ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್(ರಿ) ಕಲ್ಲಡ್ಕ, ಇದರ ಆಶ್ರಯದಲ್ಲಿ ನಡೆಯುವ ಸರಸ್ವತಿ ಶಿಶುಮಂದಿರ ನಾಟಿ ಕೊಪ್ಪಳಕೋಡಿ, ನರಿಕೊಂಬು ಇದರ ನೂತನ ಕಟ್ಟಡದ ಶಿಲಾನ್ಯಾಸ ದಿನಾಂಕ ೩೧.೦೧.೨೦೧೫ ಶನಿವಾರದಂದು ನೆರವೇರಿತು. ಶಿಶುಮಂದಿರದ ಕಟ್ಟಡದ ಶಿಲಾನ್ಯಾಸವನ್ನು ಸಾವಿತ್ರಿ ಸೋಮಯಾಜಿ ಮತ್ತು ಮುರಳೀಧರ ರಮಣಿಯವರು ಹಾಗೂ ಶಿಶುಮಂದಿರದ ಪಾಕಶಾಲಾ ಕಟ್ಟಡದ ಶಿಲಾನ್ಯಾಸವನ್ನು ಮುರಳೀಧರ ಉಡುಪ ಮತ್ತು ಜಗನ್ನಾಥ ಬಂಗೇರ ನಿರ್ಮಲ್ ಇವರು ನೆರವೇರಿಸಿಕೊಟ್ಟರು.
ಮಕ್ಕಳೆಂದರೆ ದೇವರು. ಮಕ್ಕಳ ಒಳಗೇ ದೇವರಿದ್ದಾರೆ. ತುಂಬಾ ವಿದ್ಯಾವಂತರಾಗಿರುತ್ತಾರೆ. ಈಗೀಗ ತಂದೆ ತಾಯಿಗಳ ಒತ್ತಡಕ್ಕೆ ಮಣಿದು ತಮ್ಮ ಮನಸ್ಸಿಗೆ ವಿರುದ್ದವಾಗಿ ಮಕ್ಕಳು ಕಲಿಯುತ್ತಾರೆ. ಮಾತ್ರವಲ್ಲದೆ ಇಂಗ್ಲೀಷ್‌ನ ವ್ಯಾಮೋಹದಿಂದ ಮಕ್ಕಳಲ್ಲಿ ಶೃದ್ಧೆ, ಪ್ರೀತಿ ಕಡಿಮೆಯಾಗಿದೆ.
ಮಗುವಿಗೆ ತನ್ನಲಿರುವ ಪ್ರತಿಭೆಯನ್ನು ಹೊರಗೆ ಹಾಕಲು ಒಂದು ಅವಕಾಶಬೇಕು. ಈ ಅವಕಾಶ ಮನೆ, ಶಾಲೆ ಎಲ್ಲಿಯೂ ಸಿಗುವುದಿಲ್ಲ ಆದ್ದರಿಂದ ಮಗುವಿನ ಆಸಕ್ತಿ ಅಭಿರುಚಿ ಪ್ರತಿಭೆ ಗುರುತಿಸಿ ಅದಕ್ಕೆ ಬೇಕಾದ ರೀತಿಯಲ್ಲಿ ಸ್ವಾತಂತ್ರ್ಯದಿಂದ ಬೆಳೆಸುವ ಕೆಲಸ ಶಿಶುಮಂದಿರದ ಕಡೆಯಿಂದ ನಡೆಯುತ್ತದೆ.
ಮನೆಯಲ್ಲಿ ತುಂಬು ಕುಟುಂಬ ವ್ಯವಸ್ಥೆ ಈಗ ತುಂಬಾ ಕಡಿಮೆ ಇದೆ ಆದ್ದರಿಂದ ಮಗುವಿಗೆ ಹಿರಿಯರ ನಡವಳಿಕೆ, ಕಥೆ, ವಿಷಯ, ಪದ್ಯ ಮುಂತಾದ ಸಂಗತಿಗಳನ್ನು ಹೇಳುವವರು ಇಲ್ಲ ಆದ್ದರಿಂದ ಇಂತಹ ವಿಷಯಗಳನ್ನು ಈ ಶಿಶುಮಂದಿರ ಕೊಡುವ ಕಾರ‍್ಯ ಮಾಡುತ್ತದೆ.
ತ್ಯಾಗ ಸಮರ್ಪಣೆ ಮಾಡಿರುವ ಅನೇಕ ಘಟನೆ, ಕಥೆ ತಿಳಿದಾಗ ಮಗುವಿನಲ್ಲಿ ಊರು ರಕ್ಷಣೆ , ದೇಶ ರಕ್ಷಣೆ ಮಾಡಲು ಸಿದ್ದರಾಗುತ್ತಾರೆ ಅಂತಹ ಮಕ್ಕಳು ನಿರ್ಮಾಣ
ಆಗಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ, ರಾ.ಸ್ವ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು. ವೇದಿಕೆಯಲ್ಲಿ ಅಧ್ಯಕ್ಷರಾಗಿ ಶ್ರೀ ಗಣೇಶ ಸೋಮಯಾಜಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ‍್ಯಕ್ರಮದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರು ಸುಮತಿ ಸದಾನಂದ, ನಿವೃತ್ತ ಮುಖ್ಯ ಶಿಕ್ಷಕರು ನೀಲಮ್ಮ ಶಂಭೂರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೌಮ್ಯ ಮರ್ದೋಳಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.
ಸರಸ್ವತಿ ಶಿಶುಮಂದಿರ ಸಂಚಾಲಕ ದಿವಾಕರ ಸ್ವಾಗತಿಸಿ, ಅಧ್ಯಕ್ಷರು ರಘು ಸಪಲ್ಯ ವಂದಿಸಿದರು. ಪುರುಷೋತ್ತಮ ಸಾಲ್ಯಾನ್ ಕಾರ‍್ಯಕ್ರಮ ನಿರೂಪಿಸಿದರು.