ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಶಿಶುಮಂದಿರದ ನೂತನ ‘ಲವ’ ಕುಟೀರ ಉದ್ಘಾಟನೆ

ಶ್ರೀರಾಮ ಶಿಶುಮಂದಿರದ ನೂತನ ಲವ ಕುಟೀರ ದಿನಾಂಕ ೨೩.೦೮.೨೦೧೭ರಂದು ಓಡು ಗಂಗಪ್ಪ ಹೂವಿನಡಗಲಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅರುಣ್ ಜೋಶಿ, ರಾಜ್ಯಪಾಲರ ಕಾನೂನು ಸಲಹಾ ಸಮಿತಿ ಸದಸ್ಯರು ಹಾಗೂ ನ್ಯಾಯವಾದಿಗಳು ಇವರು ಮಾತನಾಡಿ ಈ ಸಂಸ್ಥೆಗೆ ಕೊಲ್ಲೂರು ಕ್ಷೇತ್ರದಿಂದ ಬರುತ್ತಿರುವ ಅನುದಾನವನ್ನು ರದ್ದುಗೊಳಿಸಿದ್ದು ತಪ್ಪು. ಯಾರ ಅನ್ನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಒಂದಲ್ಲ ಒಂದು ರೀತಿಯಲ್ಲಿ ದೇವರು ಒದಗಿಸುತ್ತಾನೆ ಎಂದರು. ಮಾತ್ರವಲ್ಲದೆ ಮುಷ್ಟಿ ಅಕ್ಕಿ ಯೋಜನೆಯಲ್ಲಿ ಪಾಲ್ಗೊಂಡು ದಾರವಾಡದಿಂದಲೂ ಮ್ಟು ಅಕ್ಕಿಯನ್ನು ಒದಗಿಸುತ್ತೇನೆ ಎಂದರು.
ಎಂ.ಆರ್.ಪಿ.ಎಲ್ ಒ.ಎನ್.ಜಿ.ಸಿಯ ಸ್ವತಂತ್ರ ನಿರ್ದೇಶಕರಾದ ಶ್ರೀಮತಿ ಮಂಜುಳಾ ಸಿ.ಯವರು ಮಾತನಾಡಿ ಉತ್ತಮ ಸಮಾಜ ನಿರ್ಮಾಣದ ಕಾರಣೀಕರ್ತರನ್ನು ನಿರ್ಮಾಣ ಮಾಡುವಂತಹ ಇಂತಹ ಕನ್ನಡ ಮಾಧ್ಯಮ ಶಾಲೆಯನ್ನು ೩೦೦೦ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಕರ್ನಾಟಕ ಸರಕಾರ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಾಪಿಸಬೇಕೆಂಬ ಬದ್ಧತೆಯನ್ನು ಸರಕಾರಕ್ಕೆ ತಿಳಿಸಿಕೊಟ್ಟರು. ಕೇವಲ ಪುಸ್ತಕದ ಶಿಕ್ಷಣ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಅನ್ಯಾಯದ ವಿರುದ್ಧ ಹೋರಾಡುವ ಕಿಚ್ಚನ್ನು ಮಕ್ಕಳಲ್ಲಿ ಕಂಡುಕೊಂಡೆ ತುಂಬಾ ಸಂತೋಷವಾಯಿತು. ಮಕ್ಕಳ ಪ್ರತಿಭಟನೆಯನ್ನು ಪ್ರಶಂಸಿದರು. ಒಂದು ಕನ್ನಡ ಶಾಲೆಯನ್ನು ನಡೆಸಿ ಉಳಿಸಿ ನಿಮ್ಮ ಸಾಮರ್ಥ್ಯವನ್ನು ತೋರಿಸಿಬೇಕು ಎಂದರು.
ವೇದಿಕೆಯಲ್ಲಿ ಡಾ ಮಂಜುನಾಥ ಬಿ.ಹೆಚ್ ಮೈಸೂರು, ಹೆಸರಾಂತ ಕೀಲು ಮತ್ತು ಮೂಳೆ ತಜ್ಞರು, ಅಜಿತ್ ಆನಂದ ಶೆಟ್ಟಿ ಕರ್ನಾಟಕ ರಾಜ್ಯ ಉಚ್ಚನ್ಯಾಲಯದ ನ್ಯಾಯವಾದಿಗಳು, ಶ್ರೀ ಶ್ರೀಧರ ಸಾಗರ್, ಸೇವಾ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್, ಗಿರೀಶ, ಎಂ.ಡಿ ಮೈಸೂರು ಡಯಾಗ್ನಸ್ಟಿಕ್ ಸೆಂಟರ್, ಉದ್ಯಮಿಗಳಾದ ಬಾಪು ಗೌಡ ಪಾಟೀಲ್, ಮಧುಚಂದ್ರ ಮಂಡ್ಯ, ಪ್ರಸನ್ನ ಗೌಡ, ರಾಘವೇಂದ್ರ ಭಟ್ ಮೈಸೂರು ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಅಧ್ಯಕ್ಷರು ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ಪ್ರಾಸ್ತವಿಕ ಭಾಷಣದಲ್ಲಿ ಶಿಶುಮಂದಿರದ ಶಿಕ್ಷಣದ ಬಗ್ಗೆ ವಿವರಿಸಿದರು.

Leave a Reply