Archive for January, 2015

ಗಣರಾಜ್ಯೋತ್ಸವ ದಿನಾಚರಣೆ

Tuesday, January 27th, 2015
ಗಣರಾಜ್ಯೋತ್ಸವ ದಿನಾಚರಣೆ

ದಿನಾಂಕ 26.01.2015ನೇ ಸೋಮವಾರದಂದು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಗಣರಾಜ್ಯೋತ್ಸವ ಕಾರ‍್ಯಕ್ರಮ ನೆರವೇರಿತು. ಕಾರ‍್ಯಕ್ರಮದಲ್ಲಿ ಶ್ರೀ ಗಣೇಶ್ ಬಂಟ್ವಾಳ ಉದ್ಯಮಿಗಳು ಧ್ವಜಾರೋಹಣಗೈದು ಶುಭಹಾರೈಸಿದರು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ, ಪದವಿ ವಿಭಾಗದ ವಿದ್ಯಾರ್ಥಿಗಳಿಂದ ಘೋಷ್ ತಾಳಕ್ಕೆ ಸಾಮೂಹಿಕ ಯೋಗ ವ್ಯಾಯಾಮ ಪ್ರದರ್ಶನ ನಡೆಯಿತು. ಕಾರ‍್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರಭಟ್ ಕಲ್ಲಡ್ಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಸಂತಮಾಧವ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ ಕಣಂತೂರು ಉಪಸ್ಥಿತರಿದ್ದರು.

ಸರಸ್ವತಿ ಶಿಶುಮಂದಿರ – ನೂತನ ಕಟ್ಟಡದ ಶಿಲಾನ್ಯಾಸ

Thursday, January 22nd, 2015
ಸರಸ್ವತಿ ಶಿಶುಮಂದಿರ - ನೂತನ ಕಟ್ಟಡದ ಶಿಲಾನ್ಯಾಸ

SARAYU DECEMBER 2014

Tuesday, January 20th, 2015

SARAYU DECEMBER 2014

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೃತಿ ಪ್ರಥಮ ಸ್ಥಾನ

Tuesday, January 20th, 2015
 ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೃತಿ ಪ್ರಥಮ ಸ್ಥಾನ

ಶಾಂತಿವನ ಟ್ರಸ್ಟ್, ಶ್ರೀ ಧ.ಮ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಏರ್ಪಡಿಸಲಾದ ಜ್ಞಾನ ಸಿಂಧೂರ ಪುಸ್ತಕಾಧಾರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀರಾಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥೀನಿ ಕು. ಕೃತಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.

SARAYU NOVEMBER 2014

Tuesday, January 20th, 2015

SARAYU NOVEMBER 2014

ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ

Saturday, January 17th, 2015
ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ

ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ ಬಂಟ್ಟಾಳ.೧೫, ಜ: ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ. ಪಾವಿತ್ರ್ಯತೆ, ಸೇವೆ, ಸಹನೆ, ತ್ಯಾಗ, ಶೀಲ, ವಿವೇಕವಾದ ಶಕ್ತಿಯಿಂದ ಭಾರತ ನವಭಾರತವಾಗುತ್ತದೆ ಎಂದು ಕಲ್ಲಡ್ಕ ಶ್ರೀ ರಾಮ ಹೈಸ್ಕೂಲು ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ‍್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ಕಾಲೇಜಿನ ಪದವಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ […]

ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ‍್ಯಗಾರ

Wednesday, January 14th, 2015
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಕಾರ‍್ಯಗಾರ

ಬಂಟ್ವಾಳ ತಾಲೂಕು ಪ್ರೌಢಶಾಲಾ ವಿಭಾಗದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ದೈಹಿಕ ಶಿಕ್ಷಣ ಶಿಕ್ಷಕರಂದು ದಿನದ ಕಾರ‍್ಯಗಾರ ದಿನಾಂಕ 14.1.2015ರಂದು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು. ಸ್ವಸ್ಥ ಶರೀರದ ಸ್ವಸ್ಥ ಮನಸ್ಸಿನ ವ್ಯಕ್ತಿಗಳ ನಿರ್ಮಾಣದ ಮೂಲಕ ಸ್ವಸ್ಥ ಸಮಾಜ ರೂಪುಗೊಳ್ಳುತ್ತದೆ. ಅಂತಹ ಕಾರ‍್ಯದಲ್ಲಿ ಶಾರೀರಿಕ ಶಿಕ್ಷಣ ಶಿಕ್ಷಕರು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಶಾಲೆಯ ಪ್ರತೀ ವಿದಾರ್ಥಿಯನ್ನು ಗಮನಿಸಿ, ಆಯ್ಕೆ ಮಾಡಿ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ, ಒಲಿಂಪಿಕ್ಸ್ ಕ್ರೀಡಾಪಟುಗಳನ್ನಾಗಿ ಮಾಡಲು ಪ್ರಯತ್ನಿಸಿ ಎಂದು ರಾ.ಸ್ವ.ಸಂಘದ […]

ಪ್ರೌಢಶಾಲೆಯಲ್ಲಿ Online IT Quiz ಮತ್ತು ಕಂಪ್ಯೂಟರ್ ತರಬೇತಿ

Saturday, January 10th, 2015
ಪ್ರೌಢಶಾಲೆಯಲ್ಲಿ Online IT Quiz  ಮತ್ತು ಕಂಪ್ಯೂಟರ್ ತರಬೇತಿ

ಶ್ರೀರಾಮ ಪ್ರೌಢಶಾಲೆಯಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ವಿದ್ಯಾರ್ಥಿಗಳಿಗೆ  ನಡೆಸಲಾಯಿತು. ಒಟ್ಟು ೧೪ವಿದ್ಯಾರ್ಥಿಗಳು ಬೆಳಿಗ್ಗೆ ೯.೩೦ರಿಂದ ೧೧.೩೦ರವರೆಗೆ ತರಬೇತಿಯನ್ನು ಪಡೆದುಕೊಂಡರು. ಗಣಕ ಶಿಕ್ಷಕ ಕುಶಾಲಪ್ಪ, ಶಿಕ್ಷಕಿಯರಾದ ಭವ್ಯ, ಯಶಸ್ವಿನಿ, ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ವಸಂತ ಮಾಧವ ಮತ್ತು ಗೋಳ್ತಮಜಲು ಶಾಲಾ ಶಿಕ್ಷಕರು ಸೀತಾರಾಮ ಭಟ್ ಉಪಸ್ಥಿತರಿದ್ದರು.

cycle distribute – ಸೈಕಲ್ ವಿತರಣೆ

Monday, January 5th, 2015
cycle distribute - ಸೈಕಲ್ ವಿತರಣೆ

ಸೈಕಲ್ ವಿತರಣೆ ದಿನಾಂಕ: 5.1.2014 ಕರ್ನಾಟಕ ಸರ್ಕಾರದಿಂದ2014-15ರ ಶೈಕ್ಷಣಿಕ ವರ್ಷದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ತಾಲೂಕು ಪಂಚಾಯತ್ ಸದಸ್ಯರು ದಿನೇಶ್ ಅಮ್ಟೂರು, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಸಾಲಿಯಾನ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಸಂತಮಾಧವ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಶುಭ ಹಾರೈಸಿದರು.

sri rama vidyakendra kalladka – vinayaka bhat mururu

Friday, January 2nd, 2015

SRI RAMA VDYAKENDRA KALLADKA- VINAYAKA BHAT MURURU KANNADA PRABHA