2015ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆNMMS) ದಿನಾಂಕ 8.11.2015ರಂದು ಕಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಎರಡು ಕೇಂದ್ರ ಶ್ರೀರಾಮ ಪ್ರೌಢಶಾಲೆ ಮತ್ತು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಜರಗಿತು. ಬಂಟ್ವಾಳ ತಾಲೂಕಿನ ೮ನೇ ತರಗತಿಯಲ್ಲಿ ಕಲಿಯುತ್ತಿರುವ ಸುಮಾರು ೧೫೦ಕ್ಕೂ ಹೆಚ್ಚು ಶಾಲೆಯ 1153 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣೆ ಮಾಡಿದ್ದು, 1094ವಿದ್ಯಾರ್ಥಿಗಳು ಹಾಜರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಬೌದ್ಧಿಕ್ ಪರೀಕ್ಷೆ (GMAT) ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆ(SAT) 90ನಿಮಿಷ ಅವಧಿಯ ೯೦ ಅಂಕಗಳ 90 ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿತ್ತು. ಎರಡು ಪ್ರಶ್ನೆ ಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಒದಗಿಸಲಾಗಿದ್ದು, ವಿದ್ಯಾರ್ಥಿಗಳು ಒ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಗುರುತು ಮಾಡಿ ಉತ್ತರಿಸಿದರು. ಪ್ರೌಢಶಾಲೆಯ ಅಯೋಧ್ಯಾ ಕಟ್ಟಡ, ಕಾಲೇಜ್ನ ಶೇಷಾದ್ರಿ ಕಟ್ಟಡದಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿಲಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಉತ್ಸಾಹದಿಂದ ಕರೆತಂದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಪರೀಕ್ಷಾ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಡಯಟ್ ಪ್ರತಿನಿಧಿಯಾಗಿ ಆಶಾ ಎಂ.ಎಸ್, ನೋಡಲ್ ಅಧಿಕಾರಿಯಾಗಿ ಪುಷ್ಪಾ ಎಸ್, ಪರೀಕ್ಷಾ ಮುಖ್ಯಸ್ಥರಾಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಮೇಶ್ ಎನ್ ಮತ್ತು ಪ.ಪೂರ್ವ ವಿದ್ಯಾಲಯದ ಪ್ರಾಂಶುಪಾಲರು ವಸಂತ ಬಲ್ಲಾಳ್ ಕಾರ್ಯನಿರ್ವಹಿಸಿದರು.