sri Rama puc 98% result ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ

 

ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ – ಸತತ ಐದು ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ ೧೦೦ ಫಲಿತಾಂಶ
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ ಇಲ್ಲಿನ ಈ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ 98 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 130 ವಿದ್ಯಾರ್ಥಿಗಳ ಪೈಕಿ 13 ಜನ 90%ಕ್ಕಿಂತ ಅಧಿಕ, 15 ಜನ 85%ಕ್ಕಿಂತ ಅಧಿಕ, ಹಾಗೂ ಉಳಿದ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸತತ ಐದನೇ ಬಾರಿ 100% ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಒಟ್ಟು 66 ವಿದ್ಯಾರ್ಥಿಗಳ ಪೈಕಿ 65 ಮಂದಿ ಉತ್ತೀರ್ಣಗೊಂಡು 98% ದಾಖಲಾಗಿದೆ, ವಿಜ್ಞಾನ ವಿಭಾಗದಲ್ಲಿ ಶೇ90 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ 575, ಸ್ವಾತಿ 569, ಇಂದುಶ್ರೀ 568, ಪೂಜಾ 567, ಲಾವಣ್ಯ 559, ಕಿರಣ್ 557, ವರ್ಷಾ 556, ಜ್ಯೋತಿ ಮಾಧವ ಭಟ್ 554, ಆನಂದ ನಾಯಕ್ 554, ಪ್ರಜ್ವಲ್ ಕೆ. 548, ಹರ್ಷಿತಾ 546, ರಶಿತಾ ಸಿ.ಕೆ 541 ಅಂಕ ಗಳಿಸಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಪೃಥ್ವಿಶೈಲಾ 568, ಸ್ವಾತಿ ಆಚಾರ‍್ಯ 565, ಬಿಂದುಶ್ರೀ 551, ಧನ್ವಿಶ್ ಕುಮಾರ್ 545 ಅಂಕಗಳನ್ನುಗಳಿಸಿದ್ದಾರೆ.
ಲೆಕ್ಕಶಾಸ್ತ್ರ ವಿಷಯದಲ್ಲಿ ಐದು ಮಂದಿ ವ್ಯವಹಾರ ಅಧ್ಯಯನದಲ್ಲಿ 4 ಮಂದಿ, ಇತಿಹಾಸ ಮತ್ತು ಗಣಕ ವಿಜ್ಞಾನ ವಿಷಯದಲ್ಲಿ ಇಬ್ಬರು 100 ಅಂಕಗಳನ್ನು ಗಳಿಸಿರುತ್ತಾರೆ. ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಇಲ್ಲಿ ದಾಖಲಾಗುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರೂ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ವಿಶೇಷತೆಯಾಗಿದೆ.

 

Leave a Reply