Sri Rama P.U. College

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ :

ನಮ್ಮ ಧ್ಯೇಯ: ಹಿಂದುತ್ವನಿಷ್ಠ ಹಾಗೂ ರಾಷ್ಟ್ರಭಕ್ತಿಯಿಂದ ಕೂಡಿದ ಶಾರೀರಿಕ, ಮಾನಸಿಕ, ಬೌದ್ಧಿಕ, ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ವಿಕಸಿತಗೊಂಡ ಯುವ ಪೀಳಿಗೆಯನ್ನು ನಿರ್ಮಿಸುವಂತಹ ರಾಷ್ಟ್ರೀಯ ಶಿಕ್ಷಣ ವಿಧಾನವನ್ನು ವಿಕಸಿತಗೊಳಿಸಬೇಕಾಗಿದೆ. ಈ ಪೀಳಿಗೆಯು ಪ್ರಚಲಿತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಅಲ್ಲದೆ ಅವರ ಜೀವನವು ಗಿರಿಕಂದರಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಹಾಗೂ ಗುಡಿಸಲುಗಳಲ್ಲಿ ವಾಸಿಸುವವರನ್ನು, ದೀನ ದುಃಖಿಗಳನ್ನು, ದರಿದ್ರರನ್ನು ಸಾಮಾಜಿಕ ದುಶ್ಚಟಗಳಿಂದ ದೂರೀಕರಿಸಿ ಅವರನ್ನು ಶೋಷಣೆ ಹಾಗೂ ಅನ್ಯಾಯಗಳಿಂದ ಮುಕ್ತಗೊಳಿಸುವಂತಾಗಬೇಕು. ಹಾಗೂ ರಾಷ್ಟ್ರ ಜೀವನವನ್ನು ಸಮರಸವೂ, ಸುಸಂಪನ್ನವೂ ಹಾಗೂ ಸುಸಂಸ್ಕೃತವನ್ನಾಗಿಸುವುದಕ್ಕಾಗಿ ಈ ಪೀಳಿಗೆಯು ತಮ್ಮನ್ನು ಅರ್ಪಿಸಿಕೊಳ್ಳುವಂತಾಗಬೇಕು. ಈ ರೀತಿಯ ರಾಷ್ಟ್ರೀಯ ಶಿಕ್ಷಣವನ್ನು ವಿಕಸಿತಗೊಳಿಸುವುದೇ ನಮ್ಮ ಧ್ಯೇಯವಾಗಿದೆ. ಸಂಸ್ಥೆಯ ಬಗೆಗೆ ವಿಶ್ವದ ಆದರ್ಶ ಮಹಾಪುರುಷ ಮರ್ಯದಾ ಪುರುಷೋತ್ತಮ ಶ್ರೀರಾಮಚಂದ್ರನ ಹೆಸರಿನಲ್ಲಿ 1980ರಲ್ಲಿ ಸ್ಥಾಪನೆಗೊಂಡ ಈ ವಿದ್ಯಾಕೇಂದ್ರ ಶಿಶುಮಂದಿರದಿಂದ ಮೊದಲ್ಗೊಂಡು ಪ್ರೌಢ ಶಾಲಾ ಹಂತದವರೆಗಿನ ಶಿಕ್ಷಣವನ್ನು ನೀಡುತ್ತಿದೆ. ಪರಿಸರದ ವಿದ್ಯಾಭಿಮಾನಿಗಳ ಅಪೇಕ್ಷೆಯಂತೆ ಸಂಸ್ಕಾರಯುತವಾದಂತಹ ಶಿಕ್ಷಣವನ್ನು ಪದವಿಪೂರ್ವ ಹಂತದವರೆಗೂ ವಿಸ್ತರಿಸುವ ದೃಷ್ಟಿಯಿಂದ 2005ಜೂನ್ ತಿಂಗಳಿನಿಂದ ಇಲಾಖೆಯ ಅನುಮತಿಯೊಂದಿಗೆ ಪದವಿಪೂರ್ವ ಮತ್ತು ಪದವಿ ತರಗತಿಗಳು ಆರಂಭಗೊಂಡಿವೆ. ವ್ಯಕ್ತಿ ಜೀವನದ ಅನಿವಾರ್ಯ ಭಾಗಗಳಲ್ಲಿ ಒಂದಾದ ಶಿಕ್ಷಣ ಇಂದು ಸರ್ವಸಾಮಾನ್ಯರನ್ನೂ ತಲುಪುತ್ತಿರುವುದು ಸಂತಸದ ಸಂಗತಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದಲ್ಲಿ ಉನ್ನತ ಶಿಕ್ಷಣದೊಂದಿಗೆ ನಮ್ಮನ್ನು ನಾವು ರೂಪಿಸಿಕೊಳ್ಳಲು ಉತ್ತಮ ಸಂಸ್ಕಾರವೂ ಅಗತ್ಯ. ಇದನ್ನು ಮನಗಂಡ ಶ್ರೀರಾಮ ವಿದ್ಯಾಕೇಂದ್ರ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡುವ ಕೆಲಸವನ್ನು ಕಳೆದ ೩ದಶಕಗಳಿಂದ ಮಾಡುತ್ತಾ ಬಂದಿದೆ.

ಎಲ್ಲಿದೆ? ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಇಕ್ಕೆಲಗಳಲ್ಲಿ ಹರಡಿರುವ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪೇಟೆಯಿಂದ ಕೇವಲ 1/2 ಕಿ.ಮೀ ಮೀಟರ್ ಒಳಭಾಗದ ಪ್ರಶಾಂತ ವಾತಾವರಣದಲ್ಲಿ ಈ ವಿದ್ಯಾಲಯವಿದೆ. ಸೌಲಭ್ಯಗಳು

 • ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳು ಹಾಗೂ ವಿವಿಧ ಸಂಯೋಜನೆಗಳು
 • ವಿಶಾಲವಾದ ಬಹುಮಹಡಿ ಕಟ್ಟಡ ಹಾಗೂ ಸುಸಜ್ಜಿತ ತರಗತಿಗಳು
 • ವಿಶಾಲವಾದ ಗ್ರಂಥಾಲಯ ಹಾಗೂ ವಾಚನಾಲಯಗಳು
 • ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ (ಹಾಸ್ಟೆಲ್) ಸೌಲಭ್ಯ
 • ಕಾಲೇಜು ಬಸ್ಸುಗಳು
 • ಕೋಚಿಂಗ್ ತರಗತಿಗಳು. (ವಿರಾಮ ದಿನಗಳಲ್ಲಿ) ಹಾಗೂ ಪೂರಕ ತರಗತಿಗಳು.
 • ವಿಶಾಲ ಕ್ರೀಡಾಂಗಣ. ಹಾಗೂ ಶಾರೀರಿಕ ಶಿಕ್ಷಣ ನಿರ್ದೇಶಕರು.
 • ವ್ಯಕ್ತಿತ್ವ ವಿಕಸನ ಶಿಬಿರಗಳು – ಅಭಿರುಚಿಗೆ ತಕ್ಕಂತೆ ಜೋಡಿಕೊಳ್ಳಲು ವಿವಿಧ ಸಂಘಗಳು.
 • ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ.

ವಿಶೇಷ ಸೌಲಭ್ಯಗಳು

 • ಕಾಲೇಜಿನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಉಚಿತ ಭೋಜನ.
 • ಎಸ್.ಎಸ್.ಎಲ್.ಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಉಚಿತ ಶಿಕ್ಷಣ
 • ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಗಣ್ಯರ ಗಮನಸೆಳೆದ ’ಕ್ರೀಡೋತ್ಸವ’ದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ

ಪದವಿ ಪೂರ್ವ ಶಿಕ್ಷಣ ಅಧ್ಯಯನ ಅವಧಿ    : 2ವರ್ಷ ಪ್ರವೇಶಾರ್ಹತೆ       : ಎಸ್ಸೆಸ್ಸೆಲ್ಸಿ / ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ. ಐಚ್ಚಿಕ ವಿಷಯಗಳು ಭೌತಶಾಸ್ತ್ರ    ರಸಾಯನ ಶಾಸ್ತ್ರ    ಗಣಿತ ಶಾಸ್ತ್ರ    ಜೀವಶಾಸ್ತ್ರ (PCMB) ಭೌತಶಾಸ್ತ್ರ    ರಸಾಯನ ಶಾಸ್ತ್ರ    ಗಣಿತ ಶಾಸ್ತ್ರ    ಗಣಕ ವಿಜ್ಞಾನ (PCMC) ಭಾಷಾ ವಿಷಯಗಳು ಇಂಗ್ಲೀಷ್ ಕನ್ನಡ/ಹಿಂದಿ/ಸಂಸ್ಕೃತ ಅರ್ಥಶಾಸ್ತ್ರ    ವ್ಯವಹಾರಿಕ ಅಧ್ಯಯನ    ಲೆಕ್ಕಶಾಸ್ತ್ರ    ಗಣಕ ವಿಜ್ಞಾನ(EBCA) ಅರ್ಥಶಾಸ್ತ್ರ    ವ್ಯವಹಾರಿಕ ಅಧ್ಯಯನ    ಲೆಕ್ಕಶಾಸ್ತ್ರ    ಸಂಖ್ಯಾ ಶಾಸ್ತ್ರ(EBAS) ಅರ್ಥಶಾಸ್ತ್ರ    ವ್ಯವಹಾರಿಕ ಅಧ್ಯಯನ    ಲೆಕ್ಕಶಾಸ್ತ್ರ    ಇತಿಹಾಸ (EBAH) ಇತಿಹಾಸ    ಅರ್ಥಶಾಸ್ತ್ರ        ರಾಜ್ಯ ಶಾಸ್ತ್ರ    ಸಮಾಜ ಶಾಸ್ತ್ರ (HEPS) ಶಿಕ್ಷಣ ಮಾಧ್ಯಮ: ಇಂಗ್ಲಿಷ್ (ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರಿಸುವ ಅವಕಾಶವಿದೆ) ಸಂಸ್ಥೆಯ ನೀತಿ ನಿಯಮಗಳು

 1. ಸಮಯಕ್ಕೆ ಸರಿಯಾಗಿ ಎಲ್ಲಾ ಚಟುವಟಿಕೆಗಳಿಗೆ ಹಾಜರಾಗುವುದು.
 2. ಬೆಳಗ್ಗಿನ ಸರಸ್ವತಿ ವಂದನಾ ಹಾಗೂ ಸಂಜೆಯ ಪ್ರಾರ್ಥನೆಯಲ್ಲಿ ಪೂರ್ಣ ಭಾಗಿಯಾಗುವುದು.
 3. ತರಗತಿಗಳಿಗೆ ಮತ್ತು ಎಲ್ಲಾ ಪರೀಕ್ಷೆಗಳಿಗೆ ಕಡ್ಡಾಯ ಹಾಜರಾತಿ.
 4. ಗೈರು ಹಾಜರಗುವ ಸಂದರ್ಭದಲ್ಲಿ ಪೂರ್ವಾನುಮತಿಯನ್ನು ಪಡೆದುಕೊಳ್ಳುವುದು.
 5. ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವುದು.
 6. ತರಗತಿ ಹಾಗೂ ಸಂಸ್ಥೆಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು.
 7. ಸಂಸ್ಥೆಯಿಂದ ನಿರ್ದೇಶಿಸಲ್ಪಡುವ ಎಲ್ಲ ಸೂಚನೆಯನ್ನು ಪಾಲಿಸುವುದು.

ಮೊಬೈಲ್ ಮುಂತಾದ ವಸ್ತುಗಳನ್ನು ಸಂಸ್ಥೆಯ ಆವರಣದಲ್ಲಿ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅದನ್ನು ವಶಪಡಿಸಿಕೊಳ್ಳಗಾಗುವುದು. ವಿಶೇಷ ಸೂಚನೆ* ವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ನಿಗದಿತ ಶುಲ್ಕದೊಂದಿಗೆ ನೀಡಬೇಕಾದ ಇತರ ದಾಖಲೆಗಳು:

 1. ಎಸ್.ಎಸ್.ಎಲ್.ಸಿ / ತತ್ಸಮಾನ ಪರೀಕ್ಷೆ ಪ್ರಮಾಣ ಪತ್ರ
 2. ವರ್ಗಾವಣಾ ಪ್ರಮಾಣ ಪತ್ರ
 3. ಗುಣ ನಡತೆಯ ಪ್ರಮಾಣ ಪತ್ರ
 4. ಅರ್ಹತಾ ಪ್ರಮಾಣ ಪತ್ರ
 5. ವಲಸೆ ಪ್ರಮಾಣ ಪತ್ರ(ಹೊರ ರಾಜ್ಯ ವಿದ್ಯಾರ್ಥಿಯಾಗಿದ್ದಲ್ಲಿ)
 6. ನಿಗದಿತ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರ.
 7. ಸ್ಟಾಂಪ್ ಅಳತೆಯ ಭಾವಚಿತ್ರ – 3

**

 1. ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಯ ಹೆತ್ತವರು / ಪೋಷಕರು ಖುದ್ದಾಗಿ ಹಾಜರಿರಬೇಕು.
 2. ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಪಾವತಿಸಿ, ತರಗತಿಗೆ ಸೇರಬೇಕು.
 3. ಯಾವುದೇ ಸಂದರ್ಭದಲ್ಲಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
 4. ಎಲ್ಲ ಪ್ರವೇಶಗಳೂ ತಾತ್ಕಾಲಿಕವಾಗಿದ್ದು, ಅನಂತರ ಪದವಿಪೂರ್ವ ಶಿಕ್ಷಣ ಮಂಡಳಿಯ ಅನುಮೋದನೆ
 5. ಪಡೆಯಬೇಕಾಗುತ್ತದೆ.
 6. ಪ್ರವೇಶ ಶುಲ್ಕದ ಸ್ವರೂಪ ಮತ್ತು ನಿಯಮಗಳನ್ನು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡುವ ಹಕ್ಕನ್ನು
 7. ಕಾಲೇಜಿನ ಆಡಳಿತ ಮಂಡಳಿ ಕಾದಿರಿಸಿಕೊಂಡಿದೆ.

  ನಿಮ್ಮ ಎಲ್ಲಾ ಪತ್ರ ವ್ಯವಹಾರಗಳಿಗೆ

  ಪ್ರಾಚಾರ್ಯರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯ

  ಹನುಮಾನ್ ನಗರ, ಕಲ್ಲಡ್ಕ – 574222, ಬಂಟ್ವಾಳ ತಾಲೂಕು, ದ.ಕ

  (ಶೀಘ್ರ ಉತ್ತರಕ್ಕಾಗಿ ಸ್ವವಿಳಾಸದ, ಅಂಚೆ ಚೀಟಿ ಹಚ್ಚಿದ ಲಕೋಟೆ ಜೊತೆಗಿರಿಸಿ)

  SRI RAMA P.U COLLEGE – KALLADKA First PUC Registration form 2024-25

  ಪದವಿ ಪೂರ್ವ ತರಗತಿಗೆ ಸೇರ ಬಯಸುವವರು ನೋಂದಾವಣೆ ಮಾಡಿಕೊಳ್ಳಲು ಈ ಲಿಂಕ್‌ನ್ನು Click ಮಾಡಿ:  

  https://forms.gle/s3NyYKZvZXYiDw65A