ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ ಸಮಾರೋಪ

ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ photos

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ಅಕ್ಟೋಬರ್ ೧೦ ರಿಂದ ಆರಂಭಗೊಂಡ ಉತ್ಥಾನ ರಾಷ್ಟ್ರೀಯ ಬಾಲಿಕಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭವು ಅಕ್ಟೋಬರ್ ೧೬ರಂದು ವಿದ್ಯಾಕೇಂದ್ರದ ಸಾಧನಾ ಭವನದಲ್ಲಿ ನಡೆುತು.
‘ಜೀವನದ ಉನ್ನತಿಗೆ ಸಮಾಜದ ನೆಮ್ಮದಿಗೆ ಅಗತ್ಯ ಎನಿಸಿದ ಇಂತಹ ಶಿಬಿರಗಳಲ್ಲಿ ನಾವು ಪಾಲ್ಗೊಳ್ಳಬೇಕು. ನಮ್ಮ ಸಮಾಜದ ಅಡಿಪಾಯ ಕುಟುಂಬ, ಕುಟುಂಬದ ನಿರ್ವಹಣೆ ಮಾಡಬೇಕಾದ ತಾಯಂದಿರು ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ. ಆಕೆ ದುರ್ಗೆಯಂತೆ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಸ್ತ್ರೀವಾದ ಎನ್ನುವಂತಹ ಪಾಶ್ಚಾತ್ಯ ಪರಿಕಲ್ಪನೆಗಳು ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುವ ಆಧಾರಸ್ತಂಭವನ್ನೇ ಕಳಚಿ ಬಿಡುವ ಕೆಲಸ ಸಮಾಜದಲ್ಲಿ ಇತ್ತೀಚೆಗೆ ನಡೆಯುತ್ತಾ ಬಂದಿದೆ. ಸಹನೆ, ತಾಳ್ಮೆ ಮತ್ತು ದಾರಿ ತಿದ್ದುವ ಕೆಲಸ ಮಾಡುವ ಸ್ತ್ರೀ ಜನ್ಮವೇ ದೊಡ್ಡದು, ಸಹಜವಾದ ವಿಧಾನದಿಂದ ಜೀವನ ಪಾವನ. ಈ ಶಿಬಿರದ ಪ್ರಯೋಜನವನ್ನು ಪಡೆದು ಇಲ್ಲಿ ಕಲಿತ ಸಿದ್ಧಾಂತವನ್ನು ಪ್ರತ್ಯಕ್ಷ ಪ್ರಾಯೋಗಿಕವಾಗಿ ಮಾಡಿದರೆ ಶಿಬಿರ ಸಾರ್ಥಕ್ಯ’ ಎಂದು ಮುಖ್ಯ ಅತಿಥಿಗಳಾಗಿ ಭಾಗವ”ಸಿದ ಶ್ರೀ ಗಜಾನನ ಪೈ , ಸಹ ವ್ಯವಸ್ಥಾಪಕರು, ಏಔಅಐ,ಮಂಗಳೂರು ಇವರು ನುಡಿದರು.
‘ಉದ್ಘಾಟನೆುಂದ ಪ್ರಾರಂಭಗೊಂಡು ಈವರೆಗಿನ ಪ್ರತಿಯೊಂದು ಅವಧಿಯೂ ಕೂಡ ಅದ್ಭುತವಾಗಿತ್ತು, ಹೆಣ್ಣು ಮಕ್ಕಳು ಸಮಾಜದಲ್ಲಿ ಹೇಗೆ ಇರಬೇಕು, ಜೀವನದಲ್ಲಿ ಹೇಗೆ ಮುಂದೆ ಬರಬೇಕು, ಮುಂದೆ ಜೀವನದಲ್ಲಿ ಬೆಳೆಯುತ್ತಾ ಹೋದ ಹಾಗೆಯೇ ಮನಸ್ಸು ಬದಲಾಗುವ ಸಾಧ್ಯತೆಗಳಿವೆ. ಆದ ಕಾರಣ ಯಾವುದೇ ಒಂದು ಕ್ಷಣಿಕ ಆಸೆಗೋಸ್ಕರ ನಿಮ್ಮ ಮನಸ್ಸನ್ನು ಬದಲಾುಸಬೇಡಿ. ಶಿಬಿರದಲ್ಲಿ ಹೇಳಿದಂತಹ ವಿಚಾರಗಳನ್ನೆಲ್ಲಾ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಶಿಬಿರಾಧಿಕಾರಿಯಾದ ಮುಂಡಾಜೆ ಪ್ರೌಢಶಾಲೆಯ ಮುಖ್ಯೋಪಾಧ್ಯಾುನಿ ಜಯಂತಿ ಇವರು ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಮಾರ್ಗದರ್ಶಕರಾದ ಡಾ|| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ, ಶಿಶುಮಂದಿರದ ಮುಖ್ಯ ಮಾತಾಜಿ ಭಗಿನಿ ಗಂಗಾ ಉಪಸ್ಥಿತರಿದ್ದರು. ರಮ್ಯಾ ಶಿಬಿರದ ವರದಿ ಮಂಡಿಸಿ, ವಿನುತಲಕ್ಷ್ಮಿ ಸ್ವಾಗತಿಸಿ, ಸ್ವಾತಿ ವಂದಿಸಿ, ವಿದ್ಯಾಶ್ರೀ ಎನ್ ಕಾರ್ಯಕ್ರಮ ನಿರೂಪಿಸಿದರು.

Leave a Reply