ಕೃಷಿ ಸಂಘದ ಉದ್ಘಾಟನೆ ಮತ್ತು ಕೃಷಿ ಚಟುವಟಿಕೆ

ಕಲ್ಲಡ್ಕ: ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕದಲ್ಲಿ ಕೃಷಿ ಚಟುವಟಿಕೆ
ದಿನಾಂಕ: 31.7.219
2019-20ನೇ ಸಾಲಿನ ಕೃಷಿ ಸಂಘದ ಉದ್ಘಾಟನೆ ಮತ್ತು ಕೃಷಿ ಚಟುವಟಿಕೆ ಸುಧೆಕ್ಕಾರಿನಲ್ಲಿ ನಡೆಯಿತು. ಸಂಘದ ಉದ್ಘಾಟನೆಯನ್ನು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿಯಾದ ಶ್ರೀ.ಸತೀಶ್ ಶಿವಗಿರಿಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ, ದೇಶದ ಆರ್ಥಿಕತೆಯಲ್ಲಿ ಸಾವಯವ ಕೃಷಿಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳನ್ನು ಸಾವಯವ ಕೃಷಿಗೆ ಪ್ರೋತ್ಸಾಹಿಸಿದರು. ಕೃಷಿ ಚಟುವಟಿಕೆಗೆ ಚಾಲನೆ ನೀಡಿದ ಪ್ರಗತಿಪರ ಕೃಷಿಕರು ಮತ್ತು ಗೋಳ್ತಮಜಲು ಪಂಚಾಯತ್ ಸದಸ್ಯರಾದ ಶ್ರೀ. ಜಯಂತ ಗೌಡ ಇಂದಿನ ಕಾಲದಲ್ಲಿ ಕುಟುಂಬ ಪದ್ಧತಿ ಕ್ಷೀಣಿಸುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಶ್ರೀ.ವಸಂತ ಬಲ್ಲಾಳ್, ವೈಷ್ಣವಿ ಟೆಕ್ಸ್‌ಟೈಲ್ಸ್ ಕಲ್ಲಡ್ಕದ ಮಾಲಕರಾದ ಶ್ರೀ. ಪ್ರಶಾಂತ್ ಕಡ್ಯ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಶ್ರೀ. ತಿರುಮಲೇಶ್ವರ ಪ್ರಶಾಂತ್ ನಿರ್ವಹಿಸಿದರು. ಉಪನ್ಯಾಸಕರು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 

Leave a Reply