ಶ್ರೀರಾಮ ಪದವಿ ಕಾಲೇಜಿನಲ್ಲಿ ರಕ್ಷಾಬಂಧನ ಪ್ರದ್ಯೋತ ಸಂಸ್ಕೃತ ಸಂಘ ಉದ್ಘಾಟನೆ


ಕಲ್ಲಡ್ಕ, ಆ: 28, ಜಗತ್ತಿನಲ್ಲಿಯೇ ಭಾವನೆಯನ್ನು ತುಂಬಿಕೊಂಡಿರುವ ದೇಶ ಭಾರತ. ನೂರಾರು ಭಾಷೆ ಸಂಸ್ಕೃತಿಗಳಿದ್ದರೂ ಅದರದ್ದೇ ಆದ ವಿಶೇಷತೆಯ ಕಾರಣಕ್ಕೆ ಒಂದು ಬಹು ಸಂಸ್ಕೃತಿಯ ರಾಷ್ಟ್ರವಾಗಿ ಬೆಳೆದಿದೆ. ಶ್ರಾವಣ ಹುಣ್ಣಿಮೆಯ ದಿವಸ ಅಚರಿಸುವ ರಕ್ಷಾಬಂಧನವನ್ನು ಎಲೆ ಮರೆಯ ಕಾುಯಂತೆ ನಮ್ಮ ವಿದ್ಯಾ ಕೇಂದ್ರದ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ಆಚರಿಸಿಕೊಳ್ಳುತ್ತಿರುವುದು ಅದ್ಭುತವಾದ, ಭಾವನಾತ್ಮಕ ಕಾರ್ಯಕ್ರಮವಷ್ಟೇ ಅಲ್ಲದೇ ಹೊಸ ಕಲ್ಪನೆ ಹಾಗೂ ಯೋಜನೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಶ್ರೀರಾಮ ಪದವಿ ಕಾಲೇಜಿನ ಪ್ರದ್ಯೋತ ಸಂಸ್ಕೃತ ಸಂಘ ಆಯೋಜಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸ್ತುತ ರಕ್ಷಾಬಂಧನದ ಆಚರಣೆಯ ಅನಿವಾರ್ಯತೆ ನೆನಪಿಸಿ ನಮ್ಮ ಧರ್ಮ, ಸಂಸ್ಕೃತಿ, ಆಚರಣೆ, ವೇಷಭೂಷಣ, ಪದ್ಧತಿ, ಯೋಚನಾ ಶೈಲಿ ಹಾಗೂ ನಡವಳಿಕೆಗಳು ಎಲ್ಲಿ ದಾರಿ ತಪ್ಪಿದೆ ಎಂಬುದನ್ನು ವಿವರಿಸುವುದರ ಜೊತೆಗೆ ಸ್ವಚ್ಛತಾ ಸಿಬ್ಬಂದಿ ಎಂದರೆ ನಮ್ಮ ಕುಟುಂಬಕ್ಕೆ ಸೇರಿದ ಸದಸ್ಯರು ಎಂಬ ಭಾವನೆ ಬೆಳೆಸಿಕೊಂಡು, ಸ್ವಚ್ಛತೆಯ ಕೆಲಸ ಕೇವಲ ಅವರಿಗಷ್ಟೇ ಸೀಮಿತವಲ್ಲದೇ ನಮಗೂ ಇದೆ. ಮನದ, ಮನೆಯ, ಸಮಾಜದಲ್ಲಿರುವ ಕೆಡುಕನ್ನು ಗುಡಿಸಿ ಒಳಿತನ್ನು ಉಳಿಸುವ ಸಂಕಲ್ಪ ರಕ್ಷಾಬಂಧನದ ಮೂಲಕ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರದ್ಯೋತ ಸಂಸ್ಕೃತ ಸಂಘದ ಉದ್ಘಾಟನೆ ಹಾಗೂ ಸಂಸ್ಕೃತ ಸಪ್ತಾಹದ ಆಚರಣೆಯು ಜೊತೆಯಾಗಿ ನಡೆುತು. ಸಂಸ್ಕೃತ ಭಾಷೆಯಲ್ಲಿಯೇ ಕಾರ್ಯಕ್ರಮ ನಡೆದುದು ವಿಶೇಷವಾಗಿತ್ತು. ವಿದ್ಯಾಸಂಸ್ಥೆಯ ಹದಿನೆಂಟು ಜನ ಸ್ವಚ್ಛತಾ ಸಹಾಯಕರು ಭಾಗವಹಿಸಿದ್ದು ಅವರಿಗೆಲ್ಲರಿಗೆ ರಕ್ಷೆ ಕಟ್ಟಿ ಪುಷ್ಪ ಗುಚ್ಛ ನೀಡಿ ಗೌರವಿಸಲಾುತು.
ವೇದಿಕೆಯಲ್ಲಿ ಶ್ರೀರಾಮ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಹೇಶ್ವರ ಭಟ್ ಹಾಗೂ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಸ್ತಾವನೆಗೈದು, ಪದವಿಯ ಪ್ರದ್ಯೋತ ಸಂಸ್ಕೃತ ಸಂಘದ ವಿದ್ಯಾರ್ಥಿಗಳಾದ ತ್ರಿವೇಣಿ ಸ್ವಾಗತಿಸಿ, ರಮ್ಯ ವಂದಿಸಿ, ಕಾರ್ಯಕ್ರಮವನ್ನು ಮಹಾಲಕ್ಷ್ಮೀ ನಿರೂಪಿಸಿದರು.

Leave a Reply