ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಹಾಗೂ ರಕ್ಷಾಬಂಧನ


ದಿನಾಂಕ 27.8.2018
ಮನುಷ್ಯ ಹೇಗೆ ಬದುಕಬೇಕು, ಹಾಗೂ ಬದುಕಲು ಬೇಕಾದ ವಿಷಯವನ್ನು ವೇದದಲ್ಲಿ ನೀಡಲಾಗಿದೆ. ಜೀವನದಲ್ಲಿ ಯಾವುದೇ ಜ್ಞಾನ ಪಡೆಯಬೇಕಾದರೆ ಸಂಸ್ಕೃತದಿಂದ ಮಾತ್ರ ಸಾಧ್ಯ. ಸಂಸ್ಕೃತೋತ್ಸವ ಕಾರ್ಯಕ್ರಮ ಸಂಸ್ಕೃತ ಅರಿಯದಿರುವವರಿಗೆ, ಅರಿತುಕೊಳ್ಳಲು ಪ್ರೇರಣೆಯಾಗಲಿ ಎಂದು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರು ಶ್ರೀರಾಮ ಪ್ರೌಢಶಾಲಾ ಸಂಸ್ಕೃತೋತ್ಸವದ ಕುರಿತು ಮಾತನಾಡಿದರು.
ರಕ್ಷಾ ಬಂಧನ : ಜಾತಿ, ಭಾಷೆ, ಮತ, ಸಂಪ್ರದಾಯ, ವರ್ಣ ಹೇಗೆ ನೂರಾರು ರೀತಿಯ ಜನಾಂಗದವರು ಒಂದೇ ಎಂಬ ಜಾಗೃತಿ ಮೂಡಿಸಿ ಸಹೋದರತ್ವ, ಭ್ರಾತೃತ್ವ, ಐಕ್ಯತೆ, ದೇಶಪ್ರೇಮ, ಅಣ್ಣ-ತಂಗಿ ವಾತ್ಸಲ್ಯದ ಸಂಕೇತವೇ ರಕ್ಷಾಬಂಧನ. ಈ ಕಾರ್ಯಕ್ರಮದ ಮುಖಾಂತರ ದೇಶವನ್ನು ಒಗ್ಗೂಡಿಸಿ ರಾಷ್ಟ್ರವನ್ನು ಕಟ್ಟಬೇಕು ಎಂದು ಡಾ|| ಎಚ್.ಸಿ ಕಾಸರಗೋಡ್ ಅಶೋಕ್‌ರವರು ರಕ್ಷಾಬಂಧನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

2017-18ನೇ ಸಾಲಿನಲ್ಲಿ 125 ರಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ‘ಅಮೃತ ಪ್ರಕಾಶ’ ಕನ್ನಡ ಮಾಸಿಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿಯಾದ ಮಾಲತಿ ಶೆಟ್ಟಿ, ಗಾಯತ್ರಿ ಕಾಮತ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಾಲಕರಾದ ಶ್ರೀ ರಮೇಶ ಎನ್, ಮುಖ್ಯಶಿಕ್ಷಕಿ ವಸಂತಿಕುಮಾರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಕೃತೋತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅರ್ಚನಾ 10ನೇ ಸ್ವಾಗತಿಸಿ, ವೈಷ್ಣವಿ 10ನೇ ತರಗತಿ ವಂದಿಸಿ, ಪ್ರತೀಕಾ ಎಸ್ 10ನೇ ತರಗತಿ ನಿರೂಪಿಸಿದಳು.

photo:    http://srvk.org/rakshabandhana-programme/

Leave a Reply