ಶ್ರೀರಾಮ ಪ್ರೌಢಶಾಲೆಯಲ್ಲಿ – ಕ್ಷೇತ್ರ ಪ್ರಚಾರ ನಿರ್ದೇನಾಲಯ ಇಲಾಖಾ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ

ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಕಾರ‍್ಯಕ್ರಮ. ಜನರು ಮತ್ತು ಸರ್ಕಾರದ ನಡುವೆ ಸೇತುವೆಯ ರೀತಿ ಕಾರ‍್ಯ ನಿರ್ವಹಿಸಿ, ಜನರ ಕಷ್ಟ ಸುಖಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ, ಕೇಂದ್ರ ಸರ್ಕಾರದ ಕಾರ‍್ಯಕ್ರಮಗಳು ಜನೋಪಯೋಗಿ ಆಗುವಂತೆ ಯೋಜನೆಗಳನ್ನು ರೂಪಿಸುವಲ್ಲಿ ಈ ನಿರ್ದೇಶನಾಲಯ ಮಹತ್ವದ ಪಾತ್ರ ವಹಿಸುತ್ತಿದೆ. ಚಲನ ಚಿತ್ರ, ಗುಂಪು ಚರ್ಚೆ, ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ ಮುಂತಾದವುಗಳನ್ನು ಗ್ರಾಮೀಣ ಮಟ್ಟದಲ್ಲಿ ಏರ್ಪಡಿಸಿ, ಜನರಲ್ಲಿ ರಾಷ್ಟ್ರೀಯ ಏಕತೆ, ಕುಡಿತದ ಚಟದ ಅನಿಷ್ಟ ಪರಿಣಾಮಗಳು, ಸಾಮಾಜಿಕ ಅಸ್ಪ್ರಶ್ಯತೆ ಬಗ್ಗೆ ತಿಳುವಳಿಕೆಯನ್ನು ನೀಡುವುದು ಈ ಇಲಾಖೆಯ ಕೆಲವೇ ಕಾರ‍್ಯಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ಜನರ ಬಳಿಗೆ, ಕುಗ್ರಾಮಗಳಿಗೆ ಹೋಗುವ ಒಂದೇ ಒಂದು ಮಾಧ್ಯಮ ಘಟಕ ಕ್ಷೇತ್ರ ಪ್ರಚಾರ ನಿರ್ದೇನಾಲಯ.
೮ಮತ್ತು ೯ನೇ ತರಗತಿಯ ೫೩೭ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಶ್ರೀ ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ವಸಂತ ಮಾಧವ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Leave a Reply