ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ


ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 5.9.2018 ರಂದು ಶಿಕ್ಷಕರ ದಿನಾಚರಣೆಯನ್ನು ವೇದವ್ಯಾಸ ಮಂದಿರದಲ್ಲಿ ಆಚರಿಸಲಾಯಿತು.
“ಗುರು-ಶಿಷ್ಯ ಸಂಬಂಧ ಕೇವಲ + ಬಂಧ ಆಗಿರದೇ ಸಮ್ಯಕ್ ಬಂಧ ಆಗಿರಬೇಕು. ಗುರು, ಮಕ್ಕಳ ಮನಸ್ಸೆಂಬ ಹೂದೋಟದಲ್ಲಿ ಗಿಡಗಳನ್ನು ನೆಡುವುದಿಲ್ಲ ಬದಲಾಗಿ ಗಿಡಗಳು ಬೆಳೆಯಬೇಕಾದ ಬೀಜಗಳನ್ನು ಹಾಗೂ ಗಿಡಗಳು ಹುಲುಸಾಗಿ ಬೆಳೆದು ಹೂ ಬಿಡಲು, ಫಲ ಕೊಡಲು ಬೇಕಾದ ಗೊಬ್ಬರವನ್ನು ಒದಗಿಸುತ್ತಾನೆ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂತೋಷ್ ಶ್ರೀಮಾನ್ ಇವರು ಸರ್ವಪಲ್ಲಿ ರಾಧಾಕೃಷ್ಣನವರ 124 ನೇ ಜನ್ಮದಿನದ ಪ್ರಯುಕ್ತ ಮಾತಾನಾಡುತ್ತ ಹೇಳಿದರು.
“ಮಕ್ಕಳ ಸಂಖ್ಯೆ 2008 ರಲ್ಲಿ 20 ಇದ್ದದ್ದು 2018 ರಲ್ಲಿ 1054ಕ್ಕೆ ಏರಿಕೆ ಆಗಿದೆ, ಹಾಗೆಯೇ 7 ಅಧ್ಯಾಪಕರನ್ನು ಹೊಂದಿದ್ದ ಶ್ರೀರಾಮ ಪ್ರಾಥಮಿಕ ಶಾಲೆ ಇವತ್ತು 50 ಅಧ್ಯಾಪಕರನ್ನು ಒಳಗೊಂಡು ಒಂದು ಕುಟುಂಬದಂತೆ ಇದೆ. ಶಿಕ್ಷಕರು ಮಕ್ಕಳಿಗೆ ಮಾದರಿ ಆಗಿರಬೇಕು, ಮಕ್ಕಳಿಗೆ ಒಂದು ಪ್ರೇರಣಾ ಶಕ್ತಿಯಾಗಿರಬೇಕು” ಎಂದು ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಹಾರೈಸಿದರು
ಮಕ್ಕಳು ಎಲ್ಲಾ ಅಧ್ಯಾಪಕರುಗಳಿಗೆ ಹೂಗುಚ್ಛ ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು. ಬರೀ ಪಠ್ಯಪುಸ್ತಕದ ಬೋಧನೆಗೆ ಸೀಮಿತವಾಗಿರದೆ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಧ್ಯಾಪಕರುಗಳು ಜನಪದ ನೃತ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲಾ ಮಾತಾಜಿ, ಶ್ರೀಮಾನ್‌ನವರು ಉಪಸ್ಥಿತಿುದ್ದರು.
ಕಾರ್ಯಕ್ರಮವನ್ನು ೭ನೇ ತರಗತಿಯ ಕೃತಿಕಾ ನಿರೂಪಿಸಿ, ೫ನೇ ತರಗತಿಯ ಭೂಷಣ್ ಸ್ವಾಗತಿಸಿ, ೫ನೇ ತರಗತಿಯ ವಾಸವಿ ವಂದಿಸಿದರು.

Leave a Reply