ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಉಚಿತ ಕನ್ನಡಕ ವಿತರಣೆ 22.10.2020
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಪ್ರಸಾದ್ ನೇತ್ರಾಲಯ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ 10ದಿನಗಳ ಕಾಲ ಉಚಿತ ನೇತ್ರ ತಪಾಸಣಾ ಶಿಬಿರವು ಕಳೆದ ಜನವರಿ ತಿಂಗಳಿನಲ್ಲಿ ಜರಗಿತ್ತು. ನೇತ್ರ ತಪಾಸಣಾ ಸಂದರ್ಭದಲ್ಲಿ ಕನ್ನಡಕದ ಅವಶ್ಯಕತೆಯನ್ನು ತಿಳಿಸಿರುವವರಿಗೆ ದಿನಾಂಕ 22.10.2020ರಂದು ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸ ಧ್ಯಾನ ಮಂದಿರದಲ್ಲಿ ಉಚಿತವಾಗಿ ಕನ್ನಡಕವನ್ನು ವಿತರಿಸಲಾತು.
ಪ್ರಸಾದ್ ನೇತ್ರಾಲಯ ಮಂಗಳೂರು ಇದರ ಸಂಸ್ಥಾಪಕರಾದ ಡಾ| ಕೃಷ್ಣಪ್ರಸಾದ್ ಇವರು ಮಾತನಾಡಿ “ನಾವು ಈಗ ಉತ್ತಮ ಗುಣಮಟ್ಟದ ಕನ್ನಡಕವನ್ನು ನೀಡುತ್ತಿದ್ದೇವೆ. ಈ ವಿದ್ಯಾಕೇಂದ್ರದ ಪ್ರಮುಖರಿಂದ ಪತ್ರವನ್ನು ಪಡೆದು ನಮ್ಮ ಸಂಸ್ಥೆಗೆ ಬಂದಲ್ಲಿ ದ್ಟೃದೋಷ ಪರೀಕ್ಷೆ ಮತ್ತು ಕನ್ನಡಕದ ಬದಲಾವಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಅಲ್ಲದೆ ನಾವು ಮನೆ ಮನೆಗೆ ತೆರಳಿ ಅಂದರೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಇರುವವರಿಗೆ ಅವರ ಮನೆಯಲ್ಲಿಯೇ ಪರೀಕ್ಷೆ ಮಾಡಿ ಉಚಿತವಾಗಿ ಕನ್ನಡಕ ನೀಡುವ ಹೊಸ ಯೋಜನೆ ‘ಪೈಲೆಟ್ ಪ್ರಾಜೆಕ್ಟ್’ ನಡೆಸಲು ಉದ್ದೇಶಿಸಿದ್ದೇವೆ. ಅದನ್ನು ಈ ಗ್ರಾಮದಲ್ಲಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು”.
ಅಧ್ಯಕ್ಷತೆಯನ್ನು ವಹಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಇವರು “ಶ್ರೀರಾಮ ವಿದ್ಯಾಕೇಂದ್ರವು ಪ್ರತೀ ವರ್ಷ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯು ಸಂಸ್ಕಾರಯುತವಾದ ಶಿಕ್ಷಣದ ಜೊತೆಗೆ ಸಮಾಜದ ಹಿತವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಲ್ಲಿ ದ್ಟೃ ದೋಷ ನಿವಾರಣೆಯ ಕಾರ್ಯವು ಒಂದಾಗಿದೆ. ಈ ಕಾರ್ಯವನ್ನು ಪ್ರಸಾದ್ ನೇತ್ರಾಲಯ ಮಂಗಳೂರು ಇವರು ನಮ್ಮ ಸಂಸ್ಥೆಯಲ್ಲಿ ನಡೆಸಿರುವುದು ಶ್ಲಾಘನೀಯವಾಗಿದೆ” ಎಂದರು.
ಕಾರ್‍ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಕನ್ನಡಕವನ್ನು ವಿತರಿಸಲಾತು. ಪ್ರಸಾದ್ ನೇತ್ರಾಲಯದ ಸಂಸ್ಥಾಪಕರಾದ ಡಾ| ಕೃಷ್ಣಪ್ರಸಾದ್ ಇವರನ್ನು ವಿದ್ಯಾಕೇಂದ್ರದ ಪ್ರಮುಖರು ಸನ್ಮಾನಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ ಹಾಗೂ ಪ್ರಸಾದ್ ನೇತ್ರಾಲಯದ ಪಿಆರ್‌ಒ ಮಧುಕರ್ ಮತ್ತು ಸಹಾಯಕರು ಉಪಸ್ಥಿತರಿದ್ದರು.
ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ವಂದಿಸಿದರು. ಪ್ರೌಢಶಾಲೆಯ ಕಲಾ ಶಿಕ್ಷಕರಾದ ಜಿನ್ನಪ್ಪ ಏಳ್ತಿಮಾರ್ ಕಾರ್‍ಯಕ್ರಮವನ್ನು ನಿರ್ವಹಿಸಿದರು.