ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ ಸ್ವಾಗತ ಕಾರ‍್ಯಕ್ರಮ

Friday, June 19th, 2015
ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ ಸ್ವಾಗತ ಕಾರ‍್ಯಕ್ರಮ

ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ-ಸ್ವಾಗತ ಕಾರ‍್ಯಕ್ರಮ 19.6.2015 ಮಧುಕರ ಸಭಾಂಗಣವನ್ನು ತಳಿರು ತೋರಣ ಹಾಗೂ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಂಭ್ರಮದಿಂದ ಬಂದ ಅತಿಥಿಗಳನ್ನು ಜೈ ಶ್ರೀರಾಮ್ ಹೇಳಿ ಸ್ವಾಗತಿಸಿದರು. ಶಾಲಾ ಪ್ರಾರ್ಥನೆಯನ್ನು ಸರಸ್ವತಿ ವಂದನೆ ನೆರವೇರಿಸಿದರು. ವೇದ ಘೋಷ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಸಾಲಾಗಿ ಬಂದು ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ಅಗ್ನಿಹೋತ್ರಕ್ಕೆ ಘೃತವನ್ನು ಸಮರ್ಪಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ವೇದಿಕೆಯಲ್ಲಿದ್ದ ಹಿರಿಯರಿಗೆ ಶಿರಬಾಗಿ ನಮಿಸಿದರು. ಆಶೀರ್ವಾದ ಪಡೆದು ತಿಲಕಧಾರಣೆ ಮಾಡಿಸಿಕೊಂಡರು. ಹೀಗೆ ಶ್ರೀರಾಮ ಪ್ರೌಢಶಾಲೆಗೆ ಹೊಸದಾಗಿ ಸೇರ್ಪಡೆಯಾದ ೩೪೨ […]

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ – ಪ್ರವೇಶೋತ್ಸವ

Thursday, June 18th, 2015
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ - ಪ್ರವೇಶೋತ್ಸವ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ೨೦೧೫-೧೬ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ ೧೮.೦೬.೨೦೧೫ ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ತಿಲಕ ಇಟ್ಟು ಆಶಿರ್ವದಿಸಿದರು. ವಿದ್ಯಾರ್ಥಿಗಳು ಅಗ್ನಿಗೆ ಘೃತಾಹುತಿ ನೀಡುವ ಮೂಲಕ ತಮ್ಮ ವಿದ್ಯಾಭ್ಯಾಸವು ಸಾಂಗವಾಗಿ ಸಾಗಲು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕೇವಲ ವಿದ್ಯೆ ಕೊಡುವುದು ಶಾಲೆಯ ಕೆಲಸವಲ್ಲ, ವಿದ್ಯೆಯ ಜೊತೆಗೆ […]

ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ – ಪ್ರವೇಶೋತ್ಸವ

Wednesday, June 17th, 2015
ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ - ಪ್ರವೇಶೋತ್ಸವ

ದಿನಾಂಕ 17.06.2015 ರಂದು ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಹೊಸದಾಗಿ ದಾಖಲುಗೊಂಡ ವಿದ್ಯಾರ್ಥಿಗಳನ್ನು ಆಗತ-ಸ್ವಾಗತದ ವಿಶಿಷ್ಟ ಕಾರ‍್ಯಕ್ರಮದ ಮೂಲಕ ಪ್ರವೇಶೋತ್ಸವ ನಡೆಯಿತು. ಯಜ್ಞಕ್ಕೆ ಘೃತವನ್ನು ಅರ್ಪಿಸಿ ವೇದಿಕೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆದು ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡರು.       ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗತ-ಸ್ವಾಗತದ ಮಹತ್ವನ್ನು ತಿಳಿಸಿದರು. ಭಾರತೀಯ ಪರಂಪರೆಯಲ್ಲಿ ವಿದ್ಯಾಭ್ಯಾಸದ ಪ್ರಕ್ರಿಯೆ ಒಂದು ವೈಜ್ಞಾನಿಕ ಸೂತ್ರದಲ್ಲಿ ನಡೆದುಕೊಂಡು ಬಂದಿದೆ. ವಿದ್ಯೆ ಸರ್ವಾಂಗೀಣ ಪ್ರಗತಿ. ಸ್ವಾರ್ಥ, ವಂಚನೆ, ಕಪಟವನ್ನು ಮೀರುವುದೇ ಇದರ ಮುಖ್ಯ […]

ವಿಶ್ವ ಯೋಗ ದಿನ – ಜೂನ್ 21

Saturday, June 13th, 2015
ವಿಶ್ವ ಯೋಗ ದಿನ - ಜೂನ್ 21

ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

Friday, June 5th, 2015
ಪ್ರೌಢಶಾಲೆಯಲ್ಲಿ  ಪರಿಸರ ದಿನಾಚರಣೆ

ದಿನಾಂಕ ೦೫.೦೬.೨೦೧೫ನೇ ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪರಿಸರ ಸಂಘದ ಉದ್ಘಾಟನೆಯನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕರಾದ ಅಬ್ರಾಜೆ ಶ್ರೀ ಸುಬ್ರಹ್ಮಣ್ಯ ಭಟ್ ಅರಸಿನ ಗಿಡ ನೆಡುವ ಮೂಲಕ ನಡೆಸಿಕೊಟ್ಟರು. ಶಾಲಾ ಕೈತೋಟದಲ್ಲಿ ಔಷಧೀಯ ಗಿಡವಾದ ಲಕ್ಷ್ಮಣಫಲ ಗಿಡವನ್ನು ನೆಟ್ಟು ಪರಿಸರ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸಿದರು. ಅಲ್ಲದೇ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಸಂತಮಾಧವ ಶ್ರೀಮಾನ್ ಸಸ್ಯಗಳು ಪರಿಸರವನ್ನು ಶುಚಿ ಮಾಡುವುದರ ಕುರಿತು ವಿದ್ಯಾರ್ಥಿಗಳಿಗೆ […]

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಪ್ರವೇಶೋತ್ಸವ ಹಾಗೂ ಹಿಂದೂ ಸಾಮ್ರಾಜ್ಯ ದಿನೋತ್ಸವದ ಕಾರ‍್ಯಕ್ರಮ-

Thursday, June 4th, 2015
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಪ್ರವೇಶೋತ್ಸವ ಹಾಗೂ ಹಿಂದೂ ಸಾಮ್ರಾಜ್ಯ ದಿನೋತ್ಸವದ ಕಾರ‍್ಯಕ್ರಮ-

ಮಹಾಪುರುಷರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಗುರುಹಿರಿಯರ ಮಾರ್ಗದರ್ಶನದಂತೆ ಮುನ್ನಡೆಯಬೇಕೆಂದು ಕಲಾ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ಹೇಳಿದರು.

ಮೌಲ್ಯಯುತ ಸಂಸ್ಕಾರಯಕ್ತ ಶಿಕ್ಷಣ-ಶ್ರೀರಾಮ ವಿದ್ಯಾಕೇಂದ್ರ

Wednesday, May 27th, 2015
ಮೌಲ್ಯಯುತ ಸಂಸ್ಕಾರಯಕ್ತ ಶಿಕ್ಷಣ-ಶ್ರೀರಾಮ ವಿದ್ಯಾಕೇಂದ್ರ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು ೧೯೮೦ರಲ್ಲಿ ಆರಂಭಗೊಂಡಿತು. ಕೇವಲ ೭೩ ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು ೩೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬಾಳ್ತಿಲ ಗ್ರಾಮದ ಹನುಮಾನ್ ನಗರದ ಪ್ರಶಾಂತ ಪರಿಸರದಲ್ಲಿ ವಿದ್ಯಾಕೇಂದ್ರವು ಶಿಶುಮಂದಿರದಿಂದ ಪದವಿ ತರಗತಿಗಳವರೆಗೆ ಪಠ್ಯದೊಂದಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಅರಳಿಸುವ ವಿವಿಧ ಚಟುವಟಿಕೆಗಳ ಮೂಲಕ ಜೀವನ ಮೌಲ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀಡುತ್ತಿದೆ. ವಿದ್ಯಾಕೇಂದ್ರವು ಶಾರೀರಿಕ, ಮಾನಸಿಕ, ಬೌದ್ಧಿಕವಾಗಿ ವಿಕಸಿತಗೊಂಡ ಯುವ ಪೀಳಿಗೆಯನ್ನು […]

puc admission

Thursday, May 21st, 2015
puc admission

sri Rama puc 98% result ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ

Monday, May 18th, 2015
sri Rama puc 98% result  ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ - ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ

  ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ ೧೦೦ ಫಲಿತಾಂಶ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ 98 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 130 ವಿದ್ಯಾರ್ಥಿಗಳ ಪೈಕಿ 13 ಜನ 90%ಕ್ಕಿಂತ ಅಧಿಕ, 15 ಜನ 85%ಕ್ಕಿಂತ ಅಧಿಕ, ಹಾಗೂ ಉಳಿದ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ […]

ರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ – ಎಸ್.ಎಸ್.ಎಲ್.ಸಿ.ಯಲ್ಲಿ 91% ಫಲಿತಾಂಶ

Monday, May 18th, 2015
ರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ  - ಎಸ್.ಎಸ್.ಎಲ್.ಸಿ.ಯಲ್ಲಿ 91% ಫಲಿತಾಂಶ

ಎಸ್.ಎಸ್.ಎಲ್.ಸಿ.ಯಲ್ಲಿ ಪರೀಕ್ಷೆಗೆ ಹಾಜರಾದ 330 ವಿದ್ಯಾಥಿಗಳಲ್ಲಿ 299 ವಿದ್ಯಾರ್ಥಿಗಳು ಉತ್ತೀಣರಾಗಿ 91% ಫಲಿತಾಂಶ ಬಂದಿರುತ್ತದೆ. 9ವಿದ್ಯಾರ್ಥಿಗಳು A+(90%ಕ್ಕಿಂತ ಹೆಚ್ಚು ಅಂಕ)  ,  36ವಿದ್ಯಾರ್ಥಿಗಳು A(80%ಕ್ಕಿಂತ ಹೆಚ್ಚು ಅಂಕ),  67 ವಿದ್ಯಾರ್ಥಿಗಳು B+(70%ಕ್ಕಿಂತ ಹೆಚ್ಚು ಅಂಕ),  ,  106 ವಿದ್ಯಾರ್ಥಿಗಳುB(60%ಕ್ಕಿಂತ ಹೆಚ್ಚು ಅಂಕ),   ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ. ಪ್ರಥಮ ಭಾಷೆ ಸಂಸ್ಕೃತದಲ್ಲಿ ಯಜ್ಞೇಶ್ 125 ರಲ್ಲಿ 125 ಅಂಕ ಹಾಗೂ ರಾಮನಾರಾಯಣ ಮತ್ತು ಸುಜಿತ್, ದಿಶಾ 125ರಲ್ಲಿ 124 ಅಂಕ ಮತ್ತು ತೃತೀಯ ಭಾಷೆಯಲ್ಲಿ ನಾಲ್ಕು ವಿದ್ಯಾರ್ಥಿಗಳು 100ರಲ್ಲಿ 100 […]