24 ನವೆಂಬರ್ 2014: ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್ -2012 ಬಗ್ಗೆ ಮಾಹಿತಿ

ನವೆಂಬರ್ ೨೪ ೨೦೧೪:  ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್  -೨೦೧೨ ಬಗ್ಗೆ ಮಾಹಿತಿ

ಧರ್ಮದ ತಳಹದಿಯಲ್ಲಿ ಧರ್ಮಾಧಾರಿತ ಚಾರಿತ್ರ್ಯವಂತರಾಗಿ ಮಕ್ಕಳನ್ನು ಬೆಳೆಸುವ ಕಾರ‍್ಯ ಶಿಕ್ಷಕರಿಂದ ಆಗಬೇಕು. ಮಗುವಿನ ತಾಯಿ ತಂದೆಯಂತೆ ಶಿಕ್ಷಕರು ಕಾರ‍್ಯ ನಿರ್ವಹಿಸಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ|| ಪ್ರಭಾಕರ ಭಟ್ ಹೇಳಿದರು.
ಅವರು ಕಲ್ಲಡ್ಕ ಮಧುಕರ ಸಭಾಂಗಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸರ್ವಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಕೇಂದ್ರ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಶ್ರೀರಾಮ ವಿದ್ಯಾಕೇಂದ್ರದ  ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್  -೨೦೧೨ ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ಏರ್ಪಡಿಸಿದ ೫ ದಿನಗಳ ಮೂರನೆಯ ಹಂತದ  ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಗುವಿನ  ಗುಣನಡವಳಿಕೆ ಬೆಳೆಸುವಲ್ಲಿ ಗುರುವೃಂದ ಕರ್ತವ್ಯ ನಿರ್ವಹಿಸಬೇಕು. ಗುರುಧರ್ಮವನ್ನು ಪಾಲಿಸಿದರೆ ಕಾನೂನಿನ ಅವಶ್ಯಕತೆ ಇರುವುದಿಲ್ಲ. ಮಕ್ಕಳ ದೃಷ್ಟಿಕೋನವನ್ನು ನೈತಿಕವಾಗಿ, ಸಮಾಜಮುಖಿಯಾಗಿ ಬದಲಾಯಿಸುವ ಮೂಲಕ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ಧಾರಿ ಶಿಕ್ಷಕರಿಗಿದೆ ಎಂದರು.
ಸಮಾರಂಭವನ್ನು ಗೌ?ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ ಯು. ದೀಪ ಬೆಳಗಿಸಿ ಉದ್ಘಾಟಿಸಿದರು. ಚಿಕ್ಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಕ್ಕಿದಾಗ ಯಾವುದೇ ದೌರ್ಜನ್ಯ ನಡೆಯಲು ಸಾಧ್ಯವಿಲ್ಲ ವಿದ್ಯಾರ್ಥಿಗಳನ್ನು ಗಮನಿಸಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಮಕ್ಕಳಿಗೆ ಯಾವುದೇ ಕಿರುಕುಳವಾದರೂ ದೂರು ನೀಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಕಾರಂತ,  ರೋಟರಿ ಜಿಲ್ಲಾ ವಲಯ -೫ರ ಅಸಿಸ್ಟೆಂಟ್ ಗವರ್ನರ್ ಹಿರಿಯ ನ್ಯಾಯವಾದಿ ಅಶ್ವನಿ ಕುಮಾರ್ ರೈ, ಕಾರ್ಯದರ್ಶಿ ಸಂಜೀವ ಪೂಜಾರಿ, ವಕೀಲರ ಸಂಘ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಎಂ., ಉಪತಹಶೀಲ್ದಾರ್ ರೋಹಿದಾಸ್, ಸಹಾಯಕ ಸರಕಾರಿ ಅಭಿಯೋಜಕ ಎಂ. ಎಸ್. ಆಲಿ, ಮುಖ್ಯೋಪಾಧ್ಯಾಯ ವಸಂತ ಮಾಧವ  ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿ ಪ್ರಸ್ತಾವನೆಗೈದರು. ಹಿರಿಯ ವಕೀಲ ಕಜೆ ರಾಮಚಂದ್ರ ಭಟ್ ಪೊಕ್ಸೋ ಕಾಯಿದೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೇಶ್ ಬಿ. ವಂದಿಸಿದರು. ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿದರು.

Leave a Reply