ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ೨೦೧೫-೧೬ನೇ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ ೧೮.೦೬.೨೦೧೫ ರಂದು ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ತಿಲಕ ಇಟ್ಟು ಆಶಿರ್ವದಿಸಿದರು. ವಿದ್ಯಾರ್ಥಿಗಳು ಅಗ್ನಿಗೆ ಘೃತಾಹುತಿ ನೀಡುವ ಮೂಲಕ ತಮ್ಮ ವಿದ್ಯಾಭ್ಯಾಸವು ಸಾಂಗವಾಗಿ ಸಾಗಲು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕೇವಲ ವಿದ್ಯೆ ಕೊಡುವುದು ಶಾಲೆಯ ಕೆಲಸವಲ್ಲ, ವಿದ್ಯೆಯ ಜೊತೆಗೆ ಸಂಸ್ಕಾರವನ್ನು ನೀಡುವುದು ಶಾಲೆಯ ಕರ್ತವ್ಯ. ಯಾವ ಕ್ಷೇತ್ರದಲ್ಲಿ ಮುಂದುವರಿದರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವರಾದ ಕೃಷ್ಣ.ಜೆ. ಪಾಲೆಮಾರ್, ಬೆಂಗಳೂರಿನ ಉದ್ಯಮಿಗಳಾದ ಶ್ರೀಯುತ ಚೇತನ್ ಹಾಗೂ ಶ್ರೀಯುತ ಮಹೇಶ್ ಕಾರಂತ, ಪುತ್ತೂರಿನ ಜೆ.ಕೆ ಕನ್ಸ್ಟ್ರಕ್ಷನ್ ನ ಮಾಲಕರಾದ ಶ್ರೀಯುತ ಜಯಕುಮಾರ್ ಮತ್ತು ಅವರ ಪತ್ನಿ ಸುನೀತಾ, ಶ್ರೀಮತಿ ಶ್ವೇತಾ ಪುರುಷೋತ್ತಮ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ೨೦೧೪-೧೫ ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅದ್ಯಕ್ಷರಾದ ಶ್ರೀ ನಾರಾಯಣ ಸೋಮಯಜಿ, ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ವಸಂತ ಮಾಧವ, ಕಮಲಾ ಪ್ರಭಾಕರ ಭಟ್, ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು, ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶಿವಗಿರಿ ಸತೀಶ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೂಪಕಲಾ ಮಾತಾಜಿ ನಿರೂಪಿಸಿ, ಶಿವಗಿರಿ ಸತೀಶ್ ಭಟ್ ರವರು ಸ್ವಾಗತಿಸಿ, ರವಿರಾಜ್ ಶ್ರೀಮಾನ್ ದನ್ಯವಾದಗೈದರು.