Parent meeting

ವಿದ್ಯಾರ್ಥಿಗಳಿಗೆ ರಾಷ್ಟ್ರದ ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವಿದ್ಯಾಕೇಂದ್ರ ನಡೆಸುತ್ತದೆ. ಈ ವಿಚಾರಗಳ ಮಗುವಿನಲ್ಲಿ ಉತ್ತಮ ಭಾವನೆಗಳನ್ನು ಬಿತ್ತಿ ಮನಸ್ಸನ್ನು ಅರಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳನ್ನು ಪ್ರತೀ ಮಗುವಿನ ಮನೆಯಲ್ಲೂ ಮುಂದುವರೆಸುವ ಕಾರ್ಯವನ್ನು ಪೋಷಕರು ನಡೆಸಬೇಕು. ಆ ಮೂಲಕ ಸಮಾಜೋಪಯೋಗಿ ವ್ಯಕ್ತಿಯಾಗಿ ಮಗು ರೂಪುಗೊಳ್ಳಲು ಸಾಧ್ಯ ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದರು. ಶ್ರೀರಾಮ ವಸತಿ ನಿಲಯದ ಪೋಷಕರ ಸಭೆಯನ್ನುದ್ದೇಶಿಸಿ ಮಾರ್ಗದರ್ಶನ ನೀಡಿದರು. ಪೋಷಕರು ಶ್ರೀರಾಮ ವಿದ್ಯಾಕೇಂದ್ರದ ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಸೋಮಯಾಜಿ ವಹಿಸಿದರು. ವೇದಿಕೆಯಲ್ಲಿ ಶ್ರೀ ವಸಂತಮಾಧವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀರಾಮ ವಿದ್ಯಾಕೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್, ಪದವಿಪೂರ್ವ ಪ್ರಾಂಶುಪಾಲರಾದ ಶ್ರೀ ವಸಂತ ಬಲ್ಲಾಳ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಶ್ರೀ ರವಿರಾಜ ಕಣಂತೂರು ಡಾ| ಕಮಲಾಪ್ರಭಾಕರ ಭಟ್ ಉಪಸ್ಥಿತರಿದ್ದರು.

Leave a Reply