ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

Thursday, August 23rd, 2018
ಶ್ರೀರಾಮ ಪದವಿ ಕಾಲೇಜಿನಲ್ಲಿ ಕದಿಕೆ ತುಳು ಸಂಘ ಉದ್ಘಾಟನೆ

ಕದಿಕೆ ತುಳು ಸಂಘವನ್ನು ಶ್ರೀ ನರೇಶ್ ಕುಮಾರ್ ಸಸಿಹಿತ್ಲು ಉದ್ಘಾಟಿಸಿದರು. ಇವರು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರೀರಾಮ ವಿದ್ಯಾಕೇಂದ್ರ ಬಹಳ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದು ನುಡಿದರು. ತುಳು ಸಂಘವು ತುಳು ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು. ನಂತರ ಆಟಿ ತಿಂಗಳ ವಿಶೇಷತೆ, ತುಳು ಜನರ ಬದುಕಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಬಟ್ ಕಲ್ಲಡ್ಕ […]

ಗ್ರಂಥಪಾಲಕರ ದಿನಾಚರಣೆ

Wednesday, August 22nd, 2018
ಗ್ರಂಥಪಾಲಕರ ದಿನಾಚರಣೆ

  ಶಿಕ್ಷಣಕ್ಕೆ ಜಗತ್ತನ್ನು ಗೆಲ್ಲಬಲ್ಲ ಶಕ್ತಿ ಇದೆ. ಒಬ್ಬ ಒಳ್ಳೆಯ ನಾಯಕನಿಗೆ ಈ ಸಮಾಜದಲ್ಲಿ ಶಿಕ್ಷಣದ ಜ್ಞಾನ ತುಂಬಾ ಅಗತ್ಯ, ಶಿಕ್ಷಣ ಇಲ್ಲದವನ ಬದುಕು ಬದುಕೇ ಅಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ವಲಯ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿಗಾರ್ ಅಭಿಪ್ರಾಯಪಟ್ಟರು. ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ. ಇಲ್ಲಿಯ ಪ್ರತಿಭಾ ರಾಮ ಸಾಹಿತ್ಯ ಸಂಘದ ವತಿಯಿಂದ ನಡೆದ, ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿ, ಪುಸ್ತಕವು ಜ್ಞಾನದ ಭಂಡಾರ ವಾದರೆ,ಗ್ರಂಥಾಲಯವು ಪುಸ್ತಕಗಳ ಭಂಡಾರವಗಿದೆ. ನಮ್ಮ ಜ್ಞಾನದ ಹಸಿವನ್ನು […]

ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರು

Wednesday, August 22nd, 2018
ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರು

ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ

ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

Wednesday, August 22nd, 2018
ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

ಶ್ರೀರಾಮ ವಿದ್ಯಾಕೇಂದ್ರದ ಪದವಿ ಪೂರ್ವ ವಿಭಾಗದಲ್ಲಿ ದಿನಾಂಕ 23.8.2018ರಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ ನಡೆಯಲಿರುವುದು.

ಅಥ್ಲೆಟಿಕ್ಸ್

Tuesday, August 21st, 2018
ಅಥ್ಲೆಟಿಕ್ಸ್

  20.08.2018 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಜಿಲ್ಲಾಮಟ್ಟದ “ಅಥ್ಲೆಟಿಕ್ಸ್” ಪಂದ್ಯಾಟದಲ್ಲಿ 5ನೇ ತರಗತಿಯ ಯಶ್ಮಿತಾ, 400 ಮೀ. ಓಟ ಪ್ರಥಮ, 5ನೇ ತರಗತಿಯ ಪ್ರಥಮ್ ಉದ್ದ ಜಿಗಿತದಲ್ಲಿ ದ್ವಿತೀಯ, 5ನೇ ತರಗತಿಯ ನಿತೇಶ್ ಗುಂಡು ಎಸೆತ ದ್ವಿತೀಯ ಹಾಗೂ 5ನೇ ತರಗತಿಯ ಸುಶ್ಮಿತಾ 200ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಬಾಲಕಿಯರ 4X100 ಮೀ. ರಿಲೇ ಓಟದಲ್ಲಿ ದ್ವಿತೀಯ ಸ್ಥಾನ, 5ನೇ ತರಗತಿಯ ಅನ್ವಿ ಎತ್ತರ ಜಿಗಿತದಲ್ಲಿ ತೃತೀಯ, 5ನೇ ತರಗತಿಯ […]

ಕರಾಟೆ

Tuesday, August 21st, 2018
ಕರಾಟೆ

  09/08/2018 ರಂದು ಬುರೂಜ್ ಆಂಗ್ಲ ಮಾಧ್ಯಮ ಶಾಲೆ, ಸಿದ್ಧಕಟ್ಟೆ ವಾಮದಪದವು ಇಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 14 ಕುಮಿಟೆ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ 6ನೇ ತರಗತಿಯ ಗುಣಶ್ರೀ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.

ಚೆಸ್ ಪಂದ್ಯಾಟ

Tuesday, August 21st, 2018
ಚೆಸ್ ಪಂದ್ಯಾಟ

  ದಿನಾಂಕ 07/08/2018 ರಂದು ದ.ಕ.ಜಿ,ಪ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ 7ನೇ ತರಗತಿಯ ಅಕ್ಷಿತ್ ” ದ್ವಿತೀಯ ಸ್ಥಾನ, 6ನೇ ತರಗತಿಯ ಚಿನ್ಮು ದ್ವಿತೀಯ ಸ್ಥಾನ, 6ನೇ ತರಗತಿಯ ಕುಶಿ ಪೂಜಾರಿ ಪಂಚಮ ಸ್ಥಾನ ಪಡೆದಿರುತ್ತಾರೆ.

ಶಟಲ್ ಬ್ಯಾಡ್ಮಿಂಟನ್

Tuesday, August 21st, 2018
ಶಟಲ್ ಬ್ಯಾಡ್ಮಿಂಟನ್

13/08/2018 ರಂದು ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 6ನೇ ತರಗತಿಯ ಚಿನ್ಮು , ಕುಶಿ ಹಾಗೂ 7ನೇ ತರಗತಿಯ ರ್ವಣಿ ಹಾಗೂ ತ್ರಿಶಾ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಪ್ರಥಮ್ ಗೌಡ , ಮನೀಶ್ , ಜಯಸೂರ್ಯ, ಅಕ್ಷಿತ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.  

ಪ್ರತಿಭಾ ಕಾರಂಜಿ ವಿಜೇತರು

Monday, August 20th, 2018
ಪ್ರತಿಭಾ ಕಾರಂಜಿ ವಿಜೇತರು

ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಶ್ರೀರಾಮ ಪ್ರಾಥಮಿಕ ಶಾಲಾ ಕಿರಿಯ ವಿಭಾಗದ ವಿದ್ಯಾರ್ಥಿಗಳು

ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ

Saturday, August 18th, 2018
ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ

ಶ್ರೀರಾಮ ಪ್ರೌಢಶಾಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ನಡೆಯಿತು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳಿಂದ ಒಂದು ನಿಮಿಷ ಮೌನ ಪ್ರಾರ್ಥನೆ. ಬಳಿಕ ವಿನುತಾ ಮಾತಾಜಿ ವಾಜಪೇಯಿಯವರ ಜೀವನಚರಿತ್ರೆಯ ಬಗ್ಗೆ ಮಾತನಾಡಿದರು