ತುಳಸಿ ಪೂಜೆ ಹಾಗೂ ಗೋಪೂಜೆ

ಶ್ರೀರಾಮ ಶಿಶುಮಂದಿರ ಕಲ್ಲಡ್ಕ ಇದರ ವತಿಯಿಂದ ಉತ್ಥಾನ ದ್ವಾದಶಿ ನಿಮಿತ್ತ ಶ್ರೀರಾಮ ವಿದ್ಯಾಕೇಂದ್ರದಲ್ಲಿ ತುಳಸಿ ಪೂಜೆ ಹಾಗೂ ಗೋಪೂಜೆ ನೆರವೇರಿತು. ಪೂಜಾ ಕಾರ್ಯಕ್ರಮವನ್ನು ಸೂರ್ಯಭಟ್ ಕಶೆಕೋಡಿ ಇವರು ನಡೆಸಿಕೊಟ್ಟರು. ಡಾ. ಪ್ರಭಾಕರ ಭಟ್ ದಂಪತಿಗಳು ಗೋವುಗಳಿಗೆ ಆರತಿ ಬೆಳಗಿ, ಹೂಹಾರ ಹಾಕಿ, ಬಾಳೆಹಣ್ಣು, ದೋಸೆಯನ್ನು ತಿನ್ನಿಸಿದರು. ಈ ಸಂದರ್ಭದಲ್ಲಿ ಸಂಚಾಲಕರು ವಸಂತ ಮಾಧವ, ವಿಭಾಗದ ಮುಖ್ಯಸ್ಥರುಗಳು, ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Leave a Reply