ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ

Saturday, January 17th, 2015
ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ

ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ ಬಂಟ್ಟಾಳ.೧೫, ಜ: ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ. ಪಾವಿತ್ರ್ಯತೆ, ಸೇವೆ, ಸಹನೆ, ತ್ಯಾಗ, ಶೀಲ, ವಿವೇಕವಾದ ಶಕ್ತಿಯಿಂದ ಭಾರತ ನವಭಾರತವಾಗುತ್ತದೆ ಎಂದು ಕಲ್ಲಡ್ಕ ಶ್ರೀ ರಾಮ ಹೈಸ್ಕೂಲು ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ‍್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ಕಾಲೇಜಿನ ಪದವಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ […]

ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ‍್ಯಗಾರ

Wednesday, January 14th, 2015
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ‍್ಯಗಾರ

ಬಂಟ್ವಾಳ ತಾಲೂಕು ಪ್ರೌಢಶಾಲಾ ವಿಭಾಗದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ದೈಹಿಕ ಶಿಕ್ಷಣ ಶಿಕ್ಷಕರಂದು ದಿನದ ಕಾರ‍್ಯಗಾರ ದಿನಾಂಕ 14.1.2015ರಂದು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು. ಸ್ವಸ್ಥ ಶರೀರದ ಸ್ವಸ್ಥ ಮನಸ್ಸಿನ ವ್ಯಕ್ತಿಗಳ ನಿರ್ಮಾಣದ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಅಂತಹ ಕಾರ‍್ಯದಲ್ಲಿ ಶಾರೀರಿಕ ಶಿಕ್ಷಣ ಶಿಕ್ಷಕರು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಶಾಲೆಯ ಪ್ರತೀ ವಿದಾರ್ಥಿಯನ್ನು ಗಮನಿಸಿ, ಆಯ್ಕೆ ಮಾಡಿ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ, ಒಲಿಂಪಿಕ್ಸ್ ಕ್ರೀಡಾಪಟುಗಳನ್ನಾಗಿ ಮಾಡಲು ಪ್ರಯತ್ನಿಸಿ ಎಂದು ರಾ.ಸ್ವ.ಸಂಘದ […]

ಪ್ರೌಢಶಾಲೆಯಲ್ಲಿ Online IT Quiz ಮತ್ತು ಕಂಪ್ಯೂಟರ್ ತರಬೇತಿ

Saturday, January 10th, 2015
ಪ್ರೌಢಶಾಲೆಯಲ್ಲಿ Online IT Quiz  ಮತ್ತು ಕಂಪ್ಯೂಟರ್ ತರಬೇತಿ

ಶ್ರೀರಾಮ ಪ್ರೌಢಶಾಲೆಯಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ವಿದ್ಯಾರ್ಥಿಗಳಿಗೆ  ನಡೆಸಲಾಯಿತು. ಒಟ್ಟು ೧೪ವಿದ್ಯಾರ್ಥಿಗಳು ಬೆಳಿಗ್ಗೆ ೯.೩೦ರಿಂದ ೧೧.೩೦ರವರೆಗೆ ತರಬೇತಿಯನ್ನು ಪಡೆದುಕೊಂಡರು. ಗಣಕ ಶಿಕ್ಷಕ ಕುಶಾಲಪ್ಪ, ಶಿಕ್ಷಕಿಯರಾದ ಭವ್ಯ, ಯಶಸ್ವಿನಿ, ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ವಸಂತ ಮಾಧವ ಮತ್ತು ಗೋಳ್ತಮಜಲು ಶಾಲಾ ಶಿಕ್ಷಕರು ಸೀತಾರಾಮ ಭಟ್ ಉಪಸ್ಥಿತರಿದ್ದರು.

cycle distribute – ಸೈಕಲ್ ವಿತರಣೆ

Monday, January 5th, 2015
cycle distribute - ಸೈಕಲ್ ವಿತರಣೆ

ಸೈಕಲ್ ವಿತರಣೆ ದಿನಾಂಕ: 5.1.2014 ಕರ್ನಾಟಕ ಸರ್ಕಾರದಿಂದ2014-15ರ ಶೈಕ್ಷಣಿಕ ವರ್ಷದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ತಾಲೂಕು ಪಂಚಾಯತ್ ಸದಸ್ಯರು ದಿನೇಶ್ ಅಮ್ಟೂರು, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಸಾಲಿಯಾನ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಸಂತಮಾಧವ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಶುಭ ಹಾರೈಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪರವರು ವಿದ್ಯಾಕೇಂದ್ರಕ್ಕೆ ಬೇಟಿ

Saturday, December 27th, 2014
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪರವರು ವಿದ್ಯಾಕೇಂದ್ರಕ್ಕೆ ಬೇಟಿ

ವಿದ್ಯಾ ಕಾಶಿಯಾದ ದಕ್ಷಿಣ ಕನ್ನಡ ತೀರ್ಥಕ್ಷೇತ್ರಕ್ಕೆ ಪ್ರಸಿದ್ಧಿಯಾದ ದಕ್ಷಿಣಕನ್ನಡ ಇಂದು ವಿದ್ಯಾ ಕಾಶಿಯಾಗಿದೆ. ಶಿಕ್ಷಣದ ದೇಗುಲವಾಗಿದೆ. ಅಂತಹ ದಕ್ಷಿಣ ಕನ್ನಡ ಜಿಲ್ಲೆ ಪುಣ್ಯದ ನಾಡು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಸಂತಸದ ನುಡಿಗಳನ್ನಾಡಿ, ವಿದ್ಯಾಸಂಸ್ಥೆಯಲ್ಲಿ ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವದ ಬಗ್ಗೆ ಉಲ್ಲೇಖಿಸುತ್ತಾ, ಶಿಶು ಶಿಕ್ಷಣದಿಂದಲೇ ಸಂಸ್ಕೃತಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ನೀಡುತ್ತಿರುವುದು ಅಮೋಘ ಸಂಗತಿ ಎಂದರು. ಸಂಸ್ಥೆಯ ಬಗ್ಗೆ […]

ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ

Wednesday, December 17th, 2014
ಕನಕ ಚಿಂತನ ಪ್ರಚಾರೋಪನ್ಯಾಸ ಕಾರ್ಯಕ್ರಮ

ಬಂಟ್ವಾಳ,ದಿ.17: ವಿಜ್ಞಾನದ ಶಕ್ತಿ ಉತ್ತಂಗಕ್ಕೆ ಏರಿ  ಹೋದಾಗ ಅದರ ಇತಿಮಿತಿಗಳನ್ನು ಅರಿತು ಎಷ್ಟು ಬಳಸಬೇಕು ? ಎಷ್ಟು ಬಳಸಬಾರದು ಎಂದು ಅರಿವಿರುತ್ತದೆ. ಆದರೆ ಧರ್ಮದ ಆಚರಣೆಗಳು ಬಂದಾಗ ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ತಾರತಮ್ಯಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ಧರ್ಮದ ಆಚರಣೆ ಇಂದು ದಾರಿ ತಪ್ಪಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ  ಪ್ರೊ. ಪಿ.ಎಲ್. ಧರ್ಮ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಪೀಠ ಆಶ್ರಯದಲ್ಲಿ,  ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ […]

ಶ್ರೀರಾಮ ಪ್ರೌಢಶಾಲೆಯಲ್ಲಿ – ಕ್ಷೇತ್ರ ಪ್ರಚಾರ ನಿರ್ದೇನಾಲಯ ಇಲಾಖಾ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ

Wednesday, December 17th, 2014
ಶ್ರೀರಾಮ ಪ್ರೌಢಶಾಲೆಯಲ್ಲಿ - ಕ್ಷೇತ್ರ ಪ್ರಚಾರ ನಿರ್ದೇನಾಲಯ ಇಲಾಖಾ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ

ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಕಾರ‍್ಯಕ್ರಮ. ಜನರು ಮತ್ತು ಸರ್ಕಾರದ ನಡುವೆ ಸೇತುವೆಯ ರೀತಿ ಕಾರ‍್ಯ ನಿರ್ವಹಿಸಿ, ಜನರ ಕಷ್ಟ ಸುಖಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ, ಕೇಂದ್ರ ಸರ್ಕಾರದ ಕಾರ‍್ಯಕ್ರಮಗಳು ಜನೋಪಯೋಗಿ ಆಗುವಂತೆ ಯೋಜನೆಗಳನ್ನು ರೂಪಿಸುವಲ್ಲಿ ಈ ನಿರ್ದೇಶನಾಲಯ ಮಹತ್ವದ ಪಾತ್ರ ವಹಿಸುತ್ತಿದೆ. ಚಲನ ಚಿತ್ರ, ಗುಂಪು ಚರ್ಚೆ, ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ ಮುಂತಾದವುಗಳನ್ನು ಗ್ರಾಮೀಣ ಮಟ್ಟದಲ್ಲಿ ಏರ್ಪಡಿಸಿ, ಜನರಲ್ಲಿ ರಾಷ್ಟ್ರೀಯ ಏಕತೆ, ಕುಡಿತದ ಚಟದ ಅನಿಷ್ಟ ಪರಿಣಾಮಗಳು, ಸಾಮಾಜಿಕ ಅಸ್ಪ್ರಶ್ಯತೆ […]

16 ದಶಂಬರ 2014 ಶ್ರೀರಾಮ ಕಾಲೇಜಿನಲ್ಲಿ ಕನಕ ಚಿಂತನ

Friday, December 12th, 2014

16 ದಶಂಬರ 2014 ಅಪರಾಹ್ನ 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಪಿ. ಎಲ್. ಧರ್ಮ ಇವರಿಂದ ’ಕನಕ ಚಿಂತನ’ ಪ್ರಚಾರೋಪನ್ಯಾಸ ಕಾರ‍್ಯಕ್ರಮದ ನಿಮಿತ್ತ ವಿಶೇಷ ಉಪನ್ಯಾಸ ನಡೆಯಲಿರುವುದು.

kreedotsava program list

Monday, December 1st, 2014
kreedotsava program list

24 ನವೆಂಬರ್ 2014: ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್ -2012 ಬಗ್ಗೆ ಮಾಹಿತಿ

Monday, November 24th, 2014
24 ನವೆಂಬರ್  2014:  ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್  -2012 ಬಗ್ಗೆ ಮಾಹಿತಿ

ನವೆಂಬರ್ ೨೪ ೨೦೧೪:  ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಆಕ್  -೨೦೧೨ ಬಗ್ಗೆ ಮಾಹಿತಿ ಧರ್ಮದ ತಳಹದಿಯಲ್ಲಿ ಧರ್ಮಾಧಾರಿತ ಚಾರಿತ್ರ್ಯವಂತರಾಗಿ ಮಕ್ಕಳನ್ನು ಬೆಳೆಸುವ ಕಾರ‍್ಯ ಶಿಕ್ಷಕರಿಂದ ಆಗಬೇಕು. ಮಗುವಿನ ತಾಯಿ ತಂದೆಯಂತೆ ಶಿಕ್ಷಕರು ಕಾರ‍್ಯ ನಿರ್ವಹಿಸಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ|| ಪ್ರಭಾಕರ ಭಟ್ ಹೇಳಿದರು. ಅವರು ಕಲ್ಲಡ್ಕ ಮಧುಕರ ಸಭಾಂಗಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ […]