ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ದಿನಾಂಕ ೦೫.೦೬.೨೦೧೫ನೇ ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪರಿಸರ ಸಂಘದ ಉದ್ಘಾಟನೆಯನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕರಾದ ಅಬ್ರಾಜೆ ಶ್ರೀ ಸುಬ್ರಹ್ಮಣ್ಯ ಭಟ್ ಅರಸಿನ ಗಿಡ ನೆಡುವ ಮೂಲಕ ನಡೆಸಿಕೊಟ್ಟರು. ಶಾಲಾ ಕೈತೋಟದಲ್ಲಿ ಔಷಧೀಯ ಗಿಡವಾದ ಲಕ್ಷ್ಮಣಫಲ ಗಿಡವನ್ನು ನೆಟ್ಟು ಪರಿಸರ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸಿದರು. ಅಲ್ಲದೇ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಸಂತಮಾಧವ ಶ್ರೀಮಾನ್ ಸಸ್ಯಗಳು ಪರಿಸರವನ್ನು ಶುಚಿ ಮಾಡುವುದರ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ರಾಕೋಡಿ ಶ್ರೀ ಈಶ್ವರ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಮೇಶ್ ಶ್ರೀಮಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲೋಹಿತ್ ಅತಿಥಿಗಳನ್ನು ಸ್ವಾಗತಿಸಿ, ಶ್ರೀಕಲಾ ವಂದನಾರ್ಪಣೆಗೈದರು. ಕುಮಾರಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಸಂಘದ ನಿರ್ದೇಶಕಿ ಶ್ರೀಮತಿ ಗಾಯತ್ರಿ ಹಾಗೂ ಶ್ರೀ ಜಿನ್ನಪ್ಪ ಏಳ್ತಿಮಾರ್ ಉಪಸ್ಥಿತರಿದ್ದರು.

Leave a Reply