ಸನಾತನ ಸಂಸ್ಕೃತಿಯ ಪ್ರತಿರೂಪ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿದೆ. ನಮ್ಮ ಭಾಷೆ ನಡೆ ನುಡಿ ಪರಪರೆಗಳು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉತ್ತಮ ಶಿಕ್ಷಣದಿಂದ ಮಾತ್ರದೇಶಕ್ಕೆ ಉತ್ತಮ ಭವಿಷ್ಯವಿದೆ. ಎಂದು ಉದಯವಾಣಿ ಸುದ್ದಿ ಸಂಸ್ಥೆಯ ಮುಖ್ಯಸ್ಥ ಹಿರಿಯ ಪತ್ರಕರ್ತ ಮನೋಹರ ಪ್ರಸಾದ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ೧೦ನೇತರಗತಿ ವಿದ್ಯಾರ್ಥಿಗಳ ದೀಕ್ಷಾಂತ ಮತ್ತು ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ರಾಮಾಯಾಣ iಹಾಭಾರತ ಮಹಾಕಾವ್ಯಗಳಾಗಿದ್ದು, ಅವು ಪುರಾಣಗಳಲ್ಲ. ಇತಿಹಾಸದಲ್ಲಿ ನಡೆದು ಹೋದ ಘಟನೆಗಳು ಜೀವನಕ್ಕೆ ಸ್ಫೂತ್ರಿದಾಯಕವಾಗಿವೆ. ವಿದ್ಯಾರ್ಥಿಗಳು ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಂಡು ಏಕಾಗ್ರತೆಯಿಂದ ಗುರಿ ಸಾಧನೆ ಮಾಡಬೇಕುಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಶುಮಂದಿರ, ಪ್ರಾಥಮಿಕ ಶಾಲೆಯ ಚಟುವಟಿಕೆಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಶುಮಂದಿರದಿಂದ ಪದವಿ ತರಗತಿಯವರೆಗೆ ಉತ್ತಮ ವ್ಯಕ್ತಿತ್ವದ ಶಿಕ್ಷಣದೊಂದಿಗೆ ಸಮಾಜ ಮತ್ತು ರಾಷ್ಟಕ್ಕೆ ವಿಶೇಷ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ|| ಪ್ರಭಾಕರ್ ಭಟ್ ಮಾತನಾಡಿವಿದ್ಯಾಕೇಂದ್ರ ಬೆಳದು ಬಂದ ಬಗೆಯನ್ನು ತಿಳಿಸಿ, ನಮ್ಮತನವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳ ಮೂಲಕ ಬೆಳೆಸುವ ಕಾರ್ಯ ನಮ್ಮದಾಗಿದೆ. ಮೂಲ ನಂಬಿಕೆಯೊಂದಿಗೆ ಹಿಂದುತ್ವದ ಶಿಕ್ಷಣ ಜಗತ್ತಿನ ಒಳ್ಳೆಯದಕ್ಕೆ ಅಗತ್ಯವಾಗಿದೆಎಂದು ತಿಳಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಡಾ|| ಎಸ್. ಎಮ್ ಹೆಗ್ಡೆ ಮಂಗಳೂರು, ಯುವ ಉದ್ಯಮಿ ನಿಶಾನ್ ಆಳ್ವ ಬಂಟ್ವಾಳ, ರಶ್ಮಿ ಆಳ್ವ, ದೇವಪ್ಪ ಶೆಣೈ ಸಿಂಗಾಪುರ, ರೇಷ್ಮಾ ಶೆಣೈ, ರೋಹಿಣಿ ಬಾಳಿಗಾ, ಉದ್ಯಮಿ ಕೃಷ್ಣಪ್ರಶಾಂತ್ ಪುತ್ತೂರು, ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಾಣ ಸೋಮಾಯಾಜಿ, ಕಾರ್ಯನಿರ್ವಾಹಣಾಧಿಕಾರಿ ವಸಂತ ಮಾಧವ, ಮುಖ್ಯೋಪಾಧ್ಯಾಯ ರಮೇಶ ಎನ್, ಡಾ|| ಕಮಲ ಪ್ರ.ಭಟ್, ವಿಶ್ವನಾಥ ಪ್ರಭು ಉಪಸ್ಥಿತರಿದ್ದರು. ಶಿಕ್ಷಕ ಜಯಾನಂದ ಪೆರಾಜೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ಆರಂಭದಲ್ಲಿ ೧೦ನೇ ವಿದ್ಯಾರ್ಥಿಗಳು ೯ನೇ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿ ಶಾಲೆಗೆ ತಮ್ಮಕೊಡುಗೆಯನ್ನು ಸಂಚಾಲಕರಿಗೆ ಸರ್ಮಪಿಸಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಿ ಆರ್ಶಿವಾದಿಸಿದರು. ವಿದ್ಯಾರ್ಥಿಗಳಾದ ಲೋಹಿತ್, ರಜನ್, ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.