ದಿನಾಂಕ 17.06.2015 ರಂದು ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಹೊಸದಾಗಿ ದಾಖಲುಗೊಂಡ ವಿದ್ಯಾರ್ಥಿಗಳನ್ನು ಆಗತ-ಸ್ವಾಗತದ ವಿಶಿಷ್ಟ ಕಾರ‍್ಯಕ್ರಮದ ಮೂಲಕ ಪ್ರವೇಶೋತ್ಸವ ನಡೆಯಿತು. ಯಜ್ಞಕ್ಕೆ ಘೃತವನ್ನು ಅರ್ಪಿಸಿ ವೇದಿಕೆಯಲ್ಲಿರುವ ಹಿರಿಯರ ಆಶೀರ್ವಾದ ಪಡೆದು ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡರು.
ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗತ-ಸ್ವಾಗತದ ಮಹತ್ವನ್ನು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ವಿದ್ಯಾಭ್ಯಾಸದ ಪ್ರಕ್ರಿಯೆ ಒಂದು ವೈಜ್ಞಾನಿಕ ಸೂತ್ರದಲ್ಲಿ ನಡೆದುಕೊಂಡು ಬಂದಿದೆ.
ವಿದ್ಯೆ ಸರ್ವಾಂಗೀಣ ಪ್ರಗತಿ. ಸ್ವಾರ್ಥ, ವಂಚನೆ, ಕಪಟವನ್ನು ಮೀರುವುದೇ ಇದರ ಮುಖ್ಯ ತತ್ವ ಎಂದು ತಿಳಿಸಿದರು.
ಕಾರ‍್ಯಕ್ರಮದಲ್ಲಿ ಶ್ರೀ ಕುಮಾರ್, ದುರ್ಗಾ ಮೋಟಾರ‍್ಸ್ ಮಾಲಕರು ಮಂಗಳೂರು ಮಹಾಬಲ ಕೊಟ್ಟಾರಿ. ಎಂ.ಎಂ.ಸಿ.
ಕನ್‌ಸ್ಟ್ರಕ್ಷನ್ ಮಂಗಳೂರು, ಶ್ರೀಕರ ಪ್ರಭು, ಶ್ರೀನಿಧಿ ಎಸೋಸಿಯೇಶನ್ ಮಂಗಳೂರು, ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು,
ಶ್ರೀ ನಾಗೇಶ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಸಂಸ್ಥೆಯ ಅಧ್ಯಕ್ಷರು ಬಿ. ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.