ಶ್ರೀರಾಮ ಪ್ರೌಢಶಾಲೆ – ಪರಿಸರ ದಿನಾಚರಣೆ 6.6.2016

ಪರಿಸರ ಮತ್ತು ಮಾನವನ ನಡುವೆ ತಾಯಿ ಮಗುವಿನ ಭಾವನ್ಮಾತಕ ಸಂಬಂಧವಿದೆ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಸರಾಗವಾಗಿ ಸಾಗಬಹುದು. ಆದುರಿಂದ ಪರಿಸರ ಉಳಿಸುವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಂದು ಶ್ರೀ ವೆಂಕಟೇಶ್ ಅಮೈ ರಾ.ಸ್ವ.ಸಂಘದ ವಿಟ್ಲ ತಾಲೂಕು ಸಂಘಚಾಲಕ ಕರೆ ನೀಡಿದರು.
ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾದ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ವಿಶ್ವನಾಥ ಪ್ರಭು ಮಾತನಾಡಿ ಮಾನವ ಸೂಕ್ಷ್ಮತೆಯಿಂದ ನೀರನ್ನು ಬಳಸಬೇಕು ಎಂದು ನೀರಿನ ಮಹತ್ವದ ಬಗ್ಗೆ ತಿಳಿಸಿದರು.
ಕಾರ‍್ಯಕ್ರಮದ ಅಧ್ಯಕ್ಚತೆಯನ್ನು ಶ್ರೀರಾಮ ವಿದ್ಯಾಕೇಂದ್ರ ಮುಖ್ಯಕಾರ‍್ಯನಿರ್ವಾಹಕ ಶ್ರೀ ವಸಂತ ಮಾಧವ, ವಹಿಸಿದ್ದರು. ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಶಾಲಾ ಮುಖ್ಯೋಪಾಧ್ಯಾಯರು ಶ್ರೀ ರಮೇಶ ಶ್ರೀಮಾನ್ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಅತಿಥಿಗಳು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳ ಪರಿಸರದ ಮಹತ್ವ ಸಾರುವ ಪರಿಸರಗೀತೆ ಹಾಡಿದರು.

Leave a Reply