ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವಠಾರದಲ್ಲಿ ದಿನಾಂಕ ೧೦.೧೨.೨೦೧೬ ರಿಂದ ೧೮.೧೨.೨೦೧೬ ರವರೆಗೆ ಬೃಹತ್ ಪುಸ್ತಕ ಮೇಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಇದರ ಉದ್ಘಾಟನೆಯನ್ನು ಜಪ್ರೋ ಅಂತರಾಷ್ಟ್ರೀಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ ರವಿವರ್ಮರ ವಂಶಸ್ಥರಾದ ಪ್ರಸ್ತುತ ಮುಂಬೈಯಲ್ಲಿ ದೇಶಿ ಗೋವುಗಳ ರಕ್ಷಣೆ, ಪಾಲನಾ ಕಾರ್ಯದಲ್ಲಿ ನಿರತರಾದ ಕು.ಸೀತಾ ವರ್ಮ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪುಸ್ತಕ ಮೇಳದಲ್ಲಿ ಮಕ್ಕಳ ಕಥೆ ಪುಸ್ತಕಗಳು, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿ ಪುರಾಣ, ಮಹಾಪುರುಷರು, ಗಣಿತ, ವಿಜ್ಞಾನ, ಮಾನವೀಯ ಮೌಲ್ಯಗಳು, ವ್ಯಕ್ತಿತ್ವ ವಿಕಸನ ಹಾಗೂ ಮಕ್ಕಳ ಭೌದ್ಧಿಕ ವಿಕಾಸಕ್ಕೆ ಸಂಬಂಧಿಸಿ ಹಲವು ಪುಸ್ತಕಗಳು ಹಾಗೂ ಇವುಗಳ ಇಂಗ್ಲೀಷ್ ಆವೃತ್ತಿಗಳ ಪುಸ್ತಕಗಳು ಕೂಡಾ ದೊರೆಯುತ್ತದೆ. ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ, ಕೋಶಾಧಿಕಾರಿ ಸತೀಶ ಭಟ್ ಶಿವಗಿರಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು, ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಶಿವಾಜಿ ಭಟ್, ಪದ್ಮನಾಭ ಪಿಕೆ., ಉಪಸ್ಥಿತರಿದ್ದರು.