ವಿಜ್ಞಾನ ಮೇಳ

ದಿನಾಂಕ 23.08.2018 ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ
ಬಾಲವರ್ಗದ ವಿಜ್ಞಾನ ಮಾದರಿಯಲ್ಲಿ 7ನೇ ತರಗತಿಯ ಸೌರಭ.ವಿ.ಎಸ್ ಪ್ರಥಮ, 6ನೇ ತರಗತಿಯ ಕುಶಿ-ಪ್ರಥಮ, ಹಾಗೂ 6ನೇ ತರಗತಿಯ ಶ್ರೀಜನ್ಯ ತೃತೀಯ ಸ್ಥಾನವನ್ನು ಗಳಿಸಿದರು.
ಸಂಸ್ಕೃತ ಜ್ಞಾನ ರಸಪ್ರಶ್ನೆಯಲ್ಲಿ 7ನೇ ತರಗತಿಯ ಚರಣ್, ರ್ವಣಿ ಹಾಗೂ 6ನೇ ತರಗತಿಯ ದೀಕ್ಷಿತ್ ಪ್ರಥಮ ಸ್ಥಾನವನ್ನು ಪಡೆದವರಾಗಿರುತ್ತಾರೆ.
ವೇದಗಣಿತದಲ್ಲಿ 6ನೇ ತರಗತಿಯ ಚಿನ್ಮಯಿ,7ನೇ ತರಗತಿಯ ಕೃಪಾ ಇವರು ಪ್ರಥಮ ಸ್ಥಾನವನ್ನು ಗಳಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಶು ವರ್ಗದ ವಿಜ್ಞಾನ ಮಾದರಿಯಲ್ಲಿ 5ನೇ ತರಗತಿ ಸಂಕತ್ ಹಾಗೂ 5ನೇ ತರಗತಿ ಆಕಾಶ್ ಪ್ರಥಮ ಸ್ಥಾನವನ್ನು ಗಳಿಸಿದರು. 4ನೇ ತರಗತಿಯ ಗೌತಮಿ 5ನೇ ತರಗತಿಯ ಆದಿಶ್ರೀ ದ್ವಿತೀಯ ಸ್ಥಾನವನ್ನು ಗಳಿಸಿದರು. 4ನೇ ತರಗತಿಯ ಕೃತಿಕಾ ತೃತೀಯ ಸ್ಥಾನವನ್ನು ಗಳಿಸಿದರು.
ಶಿಶು ವರ್ಗದ ಸಂಸ್ಕೃತ ಜ್ಞಾನ ರಸಪ್ರಶ್ನೆಯಲ್ಲಿ 5ನೇ ತರಗತಿಯ ಶ್ರದ್ಧಾ, 5ನೇ ತರಗತಿಯ ಭೂಷಣ್, 5ನೇ ತರಗತಿಯ ಯಜ್ಞಪ್ರಿಯ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ
ವೇದಗಣಿತದಲ್ಲಿ 5ನೇ ತರಗತಿಯ ವಾಸವಿ, 4ನೇ ತರಗತಿಯ ಪ್ರಣಾಮ್, 4ನೇ ತರಗತಿಯ ಶ್ರೀರಕ್ಷ ಪ್ರಥಮ ಸ್ಥಾನವನ್ನು ಪಡೆದರು.
ಶಿಶವರ್ಗದ ವಿಜ್ಞಾನ ಪ್ರಯೋಗದಲ್ಲಿ 5ನೇ ತರಗತಿಯ ದೀಪಿಕಾ-ದ್ವಿತೀಯ ಸ್ಥಾನವು ಪಡೆದುಕೊಂಡರು.

Leave a Reply