Sri Rama Shishu Mandira

ಶ್ರೀರಾಮ ಶಿಶು ಮಂದಿರ:

3 ವರ್ಷದಿಂದ 6ವರ್ಷದೊಳಗಿನ ಪುಟಾಣಿಗಳಿಗೆ ಶಾರೀರಿಕ, ಮಾನಸಿಕ, ಬೌದ್ಧಿಕ, ಸೃಜನೆಶೀಲತೆ ಹಾಗೂ ಸ್ನಾಯುಗಳ ಬೆಳವಣಿಗೆಗೆ ಪೂರಕವಾದ ಸ್ವತಂತ್ರ ಚಟುವಟಿಕೆಗಳ ಮುಖಾತರ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತದೆ. ಇಲ್ಲಿ ವಿಶೇಷತೆ ಎಂದರೆ ಅಕ್ಷರ ಅಭ್ಯಾಸ, ಅಂಕ ಪಟ್ಟಿ, ಪರೀಕ್ಷೆಗಳು ಇರುವುದಿಲ್ಲ. ನಿತ್ಯ ತರಗತಿಯಲ್ಲಿ ಪ್ರತಿಯೊಂದು ಮಗುವಿನ ಶಕ್ತಿ ಸಾಮರ್ಥ್ಯದ ಅವಲೋಕನ ನಡೆಯುತ್ತದೆ. ಸಾಮಾಜಿಕ ಚಟುವಟಿಕೆಗಳಾದ ಮಾತೃಮಂಡಳಿ, ಬಾಲಗೋಕುಲ, ಕಿಶೋರ ಭಾರತಿ ಹಾಗೂ ನವದಂಪತಿ ಸಮಾವೇಶ, ಕುಟುಂಬ ಮಿಲನ, ಧಾರ್ಮಿಕ ಹಬ್ಬ ಹರಿದಿನಗಳು ಶಿಶುಮಂದಿರದಲ್ಲಿ ನಡೆಯುತ್ತದೆ. ಶಿಶುಮಂದಿರದ ಪೋಷಕರಿಗೆ ಸಭೆ ನಡೆಸಲಾಗುತ್ತದೆ.
ಶ್ರೀರಾಮ ವಿದ್ಯಾಕೇಂದ್ರದ ಪ್ರೇರಣೆಯಲ್ಲಿ 2009-10 ನೇ ಸಾಲಿನಲ್ಲಿ ಶ್ರೀ ಗಣೇಶ ಶಿಶುಮಂದಿರ ಬೊಂಡಾಲ, ಶ್ರೀಕೃಷ್ಣ ಶಿಶುಮಂದಿರ ಸಜಿಪ ಮೂಡದಲ್ಲಿ ಪ್ರಾರಂಭಗೊಂಡಿದ್ದು ಅನೇಕ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದೆ.ಅಲ್ಲದೇ ಬಿ.ಸಿರೋಡ್ ನಲ್ಲಿ ಅಕ್ಕಮಹಾದೇವಿ ಶಿಶುಮಂದಿರ, 2014ರಲ್ಲಿ ಶಂಬೂರಿನಲ್ಲಿ ಸರಸ್ವತಿ ಶಿಶುಮಂದಿರವನ್ನು ಪ್ರಾರಂಭಗೊಳಿಸಿದೆ.
ಶಿಶು ಮಂದಿರದ ಶಿಕ್ಷಕರಿಗೆ ಶಿಶು ಶಿಕ್ಷಣ ಚಿಂತಕರಿಂದ ಹಿಂದು ಸೇವಾ ಪ್ರತಿಷ್ಠಾನ ಶಿಶುಶಿಕ್ಷಣ ಸಂಶೋಧನಾ ವಿಭಾಗ ಕೇಂದ್ರದಿಂದ ಪ್ರತೀ ವರ್ಷ 15 ದಿನಗಳ ಕಾಲ ತರಬೇತಿಯನ್ನು ಕೊಡಿಸಲಾಗುತ್ತದೆ.

Download (PDF, 129KB)