ವರಮಹಾಲಕ್ಷ್ಮೀ ಪೂಜೆ

ದಿನಾಂಕ24.08.2018 ಶುಕ್ರವಾರದಂದು ಶ್ರೀರಾಮ ಶಿಶುಮಂದಿರದ ವತಿಯಿಂದ ವಿವಿಧೆಡೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು

.

ಮುಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀ ಮಾತಾನಂದಮು ಸ್ವಾಮಿನಿಯವರು ಆಗಮಿಸಿ ಪೂಜೆಯ ಮಹತ್ವ ತಿಳಿಸಿ ಆರ್ಶೀವಚನ ಮಾಡಿದರು. 44 ಮಂದಿ ವೃತಧಾರಿಗಳಾಗಿದ್ದು, ಒಟ್ಟು 350 ಸಂಖ್ಯೆ ಭಾಗವಹಿಸಿದ್ದರು.
ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲಿ 67 ವೃತಧಾರಿಗಳಾಗಿದ್ದು, 400ಕ್ಕೂ ಹೆಚ್ಚು ಸಂಖ್ಯೆ  ಭಾಗವಹಿಸಿದ್ದರು. ಶ್ರೀ ಯತಿರಾಜ್ ಶ್ರೀಮಾನ್ ಶ್ರೀರಾಮ ಪದವಿ ಕಾಲೇಜಿನ ಉಪನ್ಯಾಸಕರು ಪೂಜೆಯ ಮಹತ್ವ ತಿಳಿಸಿಕೊಟ್ಟರು.

ಕಶೆಕೋಡಿ ಕಲಾಶ್ರಯದಲ್ಲಿ ಮಾತೃಮಂಡಳಿಯವರ ನೇತೃತ್ವದಲ್ಲಿ ನಡೆಸಲ್ಪಟ್ಟ ಪೂಜೆಯಲ್ಲಿ 26 ವೃತಧಾರಿಗಳು ಹಾಗೂ 100 ಜನ ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀರಾಮ ಪದವಿ ವಿದ್ಯಾಲಯದ ಪ್ರಾಂಶುಪಾಲರು ಶ್ರೀ ಕೃಷ್ಣಪ್ರಸಾದ್ ಪೂಜೆಯ ಮಹತ್ವ ತಿಳಿಸಿದರು.

ಶಂಭೂರು ಶ್ರೀ ರಾಮಾಂಜನೇಯ ವ್ಯಾಯಮ ಶಾಲೆಯಲ್ಲಿ ನಡೆದ ಪೂಜೆಯಲ್ಲಿ 50ವೃತಧಾರಿಗಳಾಗಿದ್ದು, 400 ಜನ ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರೀರಾಮ ಪ್ರೌಡಶಾಲಾ ಶಿಕ್ಷಕಿಯವರಾದ ಶ್ರೀಮತಿ ಗಾಯತ್ರಿ ಮಾತಾಜಿ ವರಮಹಾಲಕ್ಷ್ಮೀ ಪೂಜೆಯ ಮಹತ್ವದ ಬಗ್ಗೆ ಮಾತನಾಡಿದರು.

Leave a Reply