ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ‍್ಯಗಾರ

ಬಂಟ್ವಾಳ ತಾಲೂಕು ಪ್ರೌಢಶಾಲಾ ವಿಭಾಗದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ದೈಹಿಕ ಶಿಕ್ಷಣ ಶಿಕ್ಷಕರಂದು ದಿನದ ಕಾರ‍್ಯಗಾರ ದಿನಾಂಕ 14.1.2015ರಂದು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು. ಸ್ವಸ್ಥ ಶರೀರದ ಸ್ವಸ್ಥ ಮನಸ್ಸಿನ ವ್ಯಕ್ತಿಗಳ ನಿರ್ಮಾಣದ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಅಂತಹ ಕಾರ‍್ಯದಲ್ಲಿ ಶಾರೀರಿಕ ಶಿಕ್ಷಣ ಶಿಕ್ಷಕರು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಶಾಲೆಯ ಪ್ರತೀ ವಿದಾರ್ಥಿಯನ್ನು ಗಮನಿಸಿ, ಆಯ್ಕೆ ಮಾಡಿ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ, ಒಲಿಂಪಿಕ್ಸ್ ಕ್ರೀಡಾಪಟುಗಳನ್ನಾಗಿ ಮಾಡಲು ಪ್ರಯತ್ನಿಸಿ ಎಂದು ರಾ.ಸ್ವ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ತಾ.ದೈ.ಶಿಕ್ಷಣ ಪರಿವೀಕ್ಷಕರು ಗುರುನಾಥ ಬಾಗೇವಾಡಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಸಂತ ಮಾಧವ, ದೈ.ಶಿ.ಶಿ ಸಂಘದ ತಾಲೂಕು ಅಧ್ಯಕ್ಷರು ರಾಧಾಕೃಷ್ಣ ಅಡ್ಯಂತಾಯ, ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ವಿಠಲ ನಾಯಕ್ ಉಪಸ್ಥಿತರಿದ್ದರು. ಅಜಿತ ಕುಮಾರ್ ಸಾಗತಿಸಿ ಜನಾರ್ದನ ಕೊಲ ವಂದಿಸಿದರು.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಬಗ್ಗೆ ವಿಷ್ಣು ಹೆಬ್ಬಾರ್ ಪ್ರಭಾರಿ ದೈ.ಶಿಕ್ಷಣ ಪರಿವೀಕ್ಷಕರು ಮಂಗಳೂರು ದಕ್ಷಿಣ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಇವರು ತರಬೇತಿಗೆ ಬೇಟಿ ನೀಡಿ ತರಬೇತಿಯ ಅವಶ್ಯಕತೆ ಮತ್ತು ಪ್ರಸ್ತುತತೆ ಬಗ್ಗೆ ತಿಳಿ ಹೇಳಿದರು.

Leave a Reply