ಶ್ರೀರಾಮ ಪ್ರೌಢಶಾಲೆಯ ನೂತನ ಮುಖ್ಯೋಪಾಧ್ಯಾಯರಾಗಿ ಶ್ರೀಮತಿ ಶಾಂಭವಿ ಮಾತಾಜಿ

ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ವಸಂತಿ ಮಾತಾಜಿಯವರ ನಿವೃತ್ತಿ ಕಾರಣ ನೂತನ ಮುಖ್ಯೋಪಾಧ್ಯಾಯರಾಗಿ ಶ್ರೀಮತಿ ಶಾಂಭವಿ ಮಾತಾಜಿಯವರಿಗೆ ಜವಾಬ್ದಾರಿ ನೀಡಲಾಯಿತು. ಶ್ರೀರಾಮ ಮಂದಿರದಲ್ಲಿ ಪೂಜೆಸಲ್ಲಿಸಿ, ವಿದ್ಯಾಕೇಂದ್ರದ ಹಿರಿಯರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ, ಡಾ. ಕಮಲ ಪ್ರ.ಭಟ್, ಶ್ರೀ ವಸಂತ ಮಾಧವ, ಶ್ರೀ ರಮೇಶ್ ಎನ್ ಇವರ ಸಮ್ಮುಖದಲ್ಲಿ ಶ್ರೀಮತಿ ವಸಂತಿ ಮಾತಾಜಿಯವರು ಅಧಿಕಾರ ಹಸ್ತಾಂತರಿಸಿದರು. ಆಡಳಿತ ಮಂಡಳಿ ಸದಸ್ಯೆಯರುಗಳಾದ ಶ್ರೀಮತಿ ಲಕ್ಸ್ಮಿ ರಘುರಾಜ್, ಶ್ರೀಮತಿ ಸುಧಾ ಭಟ್, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರರು ಉಪಸ್ಥಿತರಿದ್ದರು

Leave a Reply