ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ ಸೆ ೨೮: ಕಾನೂನು ಎಂಬುವುದು ಒಂದು ಸಮುದ್ರ, ಅದರ ಎದುರು ವಕೀಲರಾಗಲಿ, ನ್ಯಾಯಾಧೀಶರಾಗಲಿ ಒಂದು ಸಣ್ಣ ಬಿಂದು. ಸಮಾಜದಲ್ಲಿ ತಂದೆ ತಾಯಿಗಳ ರಕ್ಷಣೆಗೆ ಕಾನೂನು ಸೃಷ್ಠಿಯಾಗಿರುವುದು ಒಂದು ದುರಂತದ ಸಂಗತಿ ಎಂದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ, ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಸ್ವದೇಶಿ ಸಪ್ತಾಹದ ಅಂಗವಾಗಿ ನಡೆದ ಕಾನೂನು ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಹಿರಿಯ ವಕೀಲ ಪುಂಡಿಕಾಯಿ ನಾರಾಯಣ ಭಟ್ ಇವರು ಮಾಹಿತಿ ನೀಡುತ್ತಾ, ವಿದ್ಯಾರ್ಥಿಗಳಿಗೆ ಪ್ರಸಕ್ತ ಕಾನೂನುಗಳಾದ ೩೭೦ ವಿಧಿಯ ರದ್ದತಿ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ , ರಸ್ತೆ ನಿಯಮ ಪಾಲನೆ, ಹೆಣ್ಣು ಮಕ್ಕಳ ಹಕ್ಕು ಎಂಬ ವಿಷಯದ ಕುರಿತು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟಕರಾದ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶರು, ಜೆ.ಎಮ್.ಎಫ್,ಸಿ ಮತ್ತು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಮ್ಯ ಹೆಚ್. ಆರ್ ಇವರು ಕಾನೂನುಗಳು ಧರ್ಮಶಾಸ್ತ್ರದ ಆಧಾರದಲ್ಲಿ ನಿಂತಿದೆ. ಧರ್ಮಶಾಸ್ತ್ರಗಳು ಯಾವುದನ್ನು ತಪ್ಪೆಂದು ಹೇಳುತ್ತದೆಯೋ ಆ ಅಂಶಗಳು ಕಾನೂನುಗಳಲ್ಲಿವೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಶಿಕ್ಷಣವು ಬರಿ ಅಂಕಗಳ ಆಧಾರವಲ್ಲದೇ ಸಂಸ್ಕಾರದಿಂದ ಕೂಡಿರಬೇಕು. ವ್ಯಕ್ತಿಯ ಜೀವನ ಎಂಬ ಪಯಣದಲ್ಲಿ ಅಡಚಣೆಯಾದಾಗ ಮಾರ್ಗದರ್ಶನ ನೀಡುವ ಬೆಳಕೇ ಕಾನೂನು ಎಂದರು.
ವೇದಿಕೆಯಲ್ಲಿ ಬಂಟ್ವಾಳ ಜೆ.ಎಮ್.ಎಫ್,ಸಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ. ತಿಮ್ಮಾಪುರೆ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ಉಪಸ್ಥಿತರಿದ್ದರು.

Leave a Reply