ಹಣತೆ ತಯಾರಿಸುವ ಕಾರ್ಯಾಗಾರ

ಪ್ರಧಾನಿ ಮೋದಿ ಅವರ ಆಶಯದಂತೆ, ಆತ್ಮ ನಿರ್ಭರ ಭಾರತದ ಕನಸಿಗನುಗುಣವಾಗಿ ಈ ಬಾರಿಯ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲು ಪಣ ತೊಟ್ಟಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸ್ವದೇಶಿ ಹಣತೆ ತಯಾರಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.

4 ನವೆಂಬರ್ 2020- 10 ನವೆಂಬರ್ 2020 ರ ವರೆಗೆ, ಒಂದು ವಾರದ ಅವಧಿಯಲ್ಲಿ ಸಂಸ್ಥೆಯ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚಿನ ಹಣತೆಗಳನ್ನು ತಯಾರಿಸುವ ಕಾರ್ಯಕ್ರಮ ಇದಾಗಿದೆ. ವಿದ್ಯಾಕೇಂದ್ರಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಈ ದೀಪಾವಳಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನೆಗಳಲ್ಲಿ ಚೀನಾ ನಿರ್ಮಿತ ಕೃತಕ ದೀಪಗಳ ಬದಲಾಗಿ ಸ್ವತಃ ಮಕ್ಕಳೇ ನಿರ್ಮಿಸಿದ ದೀಪಗಳು ಬೆಳಕನ್ನು ನೀಡಬೇಕು ಎಂಬ ಉದ್ದೇಶದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವದೇಶೀಯಾಗಿ ಹಣತೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ವಿದ್ಯಾಲಯದಲ್ಲಿ ವಸುಧಾರ ಗೋಶಾಲೆಯ ವತಿಯಿಂದ ಒಂದು ವಾರಗಳ ಕಾಲ ಸಂಸ್ಥೆಯ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು,ಶಿಕ್ಷಕರು ಹಾಗೂ ಪೋಷಕರಿಗೆ ಹಣತೆ ತಾಯಾರಿಸುವ ಕಾರ್ಯಾಗಾರವನ್ನು ಆಯೋಜಿಸಿದೆ.ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೋಮಯದ ಹಣತೆ ಹಾಗೂ ಮಣ್ಣಿನ ಹಣತೆಗಳನ್ನು ತಯಾರಿಸುವ ವಿಧಾನವನ್ನು ಕಲಿಸಲಾಗುವುದು.
ಈ ಕಾರ್ಯಕ್ರಮ‌ದಲ್ಲಿ ಸಾರ್ವಜನಿಕ‌ರಿಗೂ ಭಾಗವಹಿಸುವ ಅವಕಾಶ ನೀಡಲಾಗಿದ್ದು, ಇಚ್ಛಿಸುವವರು 9902673907 (ಉಮೇಶ್) ಸಂಖ್ಯೆಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಬಹುದಾಗಿದೆ. ನಿಮಗೆ ಸೂಚಿಸುವ ದಿನಾಂಕದಂದು ಕಾರ್ಯಕ್ರಮ‌ದಲ್ಲಿ ಭಾಗಿಗಳಾಗಲು ಅವಕಾಶವಿದೆ. ಭಾಗವಹಿಸಿದವರಿಗೆ ಶ್ರೀ ರಾಮ ಉದ್ಯೋಗ ಮಾಹಿತಿ ಕೇಂದ್ರದ ವತಿಯಿಂದ ಪ್ರಮಾಣಪತ್ರ ನೀಡಲಾಗುತ್ತದೆ.

ವಿದ್ಯಾರ್ಥಿಗಳು ತಯಾರಿಸಿದ ಹಣತೆಗಳನ್ನು ಕೆಳಗಿನ ಲಿಂಕ್ ಮೂಲಕ ಖರೀದಿಸಬಹುದಾಗಿದೆ.

Leave a Reply