ಡಾ| ಬಿ.ಆರ್. ಅಂಬೇಡ್ಕರ್ರವರು ಶೋಷಿತ ವರ್ಗದ ಭಾಗ್ಯದೇವತೆಯಾಗಿ ಶತಶತಮಾನಗಳಿಂದ ಸಮಾಜದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ, ಸಮಾಜದ ನೋವುಗಳನ್ನು ಸಹಿಸಿ, ಲಕ್ಷಾಂತರ ಶೋಷಿತವರ್ಗದ ಕಣ್ಣೀರು ಒರೆಸುವ, ಜೀವನವನ್ನೇ ಸವೆಸಿದ ರಾಷ್ಟ್ರಚಿಂತನೆಯೊಂದಿಗೆ, ರಾಷ್ಟ್ರ ಸಮರ್ಪಿತ ಜೀವನವನ್ನು ನಡೆಸಿದರು ಎಂದು ಶ್ರೀರಾಮ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ಶ್ರೀಮಾನ್ ಡಾ| ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಅಂಬೇಡ್ಕರ್ರವರು ನಡೆಸಿದ ಹೋರಾಟ, ಆಡಳಿತದಲ್ಲಿ ಮಾಡಿದ ಸಾಧನೆ, ಹಾಗೂ ಕಾನೂನುಗಳ ಬಗ್ಗೆ ಶ್ರೀ ರಾಜೇಶ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಬಂಟ್ವಾಳ ಇವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ಉಪಸ್ಥಿತರಿದ್ದರು.