ಸವಿರುಚಿ

ಶ್ರೀರಾಮ ಹಿರಿಯ ಪ್ರಾಥ”ುಕ ಶಾಲೆಯಲ್ಲಿ ದಿನಾಂಕ ೨೩/೦೭/೨೦೧೮ ಸೋಮವಾರ ಪೂರ್ವಗುರುಕುಲದ ೧ನೇ ತರಗತಿ ಮಕ್ಕಳಿಗೆ “ಸವಿರುಚಿ” ಎಂಬ ಪಾಠದ ಪ್ರಾತ್ಯಕ್ಷಿತಾ ಚಟುವಟಿಕೆ ಮತ್ತು ಸಹಭೋಜನ ಕಾರ್ಯಕ್ರಮ ನಡೆುತು.
ಒಂದನೆ ತರಗತಿಯ ಆರು ವಿಭಾಗದ ವಿದ್ಯಾರ್ಥಿಗಳಿಂದ ಪತ್ರೊಡೆ, ನೀರು ದೋಸೆ, ಒಂದೆಲಗ ಮತ್ತು ಕೊತ್ತಂಬರಿ ಸೊಪ್ಪಿನ ಚಟ್ನಿ ತರಿಸಲಾುತು. ವಿದ್ಯಾರ್ಥಿಗಳು ತಂದ ತಿಂಡಿಯನ್ನು ಒಟ್ಟು ಸೇರಿಸಿ ಆ ತಿಂಡಿಯನ್ನು ತಯಾರಿಸುವ ವಿಧಾನ ಮತ್ತು. ತಿಂಡಿ ತಯಾರಿಸಲು ಬಳಸಿರುವ ಆಹಾರ ವಸ್ತುಗಳ ಪರಿಚಯವನ್ನು ಮಾಡಲಾುತು.
ವಿದ್ಯಾಕೇಂದ್ರದ ಹಿರಿಯರು, ಮಾರ್ಗದರ್ಶಕರಾದಂತಹ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಒಂದನೇ ತರಗತಿಯ ೧೭೩ ಮಕ್ಕಳಿಗೂ ತಮ್ಮ ಕೈಯಾರೆ ತಿಂಡಿಯನ್ನು ಬಡಿಸಿದರು. ಮಕ್ಕಳು ಆನಂದದಿಂದ ಎಲ್ಲಾ ತಿಂಡಿಗಳ ರುಚಿಯನ್ನು ಸ”ದರು.
ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಡಾ| ಕಮಲಾ ಪ್ರಭಾಕರ ಭಟ್ , ಪೂರ್ವಗುರುಕುಲದ ಮಾರ್ಗದರ್ಶಕರಾದ ಭಗಿನಿ ಗಂಗಾ ಮಾತಾಜಿ, ಪ್ರಾಥ”ುಕ ವಿಭಾಗದ ಮುಖೋಪಾಧ್ಯಾಯರಾದ ಶ್ರೀರವಿರಾಜ್ ಕಣಂತೂರು ಚಟುಟಿಕೆಯಲ್ಲಿ ಮಾರ್ಗದರ್ಶನ ಮಾಡಿ ಮಕ್ಕಳೊಂದಿಗೆ ಸಹಭೋಜನ ಮಾಡಿದರು. ಹಾಗೂ ೧ನೇ ತರಗತಿಯ ಎಲ್ಲಾ ಮಾತಾಜಿಗಳು ಉಪಸ್ಥಿತರಿದ್ದರು.
  

Leave a Reply