ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ – ರಥಸಪ್ತಮಿ

ಫೆ ೧: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿ ರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಯೋಗ ಶಿಕ್ಷಕರಾದ ಸಂಜಯ್ ವಿದ್ಯಾರ್ಥಿಗಳಿಗೆ ಮಂತ್ರಸಹಿತ ಸೂರ್ಯನಮಸ್ಕಾರ ಮಾಡಿಸಿದರು. ಆವಿಷ್ಕಾರ್ ಯೋಗ ತರಬೇತುದಾರರಾದ ವಿಶಿತ್ ವಿ ದೇರಳಕಟ್ಟೆ ಇವರು ರಥಸಪ್ತಮಿ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಲತಾ, ಹಿರಿಯರಾದ ಡಾ| ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಶಾರೀರಿಕ ನಿದೇಶಕರಾದ ಕರುಣಾಕರ ಸ್ವಾಗತಿಸಿ, ಜಿನ್ನಪ್ಪ ಏಳ್ತಿಮಾರ್ ವಂದಿಸಿದರು.

Leave a Reply