ದಿನಾಂಕ 27.8.2018
ಚುಟುಕು ಸಾಹಿತ್ಯ ಕೇವಲ ನಾಲ್ಕು ಗೆರೆಗಳನ್ನು ಹೊಂದಿದ್ದರೂ, ಅದರ ಪ್ರಭಾವ ನಾನಾ ಅರ್ಥಗಳನ್ನು ಹೊಂದಿದೆ. ಪ್ರಸ್ತುತ ಸಮಾಜಕ್ಕೆ ಅದರದ್ದೇ ಆದ ಪ್ರಭಾವ ಬೀರುತ್ತಿದೆ. ಇಂತಹ ಚುಟುಕುಗಳನ್ನು ನಮ್ಮ ವಿದ್ಯಾರ್ಥಿನಿ ರಚಿಸಿರುವುದು ಸಂತಸದ ಸಂಗತಿ ಹಾಗೂ ಇನ್ನೂ ಅನೇಕ ಕವನಗಳನ್ನು ರಚಿಸಿ ಸಾಹಿತ್ಯಕ್ಕೆ ಕೊಡುಗೆ ನೀಡುವಂತಾಗಲಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಿದ್ಯಾರ್ಥಿನಿ ಕು. ಕೀರ್ತನಾ ಇವರಿಗೆ ಶುಭಾಶೀರ್ವಾದ ಮಾಡಿದರು.
ಇವರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ನಡೆದ ೯ನೇ ತರಗತಿ ವಿದ್ಯಾರ್ಥಿನಿ ಕೀರ್ತನಾಳ “ಮೊದಲ ಹೆಜ್ಜೆ” ಎಂಬ ಚುಟುಕು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಸಾಹಿತ್ಯ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು. ಕೀರ್ತನಾಳಂತ ಮಕ್ಕಳಿಂದ ಇದು ಸಾಧ್ಯ. ಮುಂದೊಂದು ದಿನ ಹೆಸರಾಂತ ಕಮತ್ರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತದೆ. ಈ ಪ್ರತಿಭೆ ರಾಜ್ಯ-ರಾಷ್ಟ್ರದಾದ್ಯಂತ ಪಸರಿಸಲಿ ಎಂದು “ಅಮೃತ ಪ್ರಕಾಶನ” ಕನ್ನಡ ಮಾಸಿಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿಯಾದ ಮಾಲತಿ ಶೆಟ್ಟಿ ಇವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಾಯಕರು ಹಾಗೂ ಪುಸ್ತಕ ಮುದ್ರಿಸಿ ತಯಾರಿಸಿದ ಡಾ|| ಹೆಚ್.ಸಿ ಅಶೋಕ್ ಕಾಸರಗೋಡು ಮತ್ತು ಅವರ ಧರ್ಮಪತ್ನಿ ಗಾಯತ್ರಿ ಕಾಮತ್, ಶ್ರೀರಾಮ ವಿದ್ಯಾಕೇದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಹಾಗೂ ಸಹಸಂಚಾಲಕರಾದ ಶ್ರೀ ರಮೇಶ ಎನ್, ಕಶೆಕೋಡಿ ಸೂರ್ಯನಾರಾಯಣ ಭಟ್, ಕೀರ್ತನಾಳ ತಾಯಿ ಬಬಿತಾ, ಮುಖ್ಯಶಿಕ್ಷಕಿ ವಸಂತಿಕುಮಾರಿ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
photo: http://srvk.org/rakshabandhana-programme/