ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯ ಮತ್ತು ಬೋಧನಾ ತಂತ್ರಗಳ ಅಭಿವೃದ್ಧಿ, ಅಕ್ಷರ ಶಿಕ್ಷಕರ ಕಾರ್ಯಾಗಾರ

 

11.9.2018

ಶಿಕ್ಷಕ ಎಂದರೆ ಮಗುವಿಗೆ ಕೇವಲ ಪಠ್ಯ ವಿಷಯಗಳನ್ನು ಬೋಧಿಸುವವರು ಮಾತ್ರ ಅಲ್ಲ, ಬದಲಾಗಿ ಮಗುವಿನಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಾಯೋಜಕನಾಗಬೇಕು. ಭಾಷಾ ಅಧ್ಯಾಪಕರು ಐಚ್ಛಿಕ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಮಾತ್ರ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಯಲು ಸಾಧ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕರವರು ಪ್ರೌಢಶಾಲಾ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಇವರು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಸಹಯೋಗದೊಂದಿಗೆ, ಅಕ್ಷರ ಫೌಂಡೇಶನ್ (ರಿ) ಮೈಸೂರು, ಮಂಗಳೂರು ಶಾಖೆ ವತಿಯಿಂದ ನಡೆದ, ಪ್ರೌಢಶಾಲಾ ಶಿಕ್ಷಕರ ಬೋಧನಾ ಸಾಮರ್ಥ್ಯ ಮತ್ತು ಬೋಧನಾ ತಂತ್ರಗಳ ಅಭಿವೃದ್ಧಿ, ಅಕ್ಷರ ಶಿಕ್ಷಕರ ಕಾರ್ಯಾಗಾರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಾಗಾರವನ್ನು ಶ್ರೀ ಸುನಿಲ್ ಮೈಸೂರು, ಅಧ್ಯಕ್ಷರು ಅಕ್ಷರ ಫೌಂಡೇಶನ್ (ರಿ) ಮತ್ತು ರಾಷ್ಟ್ರಮಟ್ಟದ ತರಬೇತುದಾರರು ಇವರು ನಡೆಸಿಕೊಟ್ಟರು.
ಪ್ರಸ್ತುತ ನಂದಾವರ ಪ್ರೌಢಶಾಲೆಯ ಶಿಕ್ಷಕರು ಹಾಗೂ ನಿಕಟಪೂರ್ವ ಶಿಕ್ಷಣ ಸಂಯೋಜಕರಾದ ಶ್ರೀ ಶ್ರೀಕಾಂತ್‌ರವರು ಮಾತನಾಡಿ, ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ನೀಡಬೇಕಾದರೆ ಶಿಕ್ಷಕರ ಬೋಧನಾಸಾಮರ್ಥ್ಯ ವೃದ್ಧಿಯಾಗಬೇಕು ಎನ್ನುವ ಸದುದ್ದೇಶದಿಂದ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಶಿಕ್ಷಕರ ಕಾರ್ಯಾಗಾರವನ್ನು ಮಾಡಲಾಗಿದೆ. ಇದರ ಸದುಪಯೋಗ ಎಲ್ಲಾ ಶಿಕ್ಷಕರು ಪಡೆದುಕೊಳ್ಳಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಇವರು ಮಾತನಾಡಿ, ಸಮಾಜದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸಿಸಲು ಪ್ರಧಾನ ಕಾರಣ ಶಿಕ್ಷಕ ಆದ್ಧರಿಂದ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಿವಪ್ರಕಾಶ್ ಉಪಸ್ಥಿತರಿದ್ದು, ಜೀವನ ಯಶಸ್ವಿಗೊಳಿಸಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ಧರಿಂದ ಭಾಷಾ ಶಿಕ್ಷಕರು ಮಕ್ಕಳ ಕೌಶಲ್ಯವನ್ನು ವೃದ್ಧಿಪಡಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲಾ ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಾಲಕರಾದ ಶ್ರೀ ರಮೇಶ ಎನ್, ಅಕ್ಷರ ಫೌಂಡೇಶನ್‌ನ ಕಾರ್ಯದರ್ಶಿ ಶ್ರೀಮತಿ ರಾಜಲಕ್ಷ್ಮೀ ಸುನೀಲ್, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ವಸಂತಿಕುಮಾರಿ ಹಾಗೂ ಕಾರ್ಯಾಗಾರಕ್ಕೆ ಆಗಮಿಸಿದ ವಿವಿಧ ಶಾಲೆಗಳ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಕ್ಷರ ಫೌಂಡೇಶನ್ ರಾಜ್ಯ ಸಂಯೋಜಕರಾದ ಶ್ರೀ ದೇವಿಪ್ರಸಾದ್ ಸ್ವಾಗತಿಸಿ, ಅಕ್ಷರ ಫೌಂಡೇಶನ್ ಪುತ್ತೂರು ತಾಲೂಕಿನ ಕಾರ್ಯದರ್ಶಿ ಶ್ರೀ ತೇಜಕುಮಾರ್ ವಂದಿಸಿದರು. ಶ್ರೀ ಜಿನ್ನಪ್ಪ ಸಹಶಿಕ್ಷಕರು, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply