ಸಂಸ್ಕೃತ ಸಾಹಿತ್ಯ ಸಾಗರದಂತೆ. ಆಳಕ್ಕೆ ಇಳಿದಾಗ ಮುತ್ತು ರತ್ನಗಳಂತಿರುವ ಜ್ಞಾನ ಸಂಪತ್ತು ಲಭಿಸುತ್ತದೆ ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕೃತ ಭಾರತೀ ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಂಸ್ಕೃತ ಕಠಿಣ ಭಾಷೆಯಲ್ಲ, ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿಲ್ಲ. ವೈದಿಕ ಸಾಹಿತ್ಯಗಳು ಕಾವ್ಯಗಳನ್ನು ಅಧ್ಯಯನ ಮಾಡಿದಾಗ ಸಂಸ್ಕೃತ ಜನಸಾಮಾನ್ಯರ ಭಾಷೆಯಾಗಿದ್ದು, ಕಾಲಕ್ರಮೇಣ ರಾಜಾಶ್ರಯವಿಲ್ಲದ ಕಾರಣ ಸಂಸ್ಕೃತಕ್ಕೆ ಹಿನ್ನಡೆಯಾಯಿತು. ಸಂಸ್ಕೃತ […]
ದಿನಾಂಕ ೧೪.೦೪.೨೦೧೫ ರಂದು ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ವೇದವ್ಯಾಸ ಧ್ಯಾನಮಂಟಪದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ರೂಪಕಲಾ ಮಾತಾಜಿ ಇವರು ಅಂಬೇಡ್ಕರರ ಜೀವನದ ಘಟನೆಗಳನ್ನು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಅಮ್ಟೂರು ಹಿಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆಯ ಬಗ್ಗೆ ಹಾಗೂ ಪ್ರಸ್ತುತ ದಿನಗಳಲ್ಲಿ ಆದ ಬದಲಾವಣೆಗಳನ್ನು ತಿಳಿಸುತ್ತಾ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಗಿರಿ ಸತೀಶ್ ಭಟ್ ಹಾಗೂ ಮುಖ್ಯೋಪಾಧ್ಯಾರಾದ ರವಿರಾಜ್ ಕಣಂತೂರ್ ಉಪಸ್ಥಿತರಿದ್ದರು.
ಡಾ| ಬಿ.ಆರ್. ಅಂಬೇಡ್ಕರ್‌ರವರು ಶೋಷಿತ ವರ್ಗದ ಭಾಗ್ಯದೇವತೆಯಾಗಿ ಶತಶತಮಾನಗಳಿಂದ ಸಮಾಜದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ, ಸಮಾಜದ ನೋವುಗಳನ್ನು ಸಹಿಸಿ, ಲಕ್ಷಾಂತರ ಶೋಷಿತವರ್ಗದ ಕಣ್ಣೀರು ಒರೆಸುವ, ಜೀವನವನ್ನೇ ಸವೆಸಿದ ರಾಷ್ಟ್ರಚಿಂತನೆಯೊಂದಿಗೆ, ರಾಷ್ಟ್ರ ಸಮರ್ಪಿತ ಜೀವನವನ್ನು ನಡೆಸಿದರು ಎಂದು ಶ್ರೀರಾಮ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ಶ್ರೀಮಾನ್ ಡಾ| ಬಿ.ಆರ್ ಅಂಬೇಡ್ಕರ್ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಅಂಬೇಡ್ಕರ್‌ರವರು ನಡೆಸಿದ ಹೋರಾಟ, ಆಡಳಿತದಲ್ಲಿ ಮಾಡಿದ ಸಾಧನೆ, ಹಾಗೂ ಕಾನೂನುಗಳ ಬಗ್ಗೆ ಶ್ರೀ ರಾಜೇಶ, ಕ್ಷೇತ್ರ ಸಂಪನ್ಮೂಲ […]