ವಿದ್ಯಾರ್ಥಿಗಳಿಂದ ಕೃಷಿ ಕಾರ್ಯ

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕದ ವಿದ್ಯಾರ್ಥಿಗಳಿಂದ ಭತ್ತದ ಕೃ
ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ನೀಡುವುದರೊಂದಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುದೆಕ್ಕಾರ್‌ನಲ್ಲಿರುವ 5 ಎಕರೆ ಜಮಿನಿನಲ್ಲಿ ಭತ್ತ ಬೇಸಾಯವನ್ನು ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯನ್ನು ನಡೆಸಲಾುತು. ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಕಾರ್ಯದರ್ಶಿ ಜಯರಾಮ್ ರೈ ಬೋಳಂತೂರು, ಜಯರಾಮ್ ನೀರಪಾದೆ, ಇವರು ವಿಶೇಷ ರೀತಿಯಲ್ಲಿ ತರಬೇತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳೇ ನೇಜಿಯನ್ನು ತೆಗೆದು ಗದ್ದೆಯಲ್ಲಿ ನೆಟ್ಟು ಸಂತೋಷಪಟ್ಟರು. ಗದ್ದೆ ಉಳುವುದು, ಗದ್ದೆ ಹದ ಮಾಡುವುದು, ನೇಜಿ ತೆಗೆಯುವುದು, ಮತ್ತು ನೆಡುವುದು ಇವುಗಳ ಮಾಹಿತಿಯನ್ನು ಕೊಡಲಾುತು.
ಗದ್ದೆಯಲ್ಲಿ ನೇಜಿ ನೆಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷವಾದ ಉಪಾಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಗದ್ದೆಯ ಬದಿಯಲ್ಲೇ ಕೃಕರಂತೆ ಊಟ ಉಪಾಹಾರ ಸೇವಿಸಿದ್ದು ಬಹಳ ಸುಂದರವಾಗಿತ್ತು. ಮಕ್ಕಳಿಗೆ ನೇಜಿ ನೆಡುವುದಕ್ಕೆ ಸುಧೆಕಾರ್‌ನ ಜಯರಾಮ ಇವರು ಗದ್ದೆಯನ್ನು ಚೆನ್ನಾಗಿ ಉತ್ತು ಸಿದ್ದಗೊಳಿಸಿದ್ದರು. ಮಕ್ಕಳಿಗೂ ಇದರ ಬಗ್ಗೆ ಮಾಹಿತಿಯನ್ನು ನೀಡಿದರು. ಹೀಗೆ ಈ ವಿದ್ಯಾರ್ಥಿಗಳಿಗೆ ಕೃ ಕಾರ್ಯದಲ್ಲಿ ತೊಡಗಿಕೊಂಡು ತುಂಬಾ ಖುಪಟ್ಟರು. ಕೃ ಚಟುವಟಿಕೆಯ ಸಂಯೋಜನೆಗಾಗಿ ವಿದ್ಯಾರ್ಥಿಗಳ ಕೃಸಂಘ ಪ್ರಾರಂಭ ಮಾಡಲಾಗಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯಾರ್ಥಿಗಳೊಂದಿಗೆ ನೇಜಿ ಇಟ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯರು ರವಿರಾಜ್ ಕಣಂತೂರು, ಶಾಲಾ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ ಸದಸ್ಯರು ಕೃಷಿ ಕಾರ್ಯದಲ್ಲಿ

Leave a Reply