ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ

ಶ್ರೀರಾಮ ವಿದ್ಯಾಕೇಂದ್ರಕ್ಕೆ ಜನಾರ್ಧನ ರೆಡ್ಡಿ ಭೇಟಿ
ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ. ನಾನು ನನ್ನ ವೈಯಕ್ತಿಕವಾಗಿ ಬಂದ ಎಲ್ಲಾ ಕಷ್ಟಗಳನ್ನು ನಾನು ಎದುರಿಸಲು ಸಿದ್ದನಿದ್ದೇನೆ ಆದರೆ ಸಮಾಜದಲ್ಲಿ ಇಂತ ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ನಡೆಸುವಂತಹ ಡಾ. ಪ್ರಭಾಕರ ಭಟ್‌ರವರಿಗೆ ತೊಂದರೆಯಾದರೆ ಈ ಜನಾರ್ದನ ರೆಡ್ಡಿ ಸುಮ್ಮನೆ ಕೂರುವುದಿಲ್ಲ ಮತ್ತು ಇಂತಹ ಸಂದರ್ಭದಲ್ಲಿ ನಾನು ಹಾಗೂ ನನ್ನ ಸ್ನೇಹಿತರು ಅಲ್ಲದೇ ಇಡೀ ಸಮಾಜ ಶ್ರೀರಾಮ ವಿದ್ಯಾಕೇಂದ್ರದ ಜೊತೆಗಿರುತ್ತದೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವರು ಜನಾರ್ಧನ ರೆಡ್ಡಿ, ಇವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಸರಸ್ವತಿ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಸಂದೀಪ್, ಪೋಸ್ಟ್ ಕಾರ್ಡ್ ನ್ಯೂಸ್.ಕಾಮ್ ಇದರ ಪ್ರಮುಖರು, ಶ್ರೀ ಮಹೇಶ್, ವಿಕ್ರಂ ಹೆಗ್ಡೆ-ಭಿಕ್ಷಾಂದೇ” ಅಭಿಯಾನ ಂಠಿಠಿ ನ ಪ್ರಮುಖರು, ಶ್ರೀ ಪರ್ವತ ಶೆಟ್ಟಿ ಉದ್ಯಮಿಗಳು ಮುಂಬು, ಲಲ್ಲೇಶ್ ರೆಡ್ಡಿ ಉದ್ಯಮಿಗಳು, ಶ್ರೀ ಸದಾನಂದ ನಾವೂರ ಉದ್ಯಮಿಗಳು ಮಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಎನ್ ಉಪಸ್ಥಿತರಿದ್ದರು.

Leave a Reply