ಶ್ರೀರಾಮ ಪದವಿ ಕಾಲೇಜಿನಲ್ಲಿ ಹೆತ್ತವರ ಸಭೆ

 ಸೆ: ೦4, ನಮ್ಮವರಿಂದಲೇ ನಮ್ಮತನದ ನಾಶವಾದರೆ ಅದನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈ ರೀತಿಯ ವಿಕೃತ ಭಾವನೆ ಬೆಳೆಯದಂತೆ ಮಾಡಬೇಕಾದ ಕೆಲಸ ಶಿಕ್ಷಣದಿಂದಲೇ ಸಾಧ್ಯ. ಅಂತಹ ಶಿಕ್ಷಣವನ್ನು ಎಳಮೆಂದಲೇ ನೀಡಬೇಕಾದ ಅನಿವಾರ್ಯತೆಯಿದೆ. ಆ ಕೆಲಸವನ್ನು ನಮ್ಮ ವಿದ್ಯಾಸಂಸ್ಥೆ ಮಾಡುತ್ತಿದೆ. ಪದವಿ ಹಂತದಲ್ಲೂ ಪ್ರಾರ್ಥನೆ, ಭಜನೆ, ಸಭ್ಯತೆ, ಸಂಸ್ಕಾರ ಮೂಡಿಸಲು ಸಾಧ್ಯವೆಂಬ ವಿಶ್ವಾಸವೂ ಬಂದಿದೆ. ಇದಕ್ಕೆ ಪೋಷಕರ ಸಹಕಾರ ಅಗತ್ಯವಿದೆ. ಕಾಲೇಜಿನ ಒಳಗಡೆ ವಿದ್ಯಾರ್ಥಿಗಳು – ಶಿಕ್ಷಕರು ಜೊತೆಗಿರುತ್ತಾರೆ. ಆದರೆ ಆಡಳಿತ ಮಂಡಳಿಯ ಜೊತೆಗೆ ಸೇರಿಕೊಂಡು ಪಾಲಕರೂ ಕೂಡಾ ವಿದ್ಯಾರ್ಥಿಗಳ ಬಗೆಗೆ ಯೋಚನೆ ಮಾಡುವ ವೇದಿಕೆ ಇದು ಎಂದು ಪದವಿ ವಿಭಾಗದ ಪಾಲಕರ ಸಮಾವೇಶದಲ್ಲಿ ಪುತ್ತೂರು ವವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಕರ ಭಟ್ ಕಲ್ಲಡ್ಕ ನುಡಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಸ್ತಾವನೆಗೈದು, ಪದವಿ ವಿಭಾಗದ ವಾಣಿಜ್ಯ ಉಪನ್ಯಾಸಕಿ ಶೈಲಜಾ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ರಂಜಿತ್ ವಂದಿಸಿ, ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಯತಿರಾಜ್ ನಿರೂಪಿಸಿದರು.

Leave a Reply