ..3
* “ಇನ್ಫೋಸಿಸ್ ಸಂಸ್ಥೆಯವರು ಆಹಾರದ ಕಿಟ್ ಕೊಡಲು ನಮ್ಮ ಜೊತೆ ಬಂದಿದ್ದರು. ಯಾರಿಗೆ ಕೊಡಬೇಕು ಯಾರಿಗೆ ಅಗತ್ಯವಿಲ್ಲ ಎಂಬ ಮಾಹಿತಿ ಅವರಲ್ಲಿರಲಿಲ್ಲ. ಹಾಗಾಗಿ ಎಲ್ಲರಿಗೂ ಕೊಡುತ್ತಿದ್ದರು. ನಾವು ಹಲವಾರು ಅರ್ಹ ಬಡವರ ಮನೆಗಳಿಗೆ ಕರೆದೊಯ್ದೆವು. ಹೋಗಲು ಸರಿಯಾದ ರಸ್ತೆ ಇಲ್ಲ. ಹುಲ್ಲಿನ ಮಾಡು, ಮಣ್ಣಿನ ಗೋಡೆ, ಸರಿಯಾದ ಕಿಟಕಿ, ಬಾಗಿಲು ಇಲ್ಲದ ಮನೆಗಳು. ಇದನ್ನೆಲ್ಲಾ ನೋಡಿ ದಂಗಾದರು. ಹೀಗೂ ಇದೆಯೇ ನಮ್ಮ ದೇಶದ ಬಡವರ ಮನೆಗಳು ಎಂಬ ಉದ್ಗಾರ ಅವರಿಂದ….!”

ಘಟನೆ 4
* ರಾಜಕೀಯ ಧುರೀಣರೊಬ್ಬರು ನಮ್ಮ ಶಾಲೆಯ ಮಗುವಿನ ಮನೆಗೆ ಕಿಟ್ ಕೊಡಲು ಹೋದರು. ಕಿಟ್ ಕೊಡುವ ಮೊದಲೇ ಶ್ರೀರಾಮ ವಿದ್ಯಾಕೇಂದ್ರದಿಂದ ತೆಗೆದು ಮಗುವನ್ನು ನಮ್ಮ ಶಾಲೆಗೆ ಸೇರಿಸಿ ಎಂದರು. ಭಾವಾವೇಶಕ್ಕೆ ಒಳಗಾದ ಮಗುವಿನ ಅಮ್ಮ….. “ನೀವು ನಮಗೆ ಸಹಾಯ ಮಾಡುವ ಶುದ್ಧ ಮನಸ್ಸಿನಿಂದ ಬಂದಿದ್ದರೆ ಕಿಟ್ ಕೊಡಿ. ಆಮಿಷ ತೋರಿಸುವುದು ಬೇಡ. ಯಾವ ಶಾಲೆಗೆ ಮಗುವನ್ನು ಕಳಿಸಬೇಕೆಂದು ನಮಗೆ ಗೊತ್ತು. ನಮ್ಮ ಮಗುವನ್ನು ಇಷ್ಟು ಒಳ್ಳೆಯ ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ನಿಮ್ಮ ಈ ಕಿಟ್ ಆಸೆಗೋಸ್ಕರ ಕಳಿಸಲಾರೆವು……” ಎನ್ನಬೇಕೇ ?

*ನಮ್ಮ ಶಾಲೆಯ ಮೇಲಿನ ಶ್ರದ್ಧೆ ಮತ್ತು ನಂಬಿಕೆ ನಮಗೆ ಶ್ರೀರಕ್ಷೆ.*

* ಕೆಲವು ವಿದ್ಯಾರ್ಥಿಗಳ ಮನೆಗೆ ಹೋದಾಗ ನಮಗೆ ಕಿಟ್ ಬಂದಿದೆ. ಇದನ್ನು ನೀವು ಬೇರೆ ಯಾರಿಗಾದರೂ ಕೊಡಿ ಎಂದು ಹಿಂತಿರುಗಿಸಿದವರೂ ಇದ್ದಾರೆ…..

*ತನ್ನಂತೆ ಪರರ ಬಗೆದೊಡೆ ಕೈಲಾಸ….*

Leave a Reply