Facilities

Labs

ಗಣಕ ಶಿಕ್ಷಣ: ಬೆಳೆಯುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಗಣಕ ಶಿಕ್ಷಣದ ಅತ್ಯಗತ್ಯತೆಯನ್ನು ಮನಗಂಡು ಈ ವಿದ್ಯಾಕೇಂದ್ರದಲ್ಲಿ ೫ ನೇ ತರಗತಿಯಿಂದ ೧೦ನೇ ತರಗತಿಯವರಿಗಿನ ವಿದ್ಯಾರ್ಥೀಗಳಿಗೆ ಉಚಿತವಾಗಿ ಗಣಕ ಶಿಕ್ಷಣವನ್ನು ನೀಡುತ್ತಿದೆ. ಅಲ್ಲದೇ ೨೦ ಕಂಪ್ಯೂಟರ್‌ಗಳನ್ನು ಒಳಗೊಂಡ ಉತ್ತಮ ಸ್ಥಿತಿಯ ಕಂಪ್ಯೂಟರ್ ಲ್ಯಾಬ್ ಶಿಕ್ಷಣಕ್ಕೆ ಯೋಗ್ಯವಾಗಿದೆ.

SRI RAMA HOSTEL - ಶ್ರೀರಾಮ ವಸತಿ ನಿಲಯ

ಶ್ರೀರಾಮ ವಸತಿ ನಿಲಯ: ದೂರದ ಊರಿನ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಶಿಶುಮಂದಿರದ ಮೇಲ್ಪಟ್ಟವರಿಗಾಗಿ ವಸತಿ ನಿಲಯದ ವ್ಯವಸ್ಥೆ. ಕರ್ನಾಟಕ, ಕೇರಳ, ಮೇಘಾಲಯ, ಮಣಿಪುರದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಯೋಗ, ಭಜನೆ, ಆಟ, ಹೊರಸಂಚಾರ, ಇತ್ಯಾದಿಗಳ ಮುಖಾಂತರ ದೈಹಿಕ, ಬೌದ್ಧಿಕ, ನೈತಿಕ ಶಿಕ್ಷಣ ಪಡೆಯುತ್ತಿದ್ದಾರೆ. HOSTEL BROUCHER   ಊಟ, ವಸತಿ ವ್ಯವಸ್ಥೆ : ಶಾಲಾ ಆವರಣದೊಳಗೆ ವಿಶಾಲವಾದ ಕೊಠಡಿಯಲ್ಲಿ ಸಮೂಹ ವಸತಿ. ಹಿತಮಿತವಾದ ಸತ್ವಪೂರ್ಣ ಆಹಾರ, ಬೆಳಿಗ್ಗೆ ಮತ್ತು ಸಂಜೆ ಕಾಫಿ/ಚಹ/ಹಾಲಿನ ಜೊತೆಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ […]

Mid day meal

ಉಚಿತ ಊಟ: ತೀರ ಹಿಂದುಳಿದ ಪ್ರದೇಶವಾದ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳ ಕೊರತೆ ಇದ್ದು ಹಸಿದ ಹೊಟ್ಟೆಗೆ ವಿದ್ಯೆ ಹತ್ತದು’ ಎಂಬ ಯೋಚನೆಯಂತೆ – ನಮ್ಮ ಸರ್ಕಾರ ’ಅನ್ನ ದಾಸೋಹ’ ಆರಂಭಿಸುವುದರ ಮೊದಲೇ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಉಚಿತ ಭೋಜನ ಪ್ರಾರಂಭಿಸಲಾಗಿದೆ. 1ನೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಗಣಕ ಶಿಕ್ಷಣ , ಯೋಗ ಶಿಕ್ಷಣ ವ್ಯವಸ್ಥೆಯೂ ಇದೆ.

Transportation Facility

ವಾಹನ ಸೌಲಭ್ಯ: ಉತ್ತಮ ಮಾದರಿ ಕೇಂದ್ರವಾದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ ಹಲವರದ್ದು, ಆದರೆ ದೂರದ ಊರಿನವರಿಗೆ ’ಹೋಗುವ ಬರುವ’ ಸೌಲಭ್ಯ ಬೇಕೆಂಬುದರ ಅಗತ್ಯವನ್ನರಿತು – ಶಾಲಾ ವಾಹನ ವ್ಯವಸ್ಥೆ ಮಾಡಲಾಗಿದೆ.