ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳ

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ದಿನಾಂಕ 23.8.2018ರಂದು ಶ್ರೀರಾಮ ಪದವಿ ಪೂರ್ವವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳವನ್ನು ನಡೆಯಿತು.
ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕರಾದ ಸುಶೀಲರವರು ಪೊಟಾಶಿಯಮ್ ಅಯೋಡೈಡ್ ಮತ್ತು ಐಡ್ರೋಜನ್ ಪೆರಾಕ್ಸೈಡ್ ವರ್ಧನೆಯನ್ನು ಪ್ರಯೋಗ ಮಾಡಿ ತೋರಿಸುವುದರ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಯುವ ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಶ್ರೀರಾಮವಿದ್ಯಾಕೇಂದ್ರದ ಸಂಚಾಲಕರು, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿಯೂ ಆಗಿರುವ ವಸಂತ ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿ ವಿಜ್ಞಾನ ಮೇಳದಲ್ಲಿ ಪ್ರಮುಖವಾಗಿ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ವಸ್ತುಗಳನ್ನು ಬಳಸದೆ ಪರಿಸರಸ್ನೇಹಿ ವಿಜ್ಞಾನ ಪ್ರಯೋಗದ ಮೂಲಕ ವಿಜ್ಞಾನ ಸಂಶೋಧನೆ ನಡೆಯಬೇಕು ಎಂದರು. ಅಲ್ಲದೇ ವಿಜ್ಞಾನಕ್ಕೆ ಭಾರತಿಯರ ಕೊಡುಗೆಗಳ ಬಗ್ಗೆ ತಿಳಿಸಿದರು.
ವೇದಿಕೆಗೆ ಆಗಮಿಸಿದ ಗಣ್ಯರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇುಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಅವರ ಆತ್ಮಕ್ಕೆ ಶಾಂತಿ ಕೋರಿ ಎಲ್ಲರೂ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು.
ವಿಜ್ಞಾನ ಮಾದರಿ ಪ್ರದರ್ಶನ, ವಿಜ್ಞಾನ ಪ್ರಯೋಗ, ರಸಪ್ರಶ್ನೆ, ಪತ್ರ ವಾಚನ ಸ್ಪರ್ಧೆಗಳನ್ನು ಶಿಶು, ಬಾಲಕ, ಕಿಶೋರ, ತರುಣ ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರವನ್ನು ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿಗಳಾದ ಲೋಕಯ್ಯ ಡಿ. ಇವರು ಸ್ವಾಗತಿಸಿ ಪದವಿಪೂರ್ವವಿದ್ಯಾಲಯದ ಪ್ರಾಂಶುಪಾಲರು ವಸಂತ ಬಲ್ಲಾಳ ಧನ್ಯವಾದಗೈದು, ಗೋವಿಂದ ನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

Leave a Reply