ಸಾಮೂಹಿಕ ಹುಟ್ಟು ಹಬ್ಬ ಆಚರಣೆ

ದಿನಾಂಕ – 25.08.2018ನೇ ಶನಿವಾರ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹನುಮಾನ್ ನಗರ ಕಲ್ಲಡ್ಕ ಇಲ್ಲಿನ ವೇದವ್ಯಾಸ ಧ್ಯಾನಮಂದಿರದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣ ಮತ್ತು ಭಜನಾ ಕಾರ್ಯಕ್ರಮವನ್ನು ಆಚರಿಸಲಾುತು.
ಹುಟ್ಟುಹಬ್ಬವನ್ನು ಆಚರಿಸುವ ಮಕ್ಕಳಿಗೆ ಗುರುವೃಂದದವರಿಂದ ಆರತಿ ಅಕ್ಷತೆ ತಿಲಕಧಾರಣೆ, ಸಿಹಿ ವಿತರಣೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು.
“ಹುಟ್ಟುಹಬ್ಬವನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು ಹಾಗೂ ಪುರಾಣದ ಕಥೆಗಳಲ್ಲಿನ ಮಹಾಪುರುಷರ ಆದರ್ಶ ನಮ್ಮ ಜೀವನಕ್ಕೆ ಮಾದರಿಯಾಗಲಿ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಸುಧಾ ಸೂರ್ಯನಾರಾಯಣ್ ಭಟ್ ರವರು ಹಾರೈಸಿದರು.
7ನೇ ತರಗತಿಯ ಕಾರ್ತಿಕ್ ಪ್ರೇರಣಾ ಗೀತೆ ಹಾಡಿದನು
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರ ಚಂದ್ರಶೇಖರ್ ಸಾಲಿಯಾನ , ಶ್ರೀಮತಿ ಲಕ್ಷ್ಮೀ ರಘುರಾಜ್ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿುದ್ದರು.
ಕಾರ್ಯಕ್ರಮವನ್ನು ಅಶ್ವಿನಿ ಮಾತಾಜಿ ನಿರೂಪಿಸಿ ಶ್ರೀಮತಿ ಸಹನಾ ಮಾತಾಜಿ ಸ್ವಾಗತಿಸಿ, ಜಯಲಕ್ಷ್ಮೀ ಮಾತಾಜಿ ವಂದಿಸಿದರು.

Leave a Reply