ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ

ಶ್ರೀರಾಮ ವರ್ತುಲ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರ
ಯಾವುದೇ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸಮಾಜದ ಬಗ್ಗೆ ಉತ್ತಮವಾದ ಭಾವನೆ ಹೊಂದಿ ಸಮಾಜಕ್ಕಾಗಿ ತನ್ನ ಬದುಕನ್ನು ಸವೆಸುವಂತಾಗಬೇಕು. ಸರ್.ಎಂ.ವಿಶ್ವೇಶ್ವರಯ್ಯನವರು ಈ ರೀತಿ ಬದುಕಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಂಡರು. ಅಂತಹ ಸಾರ್ಥಕ ಬದುಕನ್ನು ಬದುಕುವ, ಉತ್ತಮ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ.) ಪುತ್ತೂರು ನಡೆಸುತ್ತಿದೆ. ವಿದ್ಯಾವರ್ಧಕ ಸಂಘದ ಈ ದೃಷ್ಟಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರ ಮನಸ್ಸುಗಳನ್ನು ಈ ಕಾರ್ಯಕ್ಕೆ ತಯಾರುಗೊಳಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿ ಎಂದು ಶ್ರೀ ರಮೇಶ ಎನ್ ಸಹಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ ತಿಳಿಸಿದರು.
ಅವರು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ.) ಪುತ್ತೂರು ಇದರ ವತಿುಂದ ನಡೆದ ಶ್ರೀರಾಮ ಹಾಗೂ ವಿವೇಕಾನಂದ ವರ್ತುಲಗಳ ಅಧ್ಯಾಪಕರ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ| ರಾಜೇಶ್ ಕುಮಾರ್ ಶೆಟ್ಟಿ, ಶ್ರೀ ಗಿರೀಶ್, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲದ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ರೈ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಳಿನಿ ವಾಗ್ಲೆ, ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು, ಶ್ರೀರಾಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವಸಂತಿಕುಮಾರಿ ಪಿ,, ವರ್ತುಲ ಸಂಯೋಜಕರಾದ ಶ್ರೀ ಚಂದ್ರಶೇಖರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಪರಿವೀಕ್ಷಕರಾದ ಶ್ರೀ ರಘುರಾಜ್ ಉಬರಡ್ಕ ಪ್ರಸ್ತಾವನೆಗೈದರು. ವರ್ತುಲ ಸಂಯೋಜಕರಾದ ಶ್ರೀರಾಮ ಪ್ರೌಢಶಾಲಾ ಸಹ ಶಿಕ್ಷಕರಾದ ಶ್ರೀ ವಿನೋದ್ ಶೆಟ್ಟಿ ಸ್ವಾಗತಿಸಿದರು. ಶ್ರೀರಾಮ ಪ್ರೌಢಶಾಲೆಯ ಗಣಕಶಿಕ್ಷಕಿ ಶ್ರೀಮತಿ ಸ್ವಾತಿ ಆಶಯ ಗೀತೆ ಹಾಡಿದರು. ಶ್ರೀರಾಮ ಪ್ರೌಢಶಾಲೆಯ ಸಹಶಿಕ್ಷಕರಾದ ಶ್ರೀ ಶಿವರಾಜ್ ವಂದಿಸಿ, ಸಹಶಿಕ್ಷಕಿ ಶ್ರೀಮತಿ ವಿಜಯ ಕಾರ್ಯಕ್ರಮ ನಿರೂಪಿಸಿದರು.

Leave a Reply