ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ ಸಂಪರ್ಕ: 9141030980, 9482189419 1980ರಲ್ಲಿ ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯು ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ 9 ಎಕ್ರೆ ಸ್ಥಳವನ್ನು ಸಂಸ್ಥೆಗೆ ಪಡೆಯುವಲ್ಲಿ ಹಲವು ಹೋರಾಟವನ್ನೇ ಮಾಡಬೇಕಾಯಿತು. ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವೇಶ್ವತೀರ್ಥ ಶ್ರೀ ಪಾದಂಗಳವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಿದ್ದರು. ಸುಸಜ್ಜಿತ, ಸುಂದರ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಹಾಗೂ ಗಣಕ ಶಿಕ್ಷಣಕ್ಕೆ ಗಣಕ ಪ್ರಯೋಗಾಲಯೂ ಇದೆ.
ಪ್ರಸಕ್ತ ವರ್ಷದಲ್ಲಿ 8ನೇ ತರಗತಿಯಲ್ಲಿ 6 ವಿಭಾಗಗಳು 9ನೇ ತರಗತಿಯಲ್ಲಿ 6 ವಿಭಾಗಗಳು 10ನೇ ತರಗತಿಯಲ್ಲಿ 7 ವಿಭಾಗಗಳಿದ್ದು 872 ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
SRI RAMA HIGH SCHOOL – KALLADKA Registration form 2023-24
ಕ್ರ.ಸಂ. | ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕ 2018-19ರ ವಿವರ |