ಶಿಕ್ಷಕರ ದಿನಾಚರಣೆ, ಕಾಲೇಜು ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆ

ಸಾವಿರಾರು ಮಹಾ ಪುರುಷರಿಗೆ ಜನ್ಮವಿತ್ತ ದೇಶ ಭಾರತ. ಪ್ರಚಂಚದ ಬೇರೆ ಯಾವುದೇ ರಾಷ್ಟ್ರಗಳಿಗೆ ಹೋಲಿಸಿದರೆ ಇಷ್ಟೊಂದು ಸಂಖ್ಯೆಯ ದೇಶಭಕ್ತರು ಜನ್ಮ ತಾಳಿರುವುದು ನಮ್ಮ ಹೆಮ್ಮೆ. ಕಾಲಕಾಲಕ್ಕೆ ಈ ಮಹಾಪುರುಷರೇ ನಮ್ಮ ಮಾರ್ಗದರ್ಶಕರು. ಅಂತಹವರ ಪೈಕಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಅತ್ಯುನ್ನತ ಪದವಿ ಪಡೆದು ಅಷ್ಟೇ ಮೇಲ್ಮಟ್ಟದ ಪ್ರಶಸ್ತಿಗೆ ಭಾಜನರಾದ ಸರ್ವಪಲ್ಲಿ ರಾಧಕೃಷ್ಣನ್‌ರನ್ನು ನೆನಪಿಸುವ ಕಾರ್ಯಕ್ರಮವೇ ಶಿಕ್ಷಕರ ದಿನಾಚರಣೆ ಎಂದು ಪದವಿ ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ನುಡಿದರು.
ಅವರು ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಪಾತ್ರದ ಮಹತ್ವವನ್ನು ವಿವರಿಸಿದರು. ಉಪನ್ಯಾಸಕರು ತಮ್ಮನ್ನು ರೂಪಿಸಿದ ಶಿಕ್ಷಕರನ್ನು ನೆನಪಿಸಿಕೊಂಡರು ಅಲ್ಲದೇ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘಗಳು ಪ್ರತ್ಯೇಕವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಅಲ್ಲಿ ತಮಗೆ ಪ್ರೇರಣೆ ನೀಡಿದ ಶಿಕ್ಷಕರನ್ನು ನೆನಪು ಮಾಡಿಕೊಳ್ಳುವ ಭಾವನಾತ್ಮಕ ಕಾರ್ಯಕ್ರಮ ಇದಾಗಿತ್ತು.
ಈ ಸಂದರ್ಭದಲ್ಲಿ ಕಾಲೇಜು ವಾರ್ಷಿಕ ಸಂಚಿಕೆ ರಾಮಧ್ವನಿಯನ್ನು ಎಲ್ಲಾ ಶಿಕ್ಷಕರು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.
ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಎಲ್ಲಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ತೇಜಸ್ವಿನಿ ವೈಯಕ್ತಿಕ ಗೀತೆ ಹಾಡಿ, ತ್ರಿವೇಣಿ ಸ್ವಾಗತಿಸಿ, ಅಖಿಲಾ ವಂದಿಸಿ, ಅನುಷಾ ಕಾರ್ಯಕ್ರಮ ನಿರೂಪಿಸಿದರು.

Leave a Reply